ಈ ಮನೆಮದ್ದುಗಳು ನಿಮ್ಮ ಶ್ವಾಸಕೋಶಕ್ಕೆ ಎಷ್ಟು ಒಳ್ಳೇದು ಅಂದ್ರೆ ಬಹಳ ವರ್ಷಗಳಿಂದ ಚೈನ್ ಸ್ಮೋಕರ್ ಆಗಿದ್ದವರ ಶ್ವಾಸಕೋಶದಲ್ಲಿ ಕರಿ ಕಟ್ಟಿರುವ ನಿಕೋಟಿನ್-ಅನ್ನು ಕೂಡ ಶುದ್ದ ಗೊಳಿಸುತ್ತದೆ!!

0
1208

ಕಾಲಮಾನ ಕಳೆದಂತೆ ಜನರು ವಿವಿಧ ಹಂತದಲ್ಲಿ ಬೆಳವಣಿಗೆ ಹೊಂದುತ್ತಿದ್ದಾರೆ. ಅದರಂತೆಯೇ ಕೆಟ್ಟ ಹವ್ಯಾಸಗಳು ಬೆಳೆಯುತ್ತಿವೆ. ಅದರಲ್ಲಿ ಮದ್ಯಪಾನ ಧೂಮಪಾನಕ್ಕೆ ಜನರು ಹೆಚ್ಚು ಹತ್ತಿರವಾಗುತ್ತಿದ್ದು. ಪ್ರತಿನಿತ್ಯವೂ ಇದರ ಮಡಿಲಲ್ಲೇ ಜೀವನ ಮಾಡುತಿದ್ದಾರೆ. ಅದರಲ್ಲಿ ಸಿಗರೆಟ್ ಚಟವನ್ನು ಕಲಿಯುವುದು ಸುಲಭವಾದರೆ ಬಿಡುವುದು ಮಾತ್ರ ಬಹಳ ಸಾಧ್ಯವಾಗುತ್ತಿಲ್ಲ. ಇದರಿಂದ ದೇಶದಲ್ಲಿ ಪ್ರತಿದಿನಕ್ಕೆ 5 ರಷ್ಟು ಜನ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ. ಈಗ ಇದರ ಲೆಕ್ಕಾಚಾರ 80 ಕ್ಕೆ ತಲುಪಿದ್ದು ಮಹಿಳೆ ಪುರುಷರಲ್ಲಿ ಶೇಕಡಾವಾರು ಹವ್ಯಾಸಿಗಳು ಹೆಚ್ಚುತ್ತಿದ್ದಾರೆ. ಇದರಿಂದ ಶ್ವಾಸಕೋಶ ನಿಕೋಟಿನ್‌ನಿಂದ ತುಂಬಿಕೊಂಡು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದೆ ಕೆಮ್ಮುತ್ತಿರುತ್ತದೆ. ಈ ಮಬ್ಬಾದ ಶ್ವಾಸಕೋಶವನ್ನು ಸ್ವಚ್ಛಗೊಳಿಸುವುದು ಬಹುಮುಖ್ಯವಾಗಿದ್ದು. ಇಲ್ಲದಿಂದರೆ ಕೆಲವೇ ದಿನಗಳಲ್ಲಿ ಕ್ಯಾನ್ಸರ್ ಅಂತ ಕಾಯಿಲೆಗಳು ಬರುವುದರಲ್ಲಿ ಅನುಮಾನವೇ ಇಲ್ಲ.

ಹೌದು ಬಹಳಷ್ಟು ವರ್ಷಗಳಿಂದ ಸಿಗರೆಟ್ ಚಟವನ್ನು ಮಾಡುತ್ತಿದ್ದರೆ. ನಿಮ್ಮ ಶ್ವಾಸಕೋಶದಲ್ಲಿ ನಿಕೋಟಿನ್ ದೊಡ್ಡ ಪ್ರಮಾಣದಲ್ಲಿಯೇ ಕರಿ ಕಟ್ಟಿರುತ್ತದೆ. ಇದೇ ನಿಧಾನವಾಗಿ ಶ್ವಾಸಕೋಶದ ಇನ್ಫೆಕ್ಷನ್‌ಗೂ ಕಾರಣವಾಗುತ್ತದೆ. ಅಲ್ಲೇ ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ಇದು ಶ್ವಾಸಕೋಶದ ಕ್ಯಾನ್ಸರ್‌ಗೂ ಎಡೆ ಮಾಡಿಕೊಡುತ್ತದೆ. ತಂಬಾಕು ಸೇವನೆ ಶ್ವಾಸಕೋಶದಲ್ಲಿ ವಿಷಕಾರಿ ಅಂಶಗಳನ್ನು ತುಂಬುವುದಷ್ಟೇ ಅಲ್ಲ, ದೇಹದಿಂದ ವಿಟಮಿನ್‌ಗಳನ್ನೂ ದೂರವಿಡುತ್ತವೆ. ಇದಕ್ಕೆ ಧೂಮಪಾನಿಗಳು ಎಚ್ಚತ್ತುಕೊಂಡು ಈ ಮನೆ ಮದ್ದುಗಲಿಂದ ಶ್ವಾಸಕೋಶ ಸ್ವಚಗೊಳಿಸುವುದು ಒಳ್ಳೆಯದು.

