ಪ್ರಾಣವನ್ನೇ ಬಲಿ ತೆಗೆದುಕೊಳ್ಳುವ ಡೆಂಗ್ಯು ಜ್ವರದ ಲಕ್ಷಣಗಳು; ಮತ್ತು ಜ್ವರ ಬಂದ ನಂತರ ಸೇವಿಸಬೇಕಾದ ಆಹಾರ ಇಲ್ಲಿದೆ ನೋಡಿ ಮಾಹಿತಿ!!

0
1887

ಮಳೆ ಬಂತು ಅಂದರೆ ಎಲ್ಲಲ್ಲಿ ಡೆಂಗ್ ಜ್ವರದ ಹಾವಳಿ ಹೆಚ್ಚಾಗುತ್ತೆ, ಈಗೀಗ ಸಾವಿನ ಸಂಖ್ಯೆಯಲ್ಲಿವೂ ಕೂಡ ಡೆಂಗ್ಯು ಪಾಲನ್ನು ಪಡೆದುಕೊಂಡು ಸಾಕಷ್ಟು ಜನರನ್ನು ಬಲಿ ಪಡೆದಿದ್ದೆ. ಸದ್ಯ ಮತ್ತೆ ಡೆಂಗ್ ಹಾವಳಿ ಹೆಚ್ಕಾಗಿದು, ಜನರು ಮುನ್ನೆಚರಿಕೆ ವಹಿಸುವುದು ಮುಖ್ಯವಾಗಿದೆ. ಡೆಂಗ್ ವೈರಸ್ ಹೊತ್ತ ಸೊಳ್ಳೆ ವ್ಯಕ್ತಿಗೆ ಕಚ್ಚಿದರೆ ಆತನಿಗೆ ಡೆಂಗ್ ಬರುತ್ತದೆ. ಸಾಮಾನ್ಯವಾಗಿ ಸೋಂಕು ಆದ ನಂತರ ಮೂರು ಅಥವಾ ಹದಿನಾಲ್ಕು ದಿನಗಳಲ್ಲಿ ಲಕ್ಷಣ ತೋರುವುದು. ಕಡಿಮೆ ಎಂದರೆ ಎರಡ ರಿಂದ ಏಳು ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಅಪರೂಪದ ಸಂದರ್ಭಗಳಲ್ಲಿ ಈ ಒಂದು ಸಣ್ಣ ಪ್ರಮಾಣದ ರೋಗವು ಮಾರಣಾಂತಿಕವಾದ ಡೆಂಗಿ ಹೆಮರಾಜಿಕ್ ಜ್ವರವಾಗಿ ಪರಿಣಮಿಸಬಹುದು. ಅದಕ್ಕಾಗಿ ಕೆಲವು ಮುನ್ನಚರಿಕೆ ಆಹಾರ ಕ್ರಮಗಳನ್ನು ವಹಿಸುವುದು ಮುಖ್ಯವಾಗಿದೆ.

Also read: ಪಪ್ಪಾಯ ಎಲೆಗಳು ಉಪಯೋಗಿಸೋದ್ರಿಂದ ಎಲ್ಲ ತರಹದ ಜ್ವರದಿಂದ ಹಿಡಿದು ಕ್ಯಾನ್ಸರ್-ವರೆಗೆ ಗುಣಪಡಿಸಬಹುದು ಈ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳಿ!!

ಹೌದು ಸೊಳ್ಳೆಯು ವ್ಯಕ್ತಿಗೆ ಕಚ್ಚಿದ ಎರಡು ಮೂರು ವಾರಗಳ ಬಳಕ ಡೆಂಗ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ರೋಗನಿರ್ಧಾರ ಮತ್ತು ಚಿಕಿತ್ಸೆ ಅತ್ಯಂತ ಮುಖ್ಯವಾಗಿವೆ. ಮಳೆಗಾಲದಲ್ಲಿ ಡೆಂಗ್ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಈ ಸಮಯದಲ್ಲಿ ನಾವು ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಡೆಂಗ್ ಪೀಡಿತರಾಗಿ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವವರು ಸೇವಿಸಬೇಕಾದ ಮತ್ತು ಸೇವಿಸಬಾರದ ಆಹಾರಗಳ ಇಲ್ಲಿವೆ.

ಡೆಂಗ್ಯು ಲಕ್ಷಣಗಳು?

