ದಸರಾ, ದೀಪಾವಳಿ ಆಫರ್ ಎಂದು Amazon, Flipkart ಹೆಸರಲ್ಲಿ ಆನ್ಲೈನ್ ಕಳ್ಳರಿಂದ ನಡೆಯುತ್ತಿದೆ 7 ರೀತಿಯಲ್ಲಿ ವಂಚನೆ ಎಚ್ಚರ.!

0
370

ದಸರಾ ಹಬ್ಬದ ಸಮಯದಲ್ಲಿ ಆನ್ಲೈನ್ ಮಾರಾಟ ಜೋರಾಗಿದ್ದು Amazon, Flipkart ಸೇರಿದಂತೆ ಹಲವು online ಕಂಪನಿಗಳು ಮಾರಟಕ್ಕೆ ವಿವಿಧ ಆಫರ್ ನೀಡುತ್ತಿದ್ದು ಗ್ರಾಹಕರನ್ನು ಸೇಳೆಯುತ್ತಿವೆ, ಇದನ್ನೇ ಬಂಡವಾಳ ಮಾಡಿಕೊಂಡ ಆನ್ಲೈನ್ ಕಳ್ಳರು ಹಲವು ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ. ಅದಕ್ಕಾಗಿ ಯಾವುದೇ ಆಫರ್ ಬಗ್ಗೆ ನಿಮಗೆ ಕಾಲ್, ಮೆಸೇಜ್ ಬಂದರು ಅದಕ್ಕೆ ರಿಪ್ಲೇ ಮಾಡದೆ ಎಚ್ಚರವಹಿಸುವುದು ಒಳ್ಳೆಯದು, ವಂಚಕರು ಕ್ಯಾಶ್‌ಬ್ಯಾಕ್ ನೀಡುವ ಬಗ್ಗೆ ಹೇಳುತ್ತಾರೆ. ಅದರಂತೆ ಭಾರತದಲ್ಲಿ ಹೆಚ್ಚಾಗಿ ಆನ್‌ಲೈನ್ ಶಾಪಿಂಗ್‌ಗೆ ಬಂದಾಗ ಸಾಮಾನ್ಯವಾಗಿ ಈ 7 ಹಗರಣಗಳು ನಡೆಯುತ್ತೇವೆ. ಇದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

1. ಕ್ಯಾಶ್ ಬ್ಯಾಕ್ ಆಫರ್

ವಂಚಕರು ಗ್ರಾಹಕರಿಗೆ ವಸ್ತುಗಳನ್ನು ಕಡಿಮೆ ಬೆಲೆಯ ತೋರಿಸಿ ಇದನ್ನು ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಕ್ಯಾಶ್ ಬ್ಯಾಕ್ ಪಡೆಯಿರಿ ಎಂದು ಹೇಳುತ್ತಾರೆ. ಇಂತಹ ಪ್ರಕರಣಗಳು ಹೆಚ್ಚಾಗಿ ಸಣ್ಣ ನಗರಗಳಲ್ಲಿ ನಡೆಯುತ್ತೇವೆ.

2. ಖರೀದಿಯ ನಂತರ ಲಕ್ಕಿ ಡ್ರಾ, ವಂಚನೆ

ಯಾವುದೇ ದಿನಗಳಲ್ಲಿ ನೀವು ವಸ್ತುಗಳನ್ನು ಖರೀದಿ ಮಾಡಿದ ಮಾಹಿತಿಯನ್ನು ಪಡೆದು, ವಂಚಕರು ಗ್ರಾಹಕರಿಗೆ ನೀವೂ ಕಳೆದ ಬಾರಿ ಆನ್ಲೈನ್-ನಲ್ಲಿ ವಸ್ತು ತೆಗೆದುಕೊಂಡಿದ್ದಕ್ಕೆ 15 ಲಕ್ಷ ಲಕ್ಕಿ ಡ್ರಾ ಬಹುಮಾನ ಬಂದಿದೆ. ಅದರ ಜೊತೆಗೆ ವಿವಿಧ ಕಂಪನಿಯ ಕಾರ್ ಕೂಡ ನಿಮ್ಮ ನಂಬರ್ ಗೆ ಹತ್ತಿದೆ. ಅದಕ್ಕಾಗಿ ಮುಂಗಡ ಹಣವಾಗಿ 10 ಸಾವಿರ ಅಥವಾ ಅದಕ್ಕೂ ಹೆಚ್ಚಿನ ಅಕೌಂಟ್ ಜಮಾ ಮಾಡಿ ಎಂದು ಹೇಳುತ್ತಾರೆ. ನಿವೇನಾದರು ಹಣ ಹಾಕಿದರೆ ಮೋಸ ಮಾಡುತ್ತಾರೆ.

