ಕಡಿಮ ಖರ್ಚಿನ ನಗರ: ನಮ್ಮ ಬೆಂಗಳೂರಿಗೆ 3ನೇ ಸ್ಥಾನ

0
580

ನವದೆಹಲಿ: ವಿಶ್ವಾದ್ಯಂತ ತುಂಬಾ ಕಡಿಮೆ ಖರ್ಚಿನ ಹತ್ತು ನಗರಗಳ ಪೈಕಿ ಭಾರತದ ನಾಲ್ಕು ನಗರಗಳು ಸ್ಥಾನ ಪಡೆದಿದ್ದು, ಬೆಂಗಳೂರು 3ನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೆ, ದುಬಾರಿ ನಗರಗಳ ಪಟ್ಟಿಯಲ್ಲಿ ಸತತ 4ನೇ ಬಾರಿಗೆ ಸಿಂಗಾಪುರ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಇಕಾನಾಮಿಸ್ಟ್ ಇಂಟಲಿಜೆನ್ಸ್ ಯೂನಿಟ್(ಇಐಯು) ವರದಿ ಮಾಡಿದೆ.

source: globaltravelservices.co.in

ಜಗತ್ತಿನಾದ್ಯ 10 ಕಡಿಮೆ ಖರ್ಚಿನ ನಗರಗಳ ಪೈಕಿ ಬೆಂಗಳೂರು(3), ಚೆನ್ನೈ(6), ಮುಂಬೈ(7) ಮತ್ತು ನವದೆಹಲಿ(10) ಸ್ಥಾನ ಪಡೆದುಕೊಂಡಿವೆ ಎಂದು ಇಐಯು ಹೇಳಿದೆ.

ಅಲ್ಮಟಿ ವಿಶ್ವದ ಕಡಿಮೆ ಖರ್ಚಿ ನಗರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ನಂತರದಲ್ಲಿ ಲಾಗೊಸ್ ಪಡೆದುಕೊಂಡಿದೆ. ಕರಾಚಿ(4), ಅಲ್ಗಿರಸ್(5), ಕೀವ್(8) ಮತ್ತು ಬುಚರೆಸ್ಟ್(9). ವಿಶ್ವದ ದುಬಾರಿ ನಗರಗಳು ಮತ್ತು ಕಡಿಮೆ ಖರ್ಚಿನ ನಗರಗಳಲ್ಲಿ ಏಷ್ಯಾ ಭಾಗದ ನಗರಗಳು ಮುಖ್ಯ ಪಾತ್ರ ವಹಿಸಿವೆ. ಸೇವೆಗಳ ದರ ಗಮನಿಸಿ ಜೀವನ ನಿರ್ವಹಣಾ ವೆಚ್ಚದ ಸಮೀಕ್ಷೆ ನಡೆಸಲಾಗಿದೆ ಎಂದು ಜಾಗತಿಕ ಜೀವನ ನಿರ್ವಹಣಾ ವೆಚ್ಚ 2017ರ ವರದಿ ತಿಳಿಸಿದೆ.

ದುಬಾರಿ ನಗರಗಳ ಪೈಕಿ ಸಿಂಗಾಪುರ ಮೊದಲ ಸ್ಥಾನದಲ್ಲಿದ್ದು, ಹಾಂಗ್‍ಕಾಂಗ್ ಮತ್ತು ಝುರಿಕ್ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನಗಳನ್ನು ಪಡೆದುಕೊಂಡಿವೆ. ಟೊಕಿಯೊ(4), ಓಸಕ(5), ಸಿಯೋಲ್(6), ಜಿನಿವಾ(7), ಪ್ಯಾರಿಸ್(8), ನ್ಯೂಯಾರ್ಕ್(9) ಮತ್ತು ಕೊಪೆನ್‍ಹಗೆನ್(10) ಸ್ಥಾನದಲ್ಲಿವೆ.

ಏಷ್ಯಾದಲ್ಲಿ ಹಣಕ್ಕೆ ಉತ್ತಮ ಮೌಲ್ಯವು ವಿಶೇಷವಾಗಿ ದಕ್ಷಿಣ ಏಷ್ಯಾ ನಗರಗಳಲ್ಲಿ ಕಂಡುಬಂದಿದ್ದು, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನದ ನಗರಗಳಲ್ಲಿ ಕಂಡಿಬಂದಿವೆ. ಬೆಂಗಳೂರು, ಚೆನ್ನೈ, ಕರಾಚಿ, ಮುಂಬೈ ಮತ್ತು ನವದೆಹಲಿಗಳು 10 ಕಡಿಮೆ ನಗರಗಳಲ್ಲಿವೆ ಎಂದು ಸಮೀಕ್ಷೆ ತಿಳಿಸಿದೆ.