ಮಂಡ್ಯದಲ್ಲಿ ಚುನಾವಣಾ ಪ್ರಚಾರದ ಸದ್ದು ಮುಗಿಯಿತು; ಈಗ ಬೆಟ್ಟಿಂಗ್ ಜೋರಾಗಿದ್ದು ಹೊಲ, ಹಸು, ಹಣ, ಕೋಳಿ ಕುರಿ ಬೆಟ್ಟಿಂಗ್ ನಡೆಯುತ್ತಿವೆ..

0
389

ರಾಜ್ಯ ರಾಜಕೀಯದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದ ಚುನಾವಣೆ ಪ್ರಚಾರದಲ್ಲಿ ಹಲವು ಪೈಪೋಟಿ ನಡೆದು ದೇಶದಲ್ಲೇ ಹೆಸರುವಾಸಿಯಾಗಿದೆ. ಒಂದು ಕಡೆ ಮುಖ್ಯಮಂತ್ರಿಯವರ ಪುತ್ರನ ಸ್ಪರ್ಧೆ ಇನ್ನೊಂದು ಕಡೆ ಸುಮಲತಾ ಅಂಬರೀಶ್ ಸ್ಪರ್ಧೆ ನಡೆದಿದ್ದು, ಸುಮಲತಾ ಪರ ಪ್ರಚಾರಕ್ಕೆ ಇಳಿದ ದರ್ಶನ್, ಯಶ್ ವಿರುದ್ದ ಕುಮಾರಸ್ವಾಮಿ ಮತ್ತು ನಿಖಿಲ್ ಅವರ ಟೀಕೆಗಳು, ವ್ಯಂಗ್ಯಗಳು ಕೇಳಿಬಂದವು. ಅದರಂತೆ ಎರಡು ಪಕ್ಷಗಳ ಬೆಂಬಲಿಗರ ನಡುವೆ ಹಲವು ಕಾದಾಟಗಳು ನಡೆದವು. ಅಷ್ಟೇ ಅಲ್ಲದೆ ಮತದಾನದ ದಿನವು ಕೂಡ ಗಲಭೆ ಏಳುವ ಸಂಭವ ಇತ್ತು. ಇದೆಲ್ಲ ಮುಗಿದ ಮೇಲೆ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ಸದ್ದು ಕೇಳಿ ಬರುತ್ತಿದೆ.

ಹೌದು ಮತದಾನ ಮುನ್ನವೇ ಮಂಡ್ಯ ಕ್ಷೇತ್ರದಲ್ಲಿ ಬೆಟ್ಟಿಂಗ್ ಜೋರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು ಈಗ ಚುನಾವಣೆ ಮುಗಿದಿದ್ದು ಸೋಲು-ಗೆಲುವಿನ ಕುರಿತ ಲೆಕ್ಕಾಚಾರ ಶುರುವಾಗಿದೆ. ಅದರಲ್ಲೂ ಮಂಡ್ಯ ಕ್ಷೇತ್ರದಲ್ಲಿ ಅಭಿಮಾನಿಗಳ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ಕೆಲವರಂತು ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಯೇ ಗೆಲ್ಲಬಹುದು ಬೇಕಿದ್ದರೆ ಬೆಟ್‌ ಕಟ್ಟುತ್ತೇನೆ ಅಂದ್ರೆ, ಇದಕ್ಕೆ ಪ್ರತಿ ಸವಾಲು ಹಾಕುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಬೆಂಬಲಿಗರು ಸಾಧ್ಯನೇ ಇಲ್ಲ, ಗೆಲ್ಲೋದು ಸುಮಕ್ಕನೇ ಎಂದು ಬಾಜಿ ಕಟ್ಟಿಕೊಳ್ಳುತ್ತಿದ್ದಾರೆ.

ಸ್ವಾಭಿಮಾನ ವರ್ಸಸ್ ಅಭಿಮಾನದ ಹೆಸರಿನ ಜಿದ್ದಾಜಿದ್ದಿಯಿಂದಾಗಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತಿದೆ. ಜೆಡಿಎಸ್ ಕಾರ್ಯಕರ್ತರ ಪಡೆ ನಿಖಿಲ್ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆಂಬ ವಿಶ್ವಾಸದಲ್ಲಿದ್ದರೆ, ಸುಮಲತಾ ಬೆಂಬಲಿಗರು ನಿಖಿಲ್ ಸೋಲು ನಿಶ್ಚಿತ ಎಂದು ಲೆಕ್ಕ ಹಾಕಿದ್ದಾರೆ. ಏ.16ರ ತನಕ ಸುಮಲತಾ ಪರ ಇದ್ದ ಅಲೆ ನಂತರದ ಎರಡು ದಿನಗಳಲ್ಲಿ ಹರಿದ ಹಣದ ಸುನಾಮಿಯಿಂದಾಗಿ ವೇಗ ಕಳೆದುಕೊಂಡಿದೆ ಎಂಬ ಮಾತುಗಳು ದಳಪಡೆಯ ಉತ್ಸಾಹ ಹೆಚ್ಚಿಸಿದೆ. ಮತ್ತೊಂದೆಡೆ ಶೇಕಡಾವಾರು ಮತದಾನ ಹೆಚ್ಚಳವಾಗಿರುವುದು ಸುಮಲತಾಗೆ ಹೆಚ್ಚು ಅನುಕೂಲವಾಗುತ್ತದೆ ಎಂಬ ವಾದವೂ ಇದೆ. ಈ ಎಲ್ಲ ಲೆಕ್ಕಾಚಾರಗಳ ಆಧಾರದ ಮೇಲೆ ಕಣದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ.

