ಬೆಂಗಳೂರು ೩ನೇ ಶ್ರೀಮಂತರ ತವರು !!

0
824
ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎಂದೆಲ್ಲಾ ಪ್ರಖ್ಯಾತಿ ಪಡೆದ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಗರಿ ಸಂದಿದೆ. ಅತಿ ಹೆಚ್ಚು ಶ್ರೀಮಂತರು ವಾಸವಾಗಿರುವ ಮೂರನೇ ನಗರ ಎಂಬ ಖ್ಯಾತಿ ಕೆಂಪೆಗೌಡ ಅವರು ಕಟ್ಟಿದ ಬೆಂಗಳೂರು ಪಾಲಾಗಿದೆ. ಅತಿ ಹೆಚ್ಚು ಶ್ರೀಮಂತರು ವಾಸವಾಗಿರುವ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗೆ ೩ನೇ ಸ್ಥಾನ ಲಭಿಸಿರುವುದು ಹೆಮ್ಮೆ ತಂದಿದೆ.Image result for bangalore rich
ಈ ಸಾಲಿನಲ್ಲಿ ವಾಣಿಜ್ಯ ನಗರಿ ಮುಂಬೈ ಮೊದಲ ಸ್ಥಾನದಲ್ಲಿ ರಾರಾಜಿಸುತ್ತಿದೆ. ಕುಬೇರರನ್ನು ತನ್ನ ಒಡಲಲ್ಲಿ ಸಾಕುತ್ತಿರುವ ಮಾಯಾನಗರಿ ೪೬ ಸಾವಿರ ಮಿಲಿಯನೇರ್, ೨೮ ಬಿಲಿಯನನೇರ್‌ಗಳಿಗೆ ಆಶ್ರಯ ನೀಡಿದ್ದು, ನಂಬರ್ ೧ ಸ್ಥಾನದಲ್ಲಿ ಭದ್ರವಾಗಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ನಂತರದ ಸ್ಥಾನವನ್ನು ಅಲಂಕರಿಸಿದೆ. ಈ ರಾಜ್ಯದಲ್ಲಿ ಶ್ರೀಮಂತರ ಬಳಿ ಸುಮಾರು ೩೦ ಲಕ್ಷ ಕೋಟಿ ರೂ. ಸಂಪತ್ತು ಇದೆ.Image result for bangalore skyscraper
ಹಾಗಿದ್ದರೆ ಬೆಂಗಳೂರಿನಲ್ಲಿ ಇರುವ ಮಿಲೆಯನೇರ್‌ಗಳು ಹಾಗೂ ಬಿಲಿಯನೇರ್‌ಗಳು ಎಷ್ಟು ಎಂಬುದಕ್ಕೂ ಉತ್ತರ ಸಿಕ್ಕಿದೆ. ಐಟಿ ರಾಜ್ಯಧಾನಿಯಲ್ಲಿ ೭೭೦೦ ೬.೧ ಕೋಟಿ ಹೊಂದಿದವರು ಇದ್ದರೆ, ೮ ಜನ ೬೭೦೦ ಕೋಟಿ ಆಸ್ತಿಯ ಒಡೆತನವನ್ನು ಹೊಂದಿದ್ದಾರೆ ಎಂದು ನ್ಯೂ ವರ್ಲ್ಡ್ ವೆಲ್ತ್ ವರದಿ ತಿಳಿಸಿದೆ.
೨೦೧೬ರ ಅಂತ್ಯದಲ್ಲಿ ಹಾಕಿದ ಲೆಕ್ಕಾ ಚಾರದ ಪ್ರಕಾರ ದೇಶದಲ್ಲಿ ಒಟ್ಟು ೨.೬೪ ಲಕ್ಷ ಮಿಲಿಯನೇರ್‌ಗಳು ಹಾಗೂ ೯೫ ಬಿಲಿಯನೇರ್‌ಗಳು ಇದ್ದು, ಒಟ್ಟು ೪೦೯ ಲಕ್ಷ ಕೋಟಿ ರೂ ಚರ ಹಾಗೂ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.
ಬಡ ರಾಷ್ಟ್ರ ಎಂದು ಕರೆಸಿಕೊಳ್ಳುವ ಭಾರತದಲ್ಲಿ ಶ್ರೀಮಂತರ ಬಳಿ ಇರುವ ಹಣ, ಬೇರೆಯವರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ.