ದಸರಾಗೆ ಮೈಸೂರಿಗೆ ತೆರಳುತ್ತಿದ್ದೀರಾ?? ಇಲ್ಲಿದೆ ನೋಡಿ ಮೈಸೂರಿನ ಒಂದಿಷ್ಟು ಪ್ರವಾಸಿ ತಾಣಗಳು..

0
975

ಕರ್ನಾಟಕದಲ್ಲಿ ಪ್ರವಾಸಿ ತಾಣಗಳಿಗೇನು ಬರವಿಲ್ಲ.. ಅದರಲ್ಲೂ ಮೈಸೂರಿನಲ್ಲಿ ಕೇಳಲೇ ಬೇಕಿಲ್ಲ.. ಅದರಲ್ಲಿ ಕೆಲವು ಸ್ಥಳಗಳ ಬಗ್ಗೆ ಮಾಹಿತಿ ನಿಮ್ಮ ಮುಂದೆ.. ಓದಿದ ನಂತರ ಶೇರ್ ಮಾಡಿಕೊಳ್ಳಿ ಉಪಯೋಗಕ್ಕೆ ಬರುವುದು..

ಮೈಸೂರು:
ಮೈಸೂರಿನಲ್ಲಿ ಜಗತ್ಪ್ರಸಿದ್ಧವಾದ ಅರಮನೆ, ಚಾಮುಂಡಿ ದೇವಿ ನೆಲೆಸಿರುವ ಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಹತ್ತಿರದಲ್ಲೇ ಇರುವ ಕೃಷ್ಣ ರಾಜ ಸಾಗರ ಅಣೆಕಟ್ಟು (ಮಂಡ್ಯ ಜಿಲ್ಲೆ) ನೋಡುಗರ ಮನ ತಣಿಸುತ್ತದೆ.

ಶ್ರೀರಂಗಪಟ್ಟಣ:
ಮೈಸೂರು ನಗರದಿಂದ 18 ಕಿ ಮೀ ದೂರದಲ್ಲಿದೆ, ಕಾವೇರಿ ನದಿಯ ದಂಡೆಯ ಮೇಲೆ ಈ ನಗರವಿದೆ, ಶ್ರೀ ರಂಗನಾಥ ಸ್ವಾಮಿ ದೇವಾಲಯ ಪ್ರಸಿದ್ದವಾಗಿದೆ, ಟಿಪ್ಪು ಸುಲ್ತಾನ್ ನಿರ್ಮಿಸಿದ ದರಿಯಾ ದೌಲತ್ ಇರುವುದು ಕೂಡ ಇಲ್ಲೆ.

ರಂಗನತಿಟ್ಟು:
ಇದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ದಲ್ಲಿದೆ, ಇದು ಪ್ರಸಿದ್ಧ ಪಕ್ಷಿ ಧಾಮವಾಗಿದೆ.

ನಾಗರಹೊಳೆ:
ಇದು ಮೈಸೂರಿನ ಪಕ್ಕದ ಜಿಲ್ಲೆಯಾದ ಕೊಡಗಿನಲ್ಲಿದೆ, ಇದು ಕರ್ನಾಟಕದ ಪ್ರಸಿದ್ಧ ಹುಲಿ, ಚಿರತೆ, ಕಡವೆಗಳಿಗೆ ಪ್ರಸಿದ್ದವಾದ ಅಭಯಾರಣ್ಯ, ಇಲ್ಲಿ ಆನೆಗಳನ್ನು ಪಳಗಿಸುವ ಕೇಂದ್ರವಿದೆ. ಇದೇ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ.

ಸೋಮನಾಥಪುರ:
ಇದು ಮೈಸೂರು ಬಳಿ ಕಾವೇರಿ ನದಿಯ ದಡದಲ್ಲಿದೆ, ಇಲ್ಲಿನ ಕೇಶವ ದೇವಾಲಯ ಪ್ರಸಿದ್ಧವಾಗಿದೆ, ಇದು ಹೊಯ್ಸಳ ಕಾಲದ ದೇವಾಲಯವಾಗಿದೆ.

ನಂಜನಗೂಡು:
ಮೈಸೂರಿನಿಂದ 23 ಕಿ.ಮೀ. ದೂರದಲ್ಲಿದೆ, ಇದು ಕಪಿಲಾ ನದಿ ದಂಡೆಯ ಮೇಲಿದೆ, ಇಲ್ಲಿನ ನಂಜುಂಡೆಶ್ವರ ಸ್ವಾಮಿ ದೇಗುಲಕ್ಕೆ ರಾಜ್ಯದ ನಾನಾ ಮೂಲೆ ಇಂದ ಜನರು ಬರುತ್ತಾರೆ.

ಶೇರ್ ಮಾಡಿ ಸ್ನೇಹಿತರಿಗೆ ಉಪಯೋಗವಾಗಬಹುದು.