ಡೆಂಗಿ ಜ್ವರದ ಬರುವ ಮೊದಲು ಕೆಲವು ಲಕ್ಷಣಗಳು ಕಂಡು ಬರುತ್ತೇವೆ. ಅದರಲ್ಲಿ ತೀವ್ರ ತಲೆನೋವು, ಕಣ್ಣು ನೋವು, ಸ್ನಾಯು ನೋವು, ಹಸಿವಾಗದಿರುವುದು,ಉದರದ ಅಸ್ವಸ್ಥತೆ, ತುರಿಕೆ, 103 ಡಿಗ್ರಿಗಿಂತಲೂ ಹೆಚ್ಚಿನ ಜ್ವರ, ಚಿಕ್ಕ ಮಕ್ಕಳಿಗೆ ಶೀತ, ಭೇದಿ, ತುರಿಕೆ ಮತ್ತು ತೀವ್ರ ಸಂದರ್ಭಗಳಲ್ಲಿ ರೋಗಗ್ರಸ್ತವಾಗುವಿಕೆ. ಪ್ಲೇಟ್ಲೆಟ್ ಕೌಂಟ್, ಇಳಿಕೆಯಾಗುವುದು. ಕಂಡು ಬರುತ್ತದೆ.

ಡೆಂಗ್ಯೂ ಜ್ವರದ ಬಂದಲ್ಲಿ ಅಥವಾ ಮುನ್ನಚರಿಕೆ ಆಹಾರಗಳು:

Also read: ಇಂಗ್ಲಿಷ್ ಮೆಡಿಸಿನ್ ಬಿಟ್ಟಾಕಿ.. ಕೆಮ್ಮು ಶೀತಕ್ಕೆ ಜ್ವರಕ್ಕೆ ಮನೆ ಔಷಧಿ ಸೇವಿಸಿ, ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ನೋಡಿ ರಾಮಬಾಣದಂತಹ ಔಷಧಿಗಳು

ಸೇವಿಸಬೇಕಾದ ಆಹಾರಗಳು

1. ಪಪ್ಪಾಯ ಎಲೆ: ಪಪ್ಪಾಯ ಎಲೆಯ ರಸದಲ್ಲಿರುವ ಪಪೈನ್ ಮತ್ತು ಕೈಮೊಪಪೈನ್ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಇತರ ಜೀರ್ಣಾಂಗ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತವೆ. ಪ್ರತಿದಿನ ಪಪ್ಪಾಯ ಎಲೆಯ ರಸದ ಸೇವನೆಯು ರಕ್ತದಲ್ಲಿಯ ಪ್ಲೇಟ್‌ಲೆಟ್‌ ಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ.

2. ಎಳನೀರು: ವ್ಯಕ್ತಿಯು ಡೆಂಗ್ ನಿಂದ ನರಳುತ್ತಿದ್ದಾಗ ಶರೀರದಲ್ಲಿ ನಿರ್ಜಲೀಕರಣದ ಅನುಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೇವಲ ನೀರು ಸಾಕಾಗುವುದಿಲ್ಲ.
ಜಲೀಕರಣವನ್ನು ಗರಿಷ್ಠಗೊಳಿಸಲು ಮತ್ತು ಡೆಂಗ್ ಪ್ರಭಾವವನ್ನು ಕನಿಷ್ಠಗೊಳಿಸಲು ಎಳನೀರಿನ ಸೇವನೆ ಅಗತ್ಯವಾಗುತ್ತದೆ.

3. ದಾಳಿಂಬೆ: ವ್ಯಕ್ತಿಯು ಡೆಂಗ್ ಬಾಧಿತನಾಗಿರುವುದು ಖಚಿತವಾದಾಗ ದಾಳಿಂಬೆ ಅತ್ಯಂತ ಸೂಕ್ತ ಆಹಾರವಾಗಿದೆ. ಡೆಂಗ್ ಬಾಧಿಸುತ್ತಿದ್ದಾಗ ರಕ್ತದಲ್ಲಿಯ ಪ್ಲೇಟ್‌ ಲೆಟ್‌ ಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತವೆ ಮತ್ತು ದಾಳಿಂಬೆಯು ಅವುಗಳ ಸಂಖ್ಯೆಯನ್ನು ವೃದ್ಧಿಸಲು ನೆರವಾಗುತ್ತದೆ.

4. ಅರಿಷಿಣ: ಅರಿಷಿಣವು ಅದ್ಭುತ ಬ್ಯಾಕ್ಟೀರಿಯಾ ಪ್ರತಿರೋಧಕ. ನಂಜು ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಅರಿಷಿಣ ಬೆರೆತ ಹಾಲನ್ನು ಸೇವಿಸುವುದರಿಂದ ಡೆಂಗ್ ನಿಂದ ತ್ವರಿತವಾಗಿ ಚೇತರಿಸಿಕೊಳ್ಳಬಹುದು.

