ಆನ್ಲೈನ್ ಶಾಪಿಂಗ್ ಮಾಡವ ಮುನ್ನ ಎಚ್ಚರ; ಕಡಿಮೆ ಬೆಲೆಗೆ ಸಿಕ್ಕ ಡ್ರೆಸ್​ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡ ಮಹಿಳೆ.!

0
537

ಜನರು ಕಡಿಮೆ ಬೆಲೆಯಲ್ಲಿ ರಿಸ್ಕ್ ಇಲ್ಲದೆ ಮನೆಯಲ್ಲಿಯೇ ಖರೀದಿ ಮಾಡಲು ಆನ್ಲೈನ್ ಶಾಪಿಂಗ್ ಮಾಡಿ ವಂಚನೆಗೆ ಒಳಗಾಗುತ್ತಿರುವುದು ಹೆಚ್ಚಾಗುತ್ತಿದೆ. ಇದರಲ್ಲಿ ವಿದ್ಯಾವಂತರೆ ಹೆಚ್ಚು ಮೋಸ ಹೋಗುತ್ತಿರುವುದು ಕಂಡು ಬರುತ್ತಿದೆ. ಏಕೆಂದರೆ ರಸ್ತೆ, ಬಸ್ ಸೇರಿದಂತೆ ಔಟ್ ಡೋರ್ ನಲ್ಲಿ ಕಳ್ಳ ಮಾಡುತ್ತಿದ್ದ ಕಳ್ಳರು ಈಗ ಮನೆಯಲ್ಲಿಯೇ ಕುಳಿತು ವಂಚನೆ ಮಾಡುತ್ತಿದ್ದಾರೆ. ಇಂತಹದೆ ಒಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು. ಮಹಿಳೆಯೊಬ್ಬಳು 800 ರೂಪಾಯಿ ಡ್ರೆಸ್​ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡಿದ್ದಾಳೆ.

Also read: ಮೊಬೈಲ್​ ಮೂಲಕ ಹಣ ವರ್ಗಾವಣೆ ಮಾಡುವ ಮುನ್ನ ಎಚ್ಚರ; ಹೊಸ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ ಸೈಬರ್ ಕಳ್ಳರು..

ಹೌದು ಆನ್ಲೈನ್ ವ್ಯವಹಾರ ಮಾಡುವ ವೇಳೆ ಎಷ್ಟೇ ಎಚ್ಚರ ವಹಿಸಿದರು ಕಡಿಮೆಯಾಗಿದೆ, ಸಿಲಿಕಾನ್​ ಸಿಟಿಯಲ್ಲಿ ಒಂದು ಮೋಸದ ಜಾಲವೇ ಇದೆ. ಇಂಥಹ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತವೆ. ಅದರಂತೆ ಗೊಟ್ಟಿಗೆರೆಯ ನಿವಾಸಿ ಶ್ರವಣಾ ಅವರು ಆನ್‍ಲೈನ್ ವಂಚಕರ ಜಾಲಕ್ಕೆ ಬಿದ್ದು ಮೋಸ ಹೋಗಿದ್ದಾರೆ. ನವೆಂಬರ್ 8ರಂದು ಮಹಿಳೆ ಮೊಬೈಲ್‍ನಲ್ಲಿ ಇ-ಕಾಮರ್ಸ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು, ಅದರಲ್ಲಿ ಸುಮಾರು 800 ರೂ. ಬೆಲೆಯ 1 ಕುರ್ತಾ ಆರ್ಡರ್ ಮಾಡಿದ್ದರು. ಆದರೆ ಆರ್ಡರ್ ಡೆಲಿವರಿ ಸಮಯ ಮುಗಿದ ಮೇಲೂ ಕುರ್ತಾಗಳು ಮಹಿಳೆಗೆ ತಲುಪಿರಲಿಲ್ಲ.

Also read: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಬ್ರ್ಯಾಂಡೆಂಡ್ ಹೆಸರಿನಲ್ಲಿ ಕಡಿಮೆ ಬೆಲೆಗೆ ಸಿಗುವ ಡೂಪ್ಲಿಕೇಟ್ ವಸ್ತುಗಳನ್ನು ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.!