3. whatsapp- ನಲ್ಲಿ ರಿಯಾಯತಿ

ಜನಪ್ರಿಯ ಬ್ರಾಂಡ್‌ಗಳ ಉತ್ಪನ್ನಗಳ ಮೇಲಿನ ರಿಯಾಯಿತಿಯ ನಿಮ್ಮ ವಾಟ್ಸಾಪ್ ಗುಂಪಿನಲ್ಲಿ ಯಾವುದೇ ಸಂದೇಶ ಬಂದರು ಅದನ್ನು ನಂಬಬೇಡಿ. ಇವೂ ಹೆಚ್ಚಾಗಿ ಫ್ಲಿಪ್‌ಕಾರ್ಟ್ / ಅಮೆಜಾನ್ ಖಾತೆ ವಿವರಗಳನ್ನು ಹಂಚಿಕೊಳ್ಳಲು ಆಮಿಷ ಒಡ್ಡಲು 5 ಗ್ರೂಪ್-ಗಳಿಗೆ ಹಂಚಿಕೊಳ್ಳಿ ಎಂದು ಹೇಳುತ್ತಾರೆ. ಇದರಿಂದ ಆನ್ಲೈನ್ ಬ್ಯಾಂಕಿಂಗ್ ವಿವರವನ್ನು ಕದಿಯುತ್ತಾರೆ.

4. ಡೆಬಿಟ್, ಕ್ರೆಡಿಟ್ ಕಾರ್ಡ್ ಕೊಡುವ ಕಂಪನಿಯ ಹೆಸರಲ್ಲಿ ಕರೆ ಬಂದು. ನಿಮ್ಮ ಕಾರ್ಡ್ ಸ್ವಲ್ಪ ಹೊತ್ತಿನಲ್ಲಿ ಬಂದ್ ಆಗುತ್ತೆ, ಆದಕಾರಣ ನಾವು ಹೇಳುವ ಪ್ರಕಾರ ಮಾಡಿ.
ನಿಮ್ಮ ಕಾರ್ಡ್ ಮೇಲಿರುವ ನಂಬರ್ ಹೇಳಿ ನಂತರ OTP ಬರುತ್ತೆ ಅದನ್ನು ಹೇಳಿ ಎಂದು ಹೇಳುತ್ತಾರೆ ಅದನೆದ್ದಾರು ಹೇಳಿದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಸಂಪೂರ್ಣವಾಗಿ ದೋಚುತ್ತಾರೆ.

5. ವಿಶೇಷ ವಸ್ತುಗಳ ಮೇಲೆ ರಿಯಾಯಿತಿ

ನಿಮ್ಮ ಮೊಬೈಲ್ ಗೆ ಕರೆಮಾಡಿ. ವಿಶೇಷ ಉಡುಗರೆ ಕೊಡುತ್ತೇವೆ. ಎಂದು ಹಲವು ಗೃಹೋಪಯೋಗಿ ವಸ್ತುಗಳ ಕಂಪನಿ ಹೆಸರನ್ನು ಹೇಳುತ್ತಾರೆ. ನಂತರ ನಿಮ್ಮ ಫೋನ್ ಸಂಖ್ಯೆಯಲ್ಲಿ ಲಿಂಕ್ ಕಳುಹಿಸುತ್ತಾರೆ. ಅದರಂತೆ ಬುಕಿಂಗ್ ಮೊತ್ತವನ್ನು ಕಳುಹಿಸುವ ಮೂಲಕ ಖರೀದಿಯನ್ನು ಖಚಿತಪಡಿಸುತ್ತಾರೆ. ಇದರಿಂದ ನಿಮ್ಮ ಬ್ಯಾಂಕಿಂಗ್ ವಿವರವನ್ನು ಕದಿಯುತ್ತಾರೆ.

6. SMS ಅಥವಾ ಇಮೇಲ್ ಹಗರಣ

ಹಬ್ಬದ ದಿನಗಳಲ್ಲಿ ಇಮೇಲ್ ಅಥವಾ, ನಾರ್ಮಲ್ ಮೆಸೇಜ್ ಬರುತ್ತೇವೆ ಇವುಗಳಲ್ಲಿ ಲಿಂಕ್ ಕೂಡ ಇರುತ್ತೆ ಅವುಗಳನ್ನು ಓಪನ್ ಮಾಡಿದರೆ ಬ್ಯಾಂಕ್ ಡಿಟೈಲ್ ಕೇಳುತ್ತೆ ಅದನ್ನು ಭರ್ತಿ ಮಾಡಿದರೆ ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ.

7. ಕೆಲವು 100 ರಷ್ಟು ಆಫರ್ ಇದೆ ಎನ್ನುವ ಸಂದೇಶ ಬರುತ್ತೆ ಅದರಂತೆ ಉಚಿತವಾಗಿ ವಸ್ತುಗಳನ್ನು ಪಡೆಯಲು ಆನ್‌ಲೈನ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಕೋಪನ್
ಪಡೆಯರಿ ಎಂದು ಹೇಳುತ್ತಾರೆ. ಹೀಗೆ ಓಪನ್ ಮಾಡಿದರೆ ನಿಮ್ಮ ಹಣವನ್ನು ವಂಚನೆ ಮಾಡುತ್ತಾರೆ. ಅದಕ್ಕಾಗಿ ಆನ್ಲೈನ್ ಮೂಲಕ ಬರುತ್ತೆ ಯಾವುದೇ ಮೆಸೇಜ್, ಕಾಲ್-ಗಳನ್ನು ನಂಬಬೇಡಿ.