ಬೆಂಗಳೂರಿಗೆ ಬರ..!

0
1039

ರಾಜ್ಯದ ನಾಲ್ಕೂ ಜಲಾಶಯಗಳ ನೀರಿನ ಮಟ್ಟ ಊಹಿಸಲಾಗದಷ್ಟು ಕುಸಿದು ಹೋಗಿದೆ. ಇನ್ನು ಒಂದು ಕಾಲದಲ್ಲಿ ಬೆಂಗಳೂರಿಗೆ ನೀರಿನ ಆಶ್ರಯವಾಗಿದ್ದ ಕೆರೆಗಳು ನುಂಗುಬಾಕರ ಕೈಸೇರಿದೆ. ಅಳಿದುಳಿದ ಕೆರೆಗಳ ಪರಿಸ್ಥಿತಿ ಶೋಚನೀಯ . ನೀರಿನಿಂದ ತುಂಬಿರೋ ನಿಮ್ಮ ಮನೆ ಮುಂದಿನ ಸಂಪ್ ಗಳೂ ಖಾಲಿ ಆಗಬಹುದು. ಕಾವೇರಿ ನೀರನ್ನು ಉಳಿಸಿಕೊಳ್ಳಿಲ್ಲ ಅಂದ್ರೆ ಬೆಂಗಳೂರು ಇದನ್ನೇಲ್ಲಾ ಅನುಭವಿಸೋದು ಗ್ಯಾರೆಂಟಿ. ಹೀಗಾಗಿ ಇಡೀ ಬೆಂಗಳೂರು ಆಶ್ರಯಿಸಿರೋದು ಕಾವೇರಿಯನ್ನೇ. ಆದ್ರೆ ಈ ಬಾರಿ ಸಾಕಷ್ಟು ಮಳೆ ಕೂಡಾ ಆಗಿಲ್ಲ ಹೀಗಾಗಿ ತಮಿಳುನಾಡಿಗೆ ನೀರು ಬಿಟ್ರೆ ನಮಗೆ ಸಿಗೋದು ಶೂನ್ಯ.

ಹೌದು,ರಾಜ್ಯಕ್ಕೆ ಕಾವೇರಿ ವಿಚಾರದಲ್ಲಿ ಅನ್ಯಾಯವಾದ್ರೇ ಸಿಲಿಕಾನ್ ಸಿಟಿಯ ಜನರಿಗೆ ಕಷ್ಟ ಕಟ್ಟಿಟ್ಟ ಬುತ್ತಿ.ಹೆಚ್ಚು ಬೆಲೆ ತೆತ್ತು ದಿನ ನಿತ್ಯದ ವಸ್ತುಗಳನ್ನು ಕೊಳ್ಳೋ ಬೆಂಗಳೂರಿಗರಿಗೆ ಮುಂದೊಂದು ದಿನ ನೀವು ಕುಡಿಯೋ ನೀರು ಕೂಡಾ ದುಬಾರಿಯಾಗಬಹುದು.