ಸೇವಿಸಬಾರದ ಆಹಾರಗಳು:

1. ಮಸಾಲೆ ಮತ್ತು ಎಣ್ಣೆಯ ತಿಂಡಿಗಳನ್ನು ತ್ಯಜಿಸಿ

Also read: ಸೊಳ್ಳೆಗಳು ನಿಮ್ಮಿಂದ ದೂರವಿರಲು, ನಿಮ್ಮ ದೇಹಕ್ಕೆ ಸೊಳ್ಳೆಗಳು ಕಡಿಯದಂತೆ ತಡೆಯಲು ಇಲ್ಲಿವೆ.. ನೈಸರ್ಗಿಕ ಮನೆ ಮದ್ದು..

ಈ ಜ್ವರವಿದ್ದಾಗ ಮತ್ತು ಜ್ವರ ಬಿಟ್ಟ ಕೆಲವು ದಿನಗಳವರೆಗೆ ಮಸಾಲೆಯುಕ್ತ ಮತ್ತು ಎಣ್ಣೆಯಲ್ಲಿ ಕರಿದ, ಹುರಿದ ತಿಂಡಿಗಳಿಗೆ ವಿದಾಯ ಹೇಳಿ.ಇವುಗಳನ್ನು ಜೀರ್ಣಿಸಿಕೊಳ್ಳುವುದು ರೋಗಿಗಳಿಗೆ ಕಷ್ಟ. ಅಲ್ಲದೇ ಇವುಗಳನ್ನು ಜೀರ್ಣಿಸಿಕೊಳ್ಳಲು ದೇಹ ಅಧಿಕ ಶಕ್ತಿಯನ್ನು ಬಳಸಬೇಕಾದುದರಿಂದ ಅತ್ತ ದೇಹದ ರೋಗ ನಿರೋಧಕ ಶಕ್ತಿಯ ಹಿಡಿತ ತಪ್ಪಿದ ವೈರಸ್ಸುಗಳು ಮತ್ತೆ ತಮ್ಮ ಬಲವೃದ್ಧಿಸಿಕೊಂಡು ಜ್ವರವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.

2. ಕೆಫೀನ್‌ ಯುಕ್ತ ಪಾನೀಯಗಳು:
ಡೆಂಗ್ ನಿಂದ ಚೇತರಿಕೆಯ ಅವಧಿಯಲ್ಲಿ ಶರೀರವು ಹೆಚ್ಚಿನ ನೀರನ್ನು ಬೇಡುತ್ತದೆ, ಆದರೆ ಯಾವುದೇ ಕಾರಣಕ್ಕೂ ಕೆಫೀನ್‌ ಯುಕ್ತ ಅಥವಾ ಕಾರ್ಬನೀಕೃತ ಪಾನೀಯಗಳನ್ನು ಸೇವಿಸಕೂಡದು. ಈ ಪಾನೀಯಗಳಲ್ಲಿರುವ ಸಂರಕ್ಷಕಗಳು ಚೇತರಿಕೆ ಪ್ರಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತವೆ. ಈ ಪಾನೀಯಗಳ ಸೇವನೆಯು ಸ್ನಾಯು ಸ್ಥಗಿತ, ಆಯಾಸ, ಅನಿಯಮಿತ ಹೃದಯ ಬಡಿತ ದರ ಮತ್ತು ಇಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

3. ಮಾಂಸಾಹಾರ:

Also read: ಸೊಳ್ಳೆಗಳ ತೊಂದರೆ ಸಾಮಾನ್ಯ.. ಚಿಂತೆ ಬಿಡಿ ಸೊಳ್ಳೆಗಳನ್ನು ಹೋಗಲಾಡಿಸಲು ಪರಿಣಾಮಕಾರಿ ವಿಧಾನ ಇಲ್ಲಿದೆ ನೋಡಿ..

ಡೆಂಗ್ ನಿಂದ ಚೇತರಿಸಿಕೊಳ್ಳಬೇಕಿದ್ದರೆ ಮಾಂಸಾಹಾರ ಸೇವನೆಯಿಂದ ದೂರವಿರುವುದು ಅನಿವಾರ್ಯವಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಮಾಂಸಾಹಾರ ಸೇವನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ.