ಬೆಂಗಳೂರಿನ ಈ ವಿಜ್ಞಾನಿಯ ಅದ್ಭುತ ಸಾಧನೆಯ ಬಗ್ಗೆ ಓದಿ ಬೆರಗಾಗಿ!!!

0
1234

ವಿಜ್ಞಾನಿ ಸಿ.ವಿ.ವಿಶ್ವೇಶ್ವರ ಭಾರತದವರು ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರು ನಿವಾಸಿಯಾಗಿದ್ದರು ಎಂಬುದೇ ಹೆಮ್ಮೆಯ ವಿಷಯ. 1938ರ ಮಾರ್ಚ್ 6ರಂದು ಜನಿಸಿದ ಭೌತಶಾಸ್ತ್ರ ವಿಜ್ಞಾನಿ ವಿಶ್ವೇಶ್ವರ ಅವರು `ಕಪ್ಪು ರಂಧ್ರ’ ವಿಷಯದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಇದೇ ವಿಷಯದಲ್ಲಿಯೇ ದಶಕಗಳ ಕಾಲ ವಿವಿಧ ಸಂಶೋಧನೆಗಳನ್ನು ನಡೆಸಿದವರು.ದೇಶದ ನಾನಾ ಭಾಗಗಳಲ್ಲಿ ತಾರಾಲಯಗಳಿದ್ದರೂ ವಿಭಿನ್ನವಾದ ತಾರಾಲಯ ರೂಪಿಸುವ ನಿಟ್ಟಿನಲ್ಲಿ ಬೆಂಗಳೂರು ತಾರಾಲಯದ ಸ್ಥಾಪಕ ನಿರ್ದೇಶಕರಾಗಿ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

Image result for c v vishveshwara
Image Credit: TheNewsMinute

ಈ ಕ್ಷೇತ್ರದಲ್ಲಿ ಹಲವಾರು ಗಣನೀಯ ಸಂಶೋಧನೆಗಳನ್ನು ನಡೆಸಿ ವಿಜ್ಞಾನಿಗಳಿಂದ ಮೆಚ್ಚುಗೆ ಪಡೆದವರು. ಆರಂಭದಿಂದಲೂ ಅಣುಭೌತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ಕೊಲಂಬಿಯಾ ವಿಸ್ವವಿದ್ಯಾಲಯದಲ್ಲಿ ರಾಬರ್ಟ್ ಫುಲ್ಲರ್ ಮಾರ್ಗದರ್ಶನದಲ್ಲಿ ಪ್ರಾಥಮಿಕ ಭೌತಶಾಸ್ತ್ರದ ಅಭ್ಯಾಸ ಆರಂಭಿಸಿದರು. ನಂತರ ಮ್ಯಾರಿಲ್ಯಾಂಡ್ ವಿವಿವಯಲ್ಲಿ ಚಾಲ್ರ್ಸ್ ಮಿಸ್ಟರ್ ಅವರೊಂದಿಗೆ ಜನರಲ್ ರಿಲೇಟಿವಿಟಿ ಕುರಿತು ಅಧ್ಯಯನ ನಡೆಸಿದರು.ತದನಂತರ ಬ್ಲಾಕ್‍ಹೋಲ್ ಕುರಿತ ಹೆಚ್ಚಿನ ಅಧ್ಯಯನಕ್ಕಾಗಿ ನ್ಯೂಯಾರ್ಕ್, ಬೋಸ್ಟನ್ ಮತ್ತು ಪಿಟ್ಸ್‍ಬರ್ಗ್ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸಿದರು.