ನಿಕೋಟಿನ್ ಹೊರಹಾಕುವ ಮನೆಮದ್ದುಗಳು:

1. ಬ್ರೋಕೋಲಿ:

ಹಲವು ರೋಗಗಳಿಗೆ ಮನೆಯಲ್ಲಿಯೇ ಔಷಧಿಗಳನ್ನು ಕಂಡುಕೊಳ್ಳಬಹುದು ಅದರಂತೆ. ಬ್ರೋಕೋಲಿ ಕೂಡ ಒಂದಾಗಿದ್ದು ನೋಡಲು ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ವಿಟಮಿನ್ ಬಿ5 ಇರುವ ಕಾರಣ ಶ್ವಾಸಕೋಶದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಶ್ವಾಸಕೋಶವನ್ನು ಮುಂದೆ ಕಲ್ಮಶಗಳಿಂದ ರಕ್ಷಿಸಲೂ ಸಾಧ್ಯವಾಗುತ್ತದೆ.

2. ಕ್ಯಾರಟ್ ಜ್ಯೂಸ್:

ಕ್ಯಾರೆಟ್‌ನಲ್ಲಿ ಉತ್ತಮ ಪ್ರಮಾನದ ವಿಟಮಿನ್ ಎ, ಕೆ ಮತ್ತು ಸಿ ಇರುತ್ತದೆ. ಇದರಲ್ಲಿ ಆರೋಗ್ಯಕ್ಕೆ ಪೂರಕವಾಗಿರುವ ಜೊತೆಗೇ ರಕ್ತ ಮತ್ತು ಶ್ವಾಸಕೋಶಗಳಲ್ಲಿ ಸಂಗ್ರಹವಾಗಿದ್ದ ಧೂಮಪಾನದ ಟಾರಿನ ಸಹಿತ ಹಲವು ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ. ಅದಕ್ಕಾಗಿ 3-4 ಕ್ಯಾರೆಟ್ ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ಗ್ರೈಂಡ್ ಮಾಡಿ. ಇದನ್ನು ಪ್ರತಿ ದಿನ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ವಿಟಮಿನ್‌ಗಳು ದೊರೆತು, ಶ್ವಾಸಕೋಶ ಸ್ವಚ್ಛವಾಗುತ್ತದೆ.

3. ಪಾಲಕ್ ಸೊಪ್ಪು:

ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವಲ್ಲಿ ಪಾಲಕ್ ಸೊಪ್ಪು ಬಹುಮುಖ್ಯವಾಗಿದ್ದು, ಈ ಸೊಪ್ಪಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಇತರ ವಿಟಮಿನ್ನುಗಳು ಶ್ವಾಸಕೋಶದಲ್ಲಿ ಸೇರಿರುವ ಟಾರು ಮತ್ತು ನಿಕೋಟಿನ್ ಅಂಶಗಳನ್ನು ವಿಸರ್ಜಿಸಲು ನೆರವಾಗುತ್ತದೆ. ಅಲ್ಲದೇ ರಕ್ತದಲ್ಲಿರುವ ನಿಕೋಟಿನ್ ಅಂಶವನ್ನು ನಿವಾರಿಸಲು ಮತ್ತು ಇದಕ್ಕೆ ವ್ಯಸನರಾಗಿದ್ದ ನಿಮ್ಮನ್ನು ನಿಧಾನವಾಗಿ ಹೊರತರಲು ನೆರವಾಗುತ್ತದೆ. ಹಾಗೆಯೇ ತಂಬಾಕಿನ ರುಚಿ ಕೆಡಿಸುವ ಶಕ್ತಿ ಹೊಂದಿದೆ. ನಿಕೋಟಿನ್‌ನ್ನು ಕೂಡಾ ಇದು ದೇಹದಿಂದ ಆಚೆ ತಳ್ಳುತ್ತದೆ.