ಹೊಲ ಕುರಿ ಕೋಳಿ ಬೆಟ್ಟಿಂಗ್?

ಸುಮಲತಾನೋ? ನಿಖಿಲೋ? ಎಷ್ಟು ಕಟ್ತೀಯಾ? ನೂರಕ್ಕೆ ಸಾವಿರನಾ, ಇಲ್ಲ ಸಾವಿರಕ್ಕೆ ಹತ್ತು ಸಾವಿರಾನಾ? ನಂದು ಒಂದು ಜತೆ ಎತ್ತು ನಿಂದೇನು? ನಂದು ಒಂದ್‌ ಎಕರೆ ಜಮೀನಿಗೆ ನಿಂದು ಎರಡು ಎಕರೆ ಹೊಲ”. ಇದು ಜಿಲ್ಲೆಯ ಬಹುತೇಕ ಅರಳಿಕಟ್ಟೆಯಲ್ಲಿ ಜನರ ಗುಂಪು ಮಾತಾಡಿಕೊಳ್ಳುತ್ತಿರುವ ಬಗೆ. ಈಗ ಲೋಕಸಭೆ ಚುನಾವಣೆ ಬೆಟ್ಟಿಂಗ್‌ ಆರಂಭಗೊಂಡಿದೆ. ಇವೆಲ್ಲವೂ ತೆರೆಮರೆಯಲ್ಲಿ ನಡೆಯುವುದರಿಂದ ಪೊಲೀಸರೂ ಏನೂ ಮಾಡದಂತಾಗಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡು ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಇಡೀ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಬೆಟ್ಟಿಂಗ್‌ ನಡೆಯುತ್ತಿದ್ದು. ಜೋಡೆತ್ತು, ಹಸು, ಕುರಿಗಳೊಂದಿಗೆ ಕೃಷಿ ಜಮೀನು, ಹೊಲವನ್ನು ಪಣಕ್ಕಿಟ್ಟು ತಮ್ಮ ನೆಚ್ಚಿನ ಅಭ್ಯರ್ಥಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮತದಾನಕ್ಕೂ ಮುನ್ನವೇ ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಚರ್ಚೆಯೊಂದಿಗೆ ಈ ರೀತಿ ವಿನೂತವಾಗಿ ಬೆಟ್ಟಿಂಗ್‌ ದಂಧೆ ಶುರುವಾಗಿದೆ.

ಎಲ್ಲಲ್ಲಿ ಬೆಟ್ಟಿಂಗ್ ಜೋರು?

ಮಂಡ್ಯ, ಮೇಲುಕೇಟೆ, ನಾಗಮಂಗಲ, ಬೆಂಗಳೂರಿನಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದು ಇದರಲ್ಲಿ ಬರಿ ಗಂಡು ಮಕ್ಕಳು ಮಾತ್ರವಲ್ಲದೆ ಹೆಣ್ಣು ಮಕ್ಕಳು ಲಕ್ಷಗಟ್ಟಲೆ ಬೆಟ್ಟಿಂಗ್ ಮಾಡುತ್ತಿದ್ದಾರೆ. ಮಂಡ್ಯದ ಕಸಬಾ ಹೋಬಳಿಯ ಮಹಿಳೆಯೊಬ್ಬರು ಸುಮಲತಾ ಗೆಲ್ಲುತ್ತಾರೆಂದು 1 ಲಕ್ಷ ರೂ. ಬೆಟ್ ಕಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಮೇಲುಕೋಟೆ, ನಾಗಮಂಗಲ ಕ್ಷೇತ್ರದ ಹಲವರು ಜೆಡಿಎಸ್ ಗೆಲ್ಲಲಿದೆ, ಬೆಟ್ ಕಟ್ಟುವವರಿದ್ದರೆ ಬರಬಹುದು ಎಂದು ನೇರವಾಗಿ ಕರೆಕೊಟ್ಟಿದ್ದಾರೆ.

Also read: ಬಾಗಲಕೋಟೆ, ಚಿಕ್ಕೋಡಿಯಲ್ಲಿ ಸೇರಿದ್ದ ಜನಸ್ತೋಮ ನೋಡಿ ಮೋದಿ ಫುಲ್ ಖುಷ್; ತಮಗೆ ಅದ ಅನುಭವವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡ ಮೋದಿ..