ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಗಂಟೆ ಗಟ್ಟಲೆ ಕಾರು,ದ್ವಿಚಕ್ರವಾಹನ ಸವಾರರು ಟ್ರಾಫಿಕ್ ಜಾಮ್ಗೆ ಕಂಗೆಟ್ಟಿದ್ದಾರೆ. ಆದರೆ ಈ ನಿಮ್ಮ ತೊಂದರೆ ಒಂದಕ್ಕೆಮಾತ್ರ ತುಂಬಾನೇ ಉಪಯೋಗವಾಗಿದೆ. ಏನಪ್ಪಾ ಟ್ರಾಫಿಕ್ ನಿಂದ ಬೆಂಗಳೂರಿಗೆ ಆಗುವ ಲಾಭ ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳಬೇಡಿ.

ಎಸ್.. ನಿಮಗೆ ತೊಂದರೆ ಕೊಡುವ ಟ್ರಾಫಿಕ್ ಉಗ್ರರರ ಉಪಟಳಕ್ಕೆ ಬ್ರೇಕ್ ಹಾಕಿದೆ ಅಂತೆ. ವರದಿಯ ಅನುಸಾರ ವಿಶ್ವದಲ್ಲೇ ಉಗ್ರರರ ಮಟ್ಟಹಾಕ್ಕೆ ಟ್ರಾಫಿಕ್ ಕಾರಣವಾದ ಮೊದಲ ನಗರ ಎಂಬ ಕೀರ್ತಿ ನಮ್ಮ ಬೆಂಗಳೂರಿನದ್ದಾಗಿದೆ. ಎಂದು ತಿಳಿದುಬಂದಿದೆ.
ಹೌದು ನೀವು ಓದುತ್ತಿರುವ ಸುದ್ದಿ ನಿಜ.. ಉಗ್ರರರು ಹಾಕಿಕೊಂಡ ಪ್ಲಾನ್ ಟ್ರಾಫಿಕ್ ಜಾಮ್ನಿಂದ ಕೈಕೊಟ್ಟಿದೆ. ತ್ರಿಪುರದಲ್ಲಿ ಬಂಧಿತ ಹಬೀಬ್ ಮಿಯಾ ಅವರನ್ನು ಬೆಂಗಳೂರಿಗೆ ಕರೆ ತರಲಾಗಿತ್ತು.ಬನ್ನೇರುಘಟ್ಟ ರಸ್ತೆಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮುಂಭಾಗದಲ್ಲಿ ಕಾರ್ ನಲ್ಲಿ ಹೋಗುವಾಗ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡೆ. ಪರಿಣಾಮ ನಾನು ತಲುಪಬೇಕಿದ್ದ ಸ್ಥಳಕ್ಕೆ ನಿಗದಿತ ಸಮಯಕ್ಕೆ ಮುಟ್ಟಲು ಸಾಧ್ಯವಾಗಲಿಲ್ಲ. ಪರಿಣಾಮ ಶಿಬಿರದ ಮೇಲೆ ದಾಳಿ ನಡೆಸುವ ನನ್ನ ಯೋಜನೆ ಕೈ ಕೊಟ್ಟಿತು ಎಂದು ಹಬೀಬ್ ನೆನದರು.

ಪಿಇಎಸ್ ತಂತ್ರಜ್ಞಾನ ಸಂಸ್ಥೆಯ ಮೇಲೆ ದಾಳಿ ನಡೆಸುವ ಯೋಜನೆ ಇತ್ತು. ಆದರೆ ಅಲ್ಲಿ ಟ್ರಾಫಿಕ್ ಕಿರಿಕಿರಿ ಹೆಚ್ಚು, ಅಲ್ಲಿಂದಪಾರಾಗುವುದು ಅಷ್ಟು ಸುಲಭವಲ್ಲ ಎಂದು ಅರಿತು ಕೈ ಬಿಡಲಾಗಿದೆ.
ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸರು ಹಾಗೂ ಸಂಸ್ಥೆಗಳು ಇದರ ಬಗ್ಗೆ ಮಾಹಿತಿ ನೀಡುತ್ತವೆ. ಇನ್ನು ಬೆಂಗಳೂರಿನ ಗರುಡು ಮಾಲ್ ನಲ್ಲಿ ಬಲಬದಿ ರಸ್ತೆ ಇರುವುದು ವಿಶೇಷ. ಹೀಗೆ ಹಲವು ವಿಶೇಷತಗಳ ಖಣಜ ನಮ್ಮ ಬೆಂಗಳೂರಿನ ರಕ್ಷಣೆಗೆ ಟ್ರಾಫಿಕ್ ನೀಡುತ್ತಿರುವ ಕೊಡುಗೆ ಅಪಾರ.