4. ಕಿತ್ತಳೆ ಹಣ್ಣು:

ಕಿತ್ತಳೆ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಇವು ರಕ್ತ ಮತ್ತು ಶ್ವಾಸಕೋಶಗಳಿಂದ ವಿಷಕಾರಿ ವಸ್ತುಗಳನ್ನು ನಿವಾರಿಸಿ ಹೊರದೂಡಲು ನೆರವಾಗುತ್ತವೆ. ಅಲ್ಲದೇ ರಕ್ತದಲ್ಲಿದ್ದ ನಿಕೋಟಿನ್ ಅಂಶವನ್ನು ನಿವಾರಿಸಲು ಹೆಚ್ಚು ಸಕ್ಷಮವಾಗಿದೆ. ಅಷ್ಟೇ ಅಲ್ಲದೆ ಕಿತ್ತಳೆಯಲ್ಲಿ ಕ್ರಿಪ್ಟೋಕ್ಸಾಂಥಿನ್ ಎಂಬ ಕಾಂಪೌಂಡ್ ಇದ್ದು, ಇದು ಶ್ವಾಸಕೋಶದಿಂದ ವಿಷಪದಾರ್ಥ ಹೊರಹಾಕುತ್ತೆ.

5. ದಾಳಿಂಬೆ ಹಣ್ಣು

ನೋಡಲು ಕೆಂಪು ರಕ್ತದಂತೆ ಇರುವ ಈ ಹಣ್ಣಿನಲ್ಲಿ ರಕ್ತವನ್ನು ಶುದ್ಧೀರಿಸಲು ಅತ್ಯಂತ ಸಮರ್ಥವಾದ ಅಂಶ ದಾಳಿಂಬೆಯಲ್ಲಿದೆ. ಧೂಮಪಾನಿಗಳಿಗೂ ಅಲ್ಲದವರಿಗೂ ಈ ಹಣ್ಣು ಅತ್ಯಂತ ಸೂಕ್ತವಾಗಿದ್ದು ರಕ್ತದಲ್ಲಿ ಸೇರಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ.

6. ಈರುಳ್ಳಿ:

ಈರುಳ್ಳಿ ಅಡುಗೆಗೆ ರುಚಿ ಕೊಡುವುದಷ್ಟೇ ಅಲ್ಲ, ಇದು ಔಷಧೀಯ ಗುಣಗಳನ್ನೂ ಹೊಂದಿದೆ. ದೆೇಹದಿಂದ ನಿಕೋಟಿನ್ ಹೊರ ಹಾಕಲು ಇದು ಸಹಾಯಕ.

7. ಅರಿಶಿನ ಮತ್ತು ಶುಂಠಿ:

ಅರಿಶಿನವು ತನ್ನ ಔಷಧೀಯ ಗುಣಗಳಿಗೆ ಹೆಸರುವಾಸಿ. ಇದು ನಿಕೋಟಿನ್ ಹಾಗೂ ವಿಷಪದಾರ್ಥಗಳನ್ನು ಶ್ವಾಸಕೋಶದಿಂದ ಹೊರ ಕಳಿಸಿ, ದೇಹವನ್ನು ಒಳಗಿನಿಂದ ಸ್ವಚ್ಛವಾಗಿಸುತ್ತದೆ. ಅದರಂತೆ ಶುಂಠಿಯಲ್ಲಿವೂ ಹಲವು ಆರೋಗ್ಯಕರ ಅಂಶಗಳಿದ್ದು ಉತ್ತಮ ಕ್ರಿಮಿನಾಶಕವಾಗಿರುವ ಶುಂಠಿ ನಿಕೋಟಿನ್‌ನ್ನು ದೇಹದಿಂದ ಹೊರ ಹಾಕಿ, ಶ್ವಾಸಕೋಶವನ್ನು ಸೋಂಕುಮುಕ್ತವಾಗಿರಿಸುತ್ತದೆ.

Also read: ಧೂಮಪಾನ ಮಾಡುವ ಮುನ್ನ ಈ ಮಾಹಿತಿ ನೋಡಿ; ಸಿಗರೇಟ್ ಸಹವಾಸ ನಿಮ್ಮ ಲೈಂಗಿಕ ಜೀವನಕ್ಕೆ ಕುತ್ತು ತರಬಹುದು..