ಕಪ್ಪು ಕುಳಿ ಬಗ್ಗೆ ಇವರು ಮಂಡಿಸಿದ ಸಂಶೋಧನೆಗೆ ಮ್ಯಾರಿ ಲ್ಯಾಂಡ್ ವಿಶ್ವವಿದ್ಯಾಲಯ ಪಿಎಚ್‍ಡಿ ನೀಡಿ ಗೌರವಿಸಿತ್ತು.ಕಪ್ಪು ರಂಧ್ರದ ಹೊರ ಭಾಗವಾದ ಎರ್ಗೋಸ್ಟಿಯರ್ ಕುರಿತು ಅಧ್ಯಯನ ನಡೆಸಿದವರಲ್ಲಿ ವಿಶ್ವೇಶ್ವರ ಮೊದಲಿಗರು. ಬ್ಲಾಕ್‍ಹೋಲ್‍ಗಳಲ್ಲಿ ಎರ್ಗೋಸ್ಟಿಯರ್ ಅಸ್ತಿತ್ವ ಕುರಿತು ತಿಳಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ. ಇದರ ಜೊತೆಗೆ ಕಪ್ಪು ರಂಧ್ರಗಳ ಕ್ವಾಸಿನಾರ್ಮಲ್ ಶಕ್ತಿಯ ಬಗ್ಗೆಯೂ ಸಂಶೋಧನೆ ನಡೆಸಿದ್ದರು. ವಿಶ್ವೇಶ್ವರ ಅವರು ಬೆಂಗಳೂರಿನ ರಾಮನ್ ಸಂಶೋಧನ ಕೇಂದ್ರ ಹಾಗೂ ಇಂಡಿಯನ್ ಇನ್ಸ್‍ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಕೇಂದ್ರಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Image result for c v vishveshwara
Image Credit: RSTV

ಭೌತಶಾಸ್ತ್ರದಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ಸಲುವಾಗಿ ದೇಶವಿದೇಶದ ವಿವಿಧ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು.ಬರೀ ಬೋಧನೆಯಷ್ಟೇ ಅಲ್ಲದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭೌತಶಾಸ್ತ್ರದಲ್ಲಿ ಹಲವಾರು ಲೇಖನಗಳನ್ನೂ ಬರೆದಿದ್ದರು. ಕೇಂಬ್ರಿಡ್ಬ್ ವಿಶ್ವವಿದ್ಯಾಲಯ ಮತ್ತು ಕ್ಲೂವರ್ ಅಕಾಡೆಮಿಕ್ ಸಂಸ್ಥೆ ಹೊರತಂದ `ರಿಲೇಟಿವಿಟಿ ಆಸ್ಟ್ರೋಫಿಸಿಕ್ಸ್ ಮತ್ತು ಕಾಸ್ಮಾಲಜಿ’ ಎಂಬ ಹತ್ತು ಸರಣಿ ಪುಸ್ತಕಗಳ ಸಹ ಬರಹಗಾರರಾಗೂ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಕೃತಿಗಳಿಗೆ ಅವರು ಬರೆದ ಎರಡು ವ್ಯಂಗ್ಯಚಿತ್ರಗಳು ಭೌತಶಾಸ್ತ್ರ ಕ್ಷೇತ್ರದಲ್ಲಿ ಹೆಸರಾಗಿದ್ದವು.ವಿಶ್ವೇಶ್ವರ ಅವರು ಬರೆದ `ಐನ್‍ಸ್ಟೀನ್ ಎನಿಗ್ಮಾ ಆರ್ ಬ್ಲಾಕ್ ಹೋಲ್ ಇನ್ ಮೈ ಬಬಲ್ ಬಾತ್’ ಎಂಬ ಪುಸ್ತಕಕ್ಕೆ ಭೌತಶಾಸ್ತ್ರ ಕ್ಷೇತ್ರದಲ್ಲೇ ವಿಶೇಷ ಮನ್ನಣೆ ದೊರೆತಿದ್ದು, ಮೂಲತಃ ಇಂಗ್ಲೀಷ್‍ನಲ್ಲಿದ್ದ ಈ ಕೃತಿ ಇಟಾಲಿಯನ್ ಭಾಷೆಗೂ ಭಾಷಾಂತರಗೊಂಡಿದೆ.ಭೌತಶಾಸ್ತ್ರ ಕ್ಷೇತ್ರದಲ್ಲಿ ಅಪಾರ ಕಾರ್ಯನಿರ್ವಹಣೆಯಿಂದ ಹೆಸರು ಗಳಿಸಿದ್ದ ವಿಜ್ಞಾನಿ ಸಿ.ವಿ.ವಿಶ್ವೇಶ್ವರ ಅವರು ಈಚೆಗೆ ಬೆಂಗಳೂರಿನಲ್ಲಿ ನಿಧನರಾದರು.