ಆಗ ಆ್ಯಪ್‍ನಲ್ಲಿ ಇದ್ದ ಕಸ್ಟಮರ್ ಕೇರ್ ನಂಬರ್ ಗೆ ಮಹಿಳೆ ಕರೆ ಮಾಡಿ ವಿಚಾರಿಸಿದರು. ಈ ವೇಳೆ ಕರೆಯಲ್ಲಿ ಮಾತನಾಡಿದ ಸಿಬ್ಬಂದಿ, ಈ ಬಗ್ಗೆ ತಿಳಿದು ಕರೆ ಮಾಡುತ್ತೇವೆ. ಆದಷ್ಟು ಬೇಗ ನಿಮ್ಮ ಆರ್ಡರ್ ಡೆಲಿವರಿಯಾಗುತ್ತೆ ಎಂದು ನಂಬಿಸಿದ್ದಾನೆ. ಬಳಿಕ ನಿಮ್ಮ ಬ್ಯಾಂಕ್ ಆಕೌಂಟ್ ಮಾಹಿತಿ ಕೊಡಿ ಎಂದು ಮಹಿಳೆಗೆ ಹೇಳಿದ್ದಾನೆ. ಬಹುಶಃ ನನಗೆ ಸಹಾಯ ಮಾಡಲು ಸಿಬ್ಬಂದಿ ಕೇಳುತ್ತಿದ್ದಾನೆ ಎಂದು ಮಹಿಳೆ ಕೂಡ ಆತ ಕೇಳಿದ ಎಲ್ಲಾ ಮಾಹಿತಿ ನೀಡಿದ್ದಾರೆ. ಮಹಿಳೆಯಿಂದ ಬ್ಯಾಂಕ್ ಆಕೌಂಟ್ ಮಾಹಿತಿ ಪಡೆದ ಬಳಿಕ ಅವರ ಫೋನಿಗೆ ಒಂದು ಓಟಿಪಿ ಬಂದಿತ್ತು. ಅದನ್ನೂ ಕೂಡ ಹೇಳಿ ಎಂದು ಸಿಬ್ಬಂದಿ ಕರೆ ಮಾಡಿ ಕೇಳಿದಾಗ ಓಟಿಪಿಯನ್ನು ಮಹಿಳೆ ಹೇಳಿದ್ದರು. ನಂತರ ನಿಮ್ಮ ಕುರ್ತಾ ನಿಮಗೆ ಬಂದು ಸೇರುತ್ತದೆ ಎಂದು ಸಿಬ್ಬಂದಿ ಹೇಳಿ ಕರೆ ಕಟ್ ಮಾಡಿದ್ದಾನೆ.

ಮಹಿಳೆ ಕೂಡ ಸಿಬ್ಬಂದಿ ಮಾತನ್ನು ನಂಬಿ ಕುರ್ತಾ ಕೆಲ ದಿನಗಳಲ್ಲಿ ಡೆಲಿವರಿಯಾಗುತ್ತದೆ ಎಂದುಕೊಂಡಿದ್ದರು. ಆದರೆ ಓಟಿಪಿ ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ಮಹಿಳೆ ಅಕೌಂಟ್‍ನಲ್ಲಿದ್ದ 79,600 ರೂ. ಹಣ 4 ಕಂತಿನಲ್ಲಿ ಕಡಿತಗೊಂಡಿದೆ. ಹಣ ಕಳೆದುಕೊಂಡ ಬಳಿಕ ತನಗೆ ಮೋಸ ಮಾಡಲಾಗಿದೆ ಎನ್ನುವುದು ಮಹಿಳೆಗೆ ಗೊತ್ತಾಗಿದ್ದು, ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆನ್‍ಲೈನ್ ಶಾಪಿಂಗ್ ಮೋಹಕ್ಕೆ ಮಹಿಳೆ ಹಣವನ್ನು ಕಳೆದುಕೊಂಡು ಮೋಸಹೋಗಿದ್ದಾರೆ. ಕುರ್ತಾದ ಆಸೆ ತೋರಿಸಿ ಮಹಿಳೆಗೆ ವಂಚಕರು ಪಂಗನಾಮ ಹಾಕಿದ್ದಾರೆ.

Also read: ಜೊಮಾಟೋ, ಸ್ವಿಗ್ಗಿ ಅಂತಹ ಆನ್‍ಲೈನ್ app-ಗಳ ಮೂಲಕ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್; ಹೆಚ್ಚು ರುಚಿಯಿರುವ ಆನ್ಲೈನ್ ಫುಡ್ ಟಾಯ್ಲೆಟ್-ನಲ್ಲಿ ತಯಾರಾಗುತ್ತೆ..

ಸದ್ಯ ಯುವತಿ ಶ್ರವಣ ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದು, ಮೋಸ ಹೋದ ಪರಿಯನ್ನು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಅದಕ್ಕಾಗಿ ಯಾವುದೇ ಶಾಪಿಂಗ್, ಬುಕಿಂಗ್ ಮಾಡುವಾಗ OTP ಕೇಳಿದರೆ ಕೊಡಬೇಡಿ.