ಮಕ್ಕಳ ಹೊಟ್ಟೆಗೆ ವಿಳ್ಯೆದೆಲೆ ಯನ್ನು ಹೇಗೆ ಅಂಟಿಸುವುದು.. ಹೀಗೆ ಅಂಟಿಸಿದರೆ ಎಷ್ಟು ಲಾಭ ಗೊತ್ತಾ??

0
2905

ಪುಟ್ಟ ಮಕ್ಕಳಿಗೆ ವಿಳ್ಯೆದೆಲೆ ಯನ್ನು ಹೊಟ್ಟೆಗೆ ಅಂಟಿಸುವುದನ್ನು ಕೆಲವರು ನೋಡಿರುತ್ತೀರಾ.. ಆದರೇ ಹೀಗೆ ಮಾಡುವುದರಿಂದ ಎಷ್ಟು ಉಪಯೋಗ ಎಂದು ಅಷ್ಟಾಗಿ ಯಾರಿಗೂ ತಿಳಿದಿರುವುದಿಲ್ಲ.. ಹೌದು ಹುಟ್ಟಿದ ಮಕ್ಕಳಿಗೆ ಒಂದು ತಿಂಗಳಿನಿಂದ ವಿಳ್ಯೆದೆಲೆಯನ್ನು ಹೊಟ್ಟೆಗೆ ಅಂಟಿಸುತ್ತಾರೆ.. ಇದನ್ನು ಸಾಮಾನ್ಯವಾಗಿ 1 ವರ್ಷದವರೆಗೂ ಮುಂದುವರೆಸುತ್ತಾರೆ.. ಇದಕ್ಕೆ ಕಾರಣ ಮತ್ತು ಉಪಯೋಗ ಇಲ್ಲಿದೆ ನೋಡಿ..

ಹುಟ್ಟಿದ ಮಕ್ಕಳು ಸೂಕ್ಷ್ಮವಾಗಿರುತ್ತವೆ.. ಜೊತೆಗೆ ಗರ್ಭದಿಂದ ಹೊರ ಬಂದು ವಾತಾವರಣಕ್ಕೆ ಹೊಂದಿಕೊಳ್ಳಬೇಕು.. ಪುಟ್ಟ ಮಕ್ಕಳಿಗೆ ಆರೋಗ್ಯ ಕೆಟ್ಟರೆ ಚೇತರಿಸಿಕೊಳ್ಳುವುದು ಬಲು ಕಷ್ಟ.. ಅದಕ್ಕಾಗಿಯೇ ಮಕ್ಕಳ ಆರೋಗ್ಯ ಕೆಡದೇ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು..
ಸಾಮಾನ್ಯವಾಗಿ ಅಜೀರ್ಣದ ಸಮಸ್ಯೆ ಮಕ್ಕಳಲ್ಲಿ ಬೇಗ ಕಾಣಿಸಿಕೊಳ್ಳುತ್ತವೆ..

ಮಲ ಮೂತ್ರ ವಿಸರ್ಜಿಸಲು ತುಂಬಾ ಕಷ್ಟ ಪಡುತ್ತವೆ.. ಇದಕ್ಕಾಗಿಯೇ ವಿಳ್ಯೆದೆಲೆಯನ್ನು ಅಂಟಿಸುತ್ತಾರೆ.. ಹೀಗೆ ಮಾಡುವುದರಿಂದ ಮಗುವಿಗೆ ಅಜೀರ್ಣ ಸಮಸ್ಯೆ ಕಂಡುಬರುವುದಿಲ್ಲ.. ಮಲಮೂತ್ರ ವಿಸರ್ಜನೆ ಮಾಡುವಾಗ ಕಷ್ಟವೂ ಆಗುವುದಿಲ್ಲ.

ಮಕ್ಕಳ ಹೊಟ್ಟೆಗೆ ವಿಳ್ಯೆದೆಲೆಯನ್ನು ಅಂಟಿಸುವ ವಿಧಾನ.

  • ಮೊದಲು ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಿ ಅದಕ್ಕೆ ಹರಳೆಣ್ಣೆಯನ್ನು ಹಾಕಿ ಬತ್ತಿ ಯನ್ನು ಹಾಕಿ ಸಿದ್ಧಪಡಿಸಿಕೊಳ್ಳಿ..
  • ನಂತರ 4 ರಿಂದ 5 ವಿಳ್ಯೆದೆಲೆಯನ್ನು ತೆಗೆದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಸವರಿ..
  • ನಂತರ ದೀಪವನ್ನು ಹಚ್ಚಿ.. ವಿಳ್ಯೆದೆಲೆಯನ್ನು ಆ ದೀಪದಿಂದ ಬಿಸಿ ಮಾಡಿಕೊಳ್ಳಿ..
  • ಬೆಚ್ಚಗಾದ ಎಲೆಗಳನ್ನು ಮಗುವಿನ ಹೊಟ್ಟೆಯ ಭಾಗದಲ್ಲಿ ಅಂಟಿಸುತ್ತಾ ಬನ್ನಿ..

  • ನಂತರ ಒಂದು ಬಟ್ಟೆಯಿಂದ ವಿಳ್ಯೆದೆಲೆ ಒಳಗಿರುವಂತೆ ಹೊಟ್ಟೆಯನ್ನು ಮೆಲ್ಲಗೆ ಸುತ್ತಿ..
  • ಒಂದೆರೆಡು ಘಂಟೆ ಹಾಗೆ ಇರಲು ಬಿಡಿ.. ಹೆಚ್ಚಿನ ಸಮಯವಿದ್ದರೇ ಏನೂ ಅಪಾಯವಿಲ್ಲ..
  • ಆದರೇ ಎಲೆಯ ಬಿಸಿ ಯನ್ನು ನೀವೊಮ್ಮೆ ಪರೀಕ್ಷಿಸಿ ನಂತರ ಹೊಟ್ಟೆಯ ಮೇಲೆ ಇಡಿ.. ಕೇವಲ ಬೆಚ್ಚಗಿರುವಾಗ ಮಾತ್ರ ಅಂಟಿಸಿ..
  • ವಿಳ್ಯೆದೆಲೆ ಬದಲಾಗಿ ಎಕ್ಕದ ಎಲೆ ಉಗುನಿ ಎಲೆಯನ್ನು ಬಳಸಬಹುದು..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಉಪಯೋಗವಾಗಬಹುದು..