ಟ್ರಾಫಿಕ್ ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಸ್ಮಾರ್ಟ್ ಆದ ಬೆಂಗಳೂರು ಪೊಲೀಸರು…!!

0
693

Kannada News | kannada Useful Tips

ಬೆಂಗಳೂರಿನಲ್ಲಿ ಅತಿಯಾಗಿ ಕಾಡುವ ಸಮಸ್ಯೆಯೆಂದರೆ ಅದು ಟ್ರಾಫಿಕ್. ಟ್ರಾಫಿಕ್ ನಿಂದಾಗಿ ಹಲವಾರು ಜನ ತಾವು ತಲುಪಬೇಕಾದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪುವುದಿಲ್ಲ, ಇನ್ನು ಅದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರು, ಅವರಿಗೆ ಬ್ರೇಕ್ ಹಾಕಲೆಂದೇ ಪೊಲೀಸ್ ಇಲಾಖೆ ಒಂದು ಹೊಸ ದಾರಿಯನ್ನು ಕಂಡುಕೊಂಡಿದೆ.

ಹೌದು, ಅತಿ ವೇಗವಾಗಿ ವಾಹನ ಚಾಲನೆ ಮಾಡಿ, ಸಿಗ್ನಲ್ ಜಂಪ್ ಮಾಡಿ, ಡ್ರಿಂಕ್ ಅಂಡ್ ಡ್ರೈವ್, ಹೆಲ್ಮೆಟ್ ಇಲ್ಲದೆ ಮನ ಬಂದಂತೆ ವಾಹನ ಚಲಾಯಿಸುವ ವಾಹನ ಚಾಲಕರಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಹೊಚ್ಚ ಹೊಸ ಸ್ಮಾರ್ಟ್ ಫೋನ್ ಡಿವೈಸ್ ಅನ್ನು ಜಾರಿಗೆ ತಂದಿದ್ದಾರೆ, ಅಂತಹುದೇನಿದೆ ವಿಶೇಷ ಅಂತ ನೀವೇ ನೋಡಿ.

ಟ್ರಾಫಿಕ್ ನಿಯಮ ಉಲ್ಲಂಘನೆ ದಾಖಲಿಸುವ ಆಪ್ ಅಳವಡಿಸಿರುವ ಈ ಹೊಸ ಸ್ಮಾರ್ಟ್‌ ಫೋನ್‌ಗಳು ವಾಹನದ ನಂಬರ್‌ ಪ್ಲೇಟ್‌ಗಳನ್ನು ತಕ್ಷಣ ಗುರುತಿಸಿ, ವಾಹನದ ಸಂಪೂರ್ಣ ಮಾಹಿತಿ ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿದ್ದು, ಎಷ್ಟೇ ವೇಗವಾಗಿ ಓಡುವ ವಾಹನದ ನಂಬರ್‌ ಪ್ಲೇಟ್‌ ಅನ್ನೂ ಸಹ ಸ್ಕ್ಯಾನ್ ಮಾಡಿ ತಕ್ಷಣ ಮಾಹಿತಿ ಒದಗಿಸುತ್ತದೆ.

ಈಗಾಗಲೇ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಹೊಸ ತಂತ್ರಜ್ಞಾನ ಉಳ್ಳ ಈ ಸ್ಮಾರ್ಟ್‌ಪೋನ್‌ಗಳನ್ನು ಹಿಡಿದು ಬೆಂಗಳೂರು ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕಲು ಕಾಯುತ್ತಿದ್ದಾರೆ. ಇನ್ನು ಮುಂದೆಯಾದರೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚಾರಿ ನಿಯಮವನ್ನು ಪಾಲಿಸಿ ತಮಗೂ ಮತ್ತು ಇತರರಿಗೂ ತೊಂದರೆ ಆಗದಿರುವ ಹಾಗೆ ಇರುವುದು ಒಳ್ಳೆಯದು.

Also Read: ಫೇಸ್ ಬುಕ್ ಬಳಕೆ: ಮಾಕ್ರ್ಸ್ ಕಡಿಮೆ ಆದೀತು !