ಹೆಲ್ಮೆಟ್ ಹಾಕಿಲ್ಲದವರಿಗೆ ಶಾಕ್ ನೀಡಿದ ಬೆಂಗಳೂರು ಪೊಲೀಸರು!!

0
2842

ನೀವು ಗಾಡಿಯಲ್ಲಿ ಹೊರಟಾಗ ಅನಿವಾರ್ಯ ಕಾರಣವೇ ಆಗಲಿ.. ಅಥವಾ ಫ್ಯಾಷನ್‌ಗಾಗಿಯೇ ಆಗಲಿ ಹೆಲ್ಮೆಟ್ ಹಾಕಿಕೊಳ್ಳದೇ ರಸ್ತೆಯಲ್ಲಿ ಹೊರಟಾಗ.. ನೀವು ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.ನೀವು ಸಿಕ್ಕು ಹಾಕಿಕೊಂಡ ಮೇಲೆ ಅಯ್ಯೋ ಇವರಿಗೆ ದುಡ್ಡು ಕೊಡುವ ಬದಲು ಹೆಲ್ಮೆಟ್ ಹಾಕಿಕೊಳ್ಳುವುದೇ ಉತ್ತಮ ಎನ್ನುವದು ಅನಿಸದೇ ಇರದು.

ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇತ್ತೀಚೀಗೆ ಪೊಲೀಸರು ಹೆಲ್ಮೆಟ್ ಇಲ್ಲದ ಚಾಲಕರಿಗೆ ಶಾಕ್ ನೀಡುವ ಬದಲು, ಮಂದಹಾಸ ಮೂಡಿಸುವ ಕೆಲಸ ಮಾಡಿದ್ದಾರೆ. ಅದೇನಪ್ಪ ಅನ್ನುವ ಕುತೂಹಲ ನಿಮ್ಮ ನಮ್ಮಲಿಇರುವುದು ಸಾಮಾನ್ಯ. ಪೊಲೀಸರೆ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ಚಾಲಕರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡಿದ್ದಾರೆ.

ವಾಹನ ಸವಾರರಿಗೆ ಇದು ಆಶ್ಚರ್ಯದ ಸಂಗತಿ. ಏಕೆಂದರೆ ದಂಡ ಹಾಕುವ ಪೊಲೀಸರೆ ಉಚಿತವಾಗಿ ಹೆಲ್ಮೆಟ್ ನೀಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ‘ವಿಶ್ವ ಹೆಡ್ ಇಂಜ್ಯುರಿ ಡೇ’ ಅಂಗವಾಗಿ ಬೆಂಗಳೂರಿನ ಟ್ರಾಫಿಕ್ ಪೊಲೀಸ್ಸಹಯೋಗದೊಂದಿಗೆ ಫೋರ್ಟಿಸ್ ಆಸ್ಪತ್ರೆ ಬೆಂಗಳೂರಿನ ನಾನಾ ಭಾಗಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೋಂಡಿತ್ತು.

ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ಚಾಲಾಕರನ್ನು ತಡೆದು… ರೀ ನಿಲ್ಲಿ ನಿಲ್ಲಿ ಇಂದು ವಿಶ್ವ ಹೆಡ್ ಇಂಜ್ಯುರಿ ಡೇ… ಹೀಗಾಗಿ ನಿಮ್ಮ ಮೇಲೆ ಇಂದು ಮಾತ್ರ ದಂಡ ಹಾಕುವುದಿಲ್ಲ… ಬದಲಾಗಿ ನಿಮಗೆ ಹೊಸ ಹೆಲ್ಮೆಟ್ ನೀಡುತ್ತವೆ…ಹೆಲ್ಮೆಟ್ ಫ್ರೀ ನಿಡ್ತಾರೆ ಎಂದು ತಿಳಿದು ಕೊಂಡು ನಾಳೆಯೂ ಹೀಗೆ ಬಂದಲ್ಲಿ ಡಬಲ್ ದಂಡ ಹಾಕುತ್ತೇವೆ ಹುಷಾರ್ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ ನನ್ನ ಹೆಲ್ಮೆಟ್ ಕಳುವಾಗಿತ್ತು, ಈಗ ತೆಗೆದುಕೊಳ್ಳಲು ಹೊರಟ್ಟಿದೆ ಎಂದು ಚಾಲಕರು ನೆಪ ಹೇಳಿದರೆ, ಇನ್ನು ಕೆಲವರು ನಾಳೆಯಿಂದ ಹಾಕಿಕೊಂಡು ಬರುವುದಾಗಿ ತಿಳಿಸಿದರು.