ಸಿಲಿಕಾನ್ ಸಿಟಿಗೆ ನಿತ್ಯ 600 ಕ್ಯೂಸೆಕ್‌ನಷ್ಟು ಕಾವೇರಿ ನೀರು ಬೇಕು. ಬೆಂಗಳೂರು ಮಹಾನಗರಪಾಲಿಕೆಗೆ ಒಳಪಡುವ ಪ್ರದೇಶಗಳಿಗೆ 10 ತಿಂಗಳಿಗೆ 15 ಟಿಎಂಸಿ ಬೇಕಾದ್ರೆ, ಬೆಂಗಳೂರು ಗ್ರಾಮಾಂತಕಕ್ಕೆ 12 ಟಿಎಂಸಿ ನೀರು ಸರಬರಾಜಾಗಬೇಕಾಗುತ್ತೆ. ಒಟ್ಟಾರೆ ಬರೀ ಕುಡಿಯುವ ನೀರಿಗಾಗಿಯೇ 27 ಟಿಎಂಸಿ ನೀರು ಬೇಕು. ಬೆಂಗಳೂರಿನ ಅಗತ್ಯತೆಯನ್ನು ಪೂರೈಸೋಕೆ ಸದ್ಯ ಎಲ್ಲಾ ಜಲಾಶಯದಲ್ಲಿರೋ 26.17 ಟಿಎಂಸಿ ನೀರು ಬೇಕು. ಹೀಗಿರೋವಾಗ ಇದನ್ನೇಲ್ಲಾ ಬೆಂಗಳೂರಿಗೆ ನೀಡಿದ್ರೆ ಉಳಿದ ಜಿಲ್ಲೆಯ ಜನರು ಏನು ಮಾಡಬೇಕು ಹೇಳಿ? ಕಳೆದ ವರ್ಷ ಸೆ. 19ಕ್ಕೆ ಕೆಆರ್‌ಎಸ್‌ನಲ್ಲಿ 23.43 ಟಿಎಂಸಿ ನೀರಿತ್ತು. ಆದ್ರೆ ಈ ವರ್ಷ ಸೆಪ್ಟೆಂಬರ್ ನಲ್ಲಿ ಇರೋದು 8.31 ಟಿಎಂಸಿ ನೀರು ಮಾತ್ರ. ಇನ್ನು ಹೇಮಾವತಿಯಲ್ಲಿ 6.32 ಟಿಎಂಸಿ, ಕಬಿನಿಯಲ್ಲಿ 7.59 ಟಿಎಂಸಿ, ಹಾರಂಗಿಯಲ್ಲಿ 3.95 ಟಿಎಂಸಿ ನೀರಿದೆ. ಇದೆಲ್ಲಾ ಸೇರಿದ್ರೆ ಕೇವಲ 26.17 ಟಿಎಂಸಿ ನೀರು ಮಾತ್ರ. ಬೆಂಗಳೂರಿಗರ ನೀರಿನ ಬೇಡಿಕೆಯನ್ನು ನಾಲ್ಕು ಜಲಾಶಯಗಳಲ್ಲಿರುವ ನೀರು ಪೂರೈಸಲಾರವು. ಯಾಕಂದ್ರೆ ಅವುಗಳಲ್ಲಿ ಸಾಕಷ್ಟು ನೀರು ಕೂಡಾ ಇಲ್ಲ.

ಪರಿಸ್ಥಿತಿ ಇದೇ ರೀತಿ ಇದ್ರೆ ಡಿಸೆಂಬರ್ ತಿಂಗಳಲ್ಲೇ ನೀರಿಗಾಗಿ ಅಲೆದಾಡೋ ಪರಿಸ್ಥಿತಿ ಬೆಂಗಳೂರಿಗರಿಗೆ ಬರೋದು ಗ್ಯಾರೆಂಟಿ. ಈ ಹಿಂದೆಯೂ ಬೆಂಗಳೂರು ಕಾವೇರಿ ವಿವಾದದಿಂದ ಕುಡಿಯುವ ನೀರಿಗಾಗಿ ಪರದಾಡುವಂತಾಗಿತ್ತು. ಇದೀಗ ಅಂತಹದ್ದೇ ಪರಿಸ್ಥಿತಿ ಎದುರಾಗಲಿದೆ. ಕೆಲವು ಪ್ರದೇಶಗಳಿಗೆ ನೀರು ಹರಿಸೋ ವಿಚಾರದಲ್ಲಿ ಕಡಿವಾಣ ಹಾಕಲು ಜಲ ಮಂಡಳಿ ಯೋಚಿಸಿದೆ. ಇನ್ನು ಕೆಲ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಸಿದ್ಧವಾಗಿದೆ. ಸರ್ಕಾರದ ಬಳಿ ಇರುವ 26.17 ಟಿಎಂಸಿ ನೀರು ಸಿಲಿಕಾನ್ ಸಿಟಿಗೆ ಸಾಲುವುದಿಲ್ಲ. ಹಾಗಿರುವಾಗ ಸರ್ಕಾರ ಕರ್ನಾಟಕದ ಜನರ ಬಾಯಾರಿಕೆಯನ್ನು ಹೇಗೆ ತಣಿಸುತ್ತೆ? ಇದೇ ಪರಿಸ್ಥಿತಿ ಮುಂದುವರಿದ್ರೆ ಎರಡು ದಿನಕ್ಕೊಮ್ಮೆ ಬಿಡುತ್ತಿರುವ ನೀರನ್ನು, ಮೂರು ನಾಲ್ಕು ದಿನಗಳಿಗೆ ಒಮ್ಮೆ ಬಿಡುವಂತಾಗುತ್ತಿದೆ.