ಭಗವದ್ಗೀತೆಯಲ್ಲಿ ಮಧುಮೇಹಕ್ಕೆ ಪರಿಹಾರವಿದೆಯಾ..?

0
2265

ಮಧುಮೇಹಕ್ಕೆ ಕಾರಣ “ಮಧುಮೋಹ”ವಲ್ಲ; ಮನದೊಳಗಿನ “ವ್ಯಾಮೋಹ”!!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಭಾರತ ಮಧುಮೇಹ (ಡಯಾಬಿಟಿಸ್)ದ ರಾಜಧಾನಿ. ‘ಸಾವಿಲ್ಲದಾ ಮನೆಯ ಸಾಸಿವೆ ಇಲ್ಲ‘ ಎಂಬಂತೆ
ಮಧುಮೇಹಿಗಳಿಲ್ಲದ ಮನೆಗಳು ಅಪರೂಪವಾಗುತ್ತಿವೆ. ಮಧುಮೇಹ ಕೇವಲ ಪಿತ್ರಾರ್ಜಿತವಾಗಿ (ಹೆರೆಡಿಟರಿ) ವಂಶವಾಹಿಯಾಗಿ ಕಾಣಿಸಿಕೊಳ್ಳುವುದಿಲ್ಲ,”ಸ್ವಯಾರ್ಜಿತ ಕರ್ಮ”ಗಳೂ ಕಾರಣವಾಗುತ್ತವೆ. ಸ್ವಯಾರ್ಜಿತಗಳೆಂದರೆ ಕ್ರಮಬದ್ಧವಲ್ಲದ ಆಹಾರ, ದೈಹಿಕ ಚಟುವಟಿಕೆ/ ಮಾನಸಿಕ ವಿಶ್ರಾಂತಿ ರಹಿತ ದಿನಚರಿ, ಅನಿಯಮಿತ ನಿದ್ರೆಯ ಸಮಯ ಇವಿಷ್ಟೂ ಅಲ್ಲದೆ ಅತಿಯಾದ ಮಾನಸಿಕ ಒತ್ತಡ. ಅದನ್ನೇ ನಾವು ಕರೆಯುವುದು “ಸ್ಟ್ರೆಸ್”.

ಸ್ಟ್ರೆಸ್ ನಮ್ಮಆರೋಗ್ಯವನ್ನು ಹಾಳುಮಾಡಲು, ಕಾಯಿಲೆಗಳು ಕಾಣಿಸಿಕೊಳ್ಳಲು ಮೂಲವಾಗುತ್ತದೆ. ಸರಳವಾದ ಉದಾಹರಣೆ: ನಾವು ಮನೆಯಲ್ಲಿ ಮಾಮೂಲಿಯಂತೆ ಅಡುಗೆ ಮಾಡಿದಾಗ ಎಲ್ಲರೂ ಚಪ್ಪರಿಸಿ ತಿಂದು ಸೂಪರ್ ಎನ್ನುತ್ತಾರೆ. ಬದಲಾಗಿ ನೆಂಟರು ಬಂದಾಗ ಮಾಡುವ ಅದೇ ಪಾಕ ಅಷ್ಟೊಂದು ಚೆನ್ನಾಗಿ ಬಂದಿರುವುದಿಲ್ಲ!! ಅಡುಗೆ ಎಲ್ಲಿ ಚೆನ್ನಗಾಗುವುದಿಲ್ಲವೋ ಎಂಬ ಆತಂಕ. ಅದೇ ರೀತಿ ಮಾಡಿದ ಪಾಕ ಕೂಡ ಕೈಕೊಡುತ್ತದೆ!! ಹಾಳಾದರೆ ಮರ್ಯಾದೆ ಹೋಗುವುದೆಂಬ ಭಯ.”ನಾನು ಮಾಡಿದೆ” ಎಂಬುದಕ್ಕೆ ತಡೆ ಬಿದ್ದಂತೆ. ಸ್ಟ್ರೆಸ್/ ಮಾನಸಿಕ ಒತ್ತಡಕ್ಕೆ ಮೂಲ ಕಾರಣ ನಮ್ಮಲ್ಲಿರುವ ನಾನು, ನನ್ನದು, ನನ್ನಿಂದ ಎಂಬ “ಮೋಹ”. ಸುಖವನ್ನಷ್ಟೇ ಅನುಭವಿಸಬೇಕೆಂಬ “ವ್ಯಾಮೋಹ”. ಅದನ್ನೇ ನಾವು “ರಾಜಸಿಕ ಕರ್ಮ” ಎನ್ನುತ್ತೇವೆ.

* ರಾಜಸಿಕ ಕರ್ಮ ಎಂದರೇನು?

ಯತ್ತು ಕಾಮೇಪ್ಸುನಾ ಕರ್ಮ ಸಾಹನ್ಕಾರೇಣ ವಾ ಪುನಃ!
ಕ್ರಿಯತೇ ಬಹುಲಾಯಾಸಂ ತದ್ ರಾಜಸಮುದಾಹೃತಮ್!! (ಭಗವದ್ಗೀತಾ, ಅಧ್ಯಾಯ 18, ಶ್ಲೋಕ 24)

ಯಾವಾಗ ಕರ್ಮಗಳು ಫಲಾಪೇಕ್ಷೆಯಿಂದ ಕೂಡಿರುತ್ತದೆಯೋ, ಜೊತೆಗೆ ಅಹಂಕಾರದಿಂದ ಅಥವಾ ಮತ್ತೆ ಮತ್ತೆ ಮಾಡಲ್ಪಡುತ್ತದೆಯೋ, ಅತಿಯಾದ ಶ್ರಮ/ಆಯಾಸವನ್ನುಂಟು ಮಾಡುವುದೋ ಅದನ್ನೇ ರಾಜಸಿಕ ಕರ್ಮ ಎನ್ನುತ್ತಾರೆ. ಸಾಕಷ್ಟು ಹಣಸಂಪಾದಿಸಬೇಕು, ಆದಷ್ಟು ಐಷಾರಾಮದ ಜೀವನ ನಡೆಸಬೇಕೆಂಬ ಮೋಹ. ಅದಕ್ಕಾಗಿ ನಾವು ತಿಂಗಳ ಸಂಬಳ ಮನಸ್ಸಲ್ಲಿಟ್ಟುಕೊಂಡೇ ಕೆಲಸ ಆರಂಭಿಸುತ್ತೇವೆ. ನನ್ನಿಂದಾಗಿ ಆ ಕೆಲಸಗಳು ಯಶಸ್ವಿಯಾಗುತ್ತಿವೆ ಎಂಬ ಅಹಂಕಾರ ಕೂಡಿಕೊಳ್ಳುತ್ತದೆ. ಬಹಳಷ್ಟು ಆಯಾಸವಾಗುತ್ತಿರುತ್ತದೆ ಹಾಗಿದ್ದೂ ನಿದ್ದೆ ಕೆಟ್ಟು ದುಡಿಯುತ್ತೇವೆ. (ಸಾಫ್ಟ್ ವೇರ್ ಇಂಜಿನಿಯರ್ ಗಳಲ್ಲಿ ಈ ಪದ್ಧತಿ ಸರ್ವೇ ಸಾಮಾನ್ಯ. ಕೆಲವೊಮ್ಮೆ ಅನಿವಾರ್ಯ!! ಆದರೆ ದುಡ್ಡುಗಳಿಸುವ ಆಸೆಯುಳ್ಳ ರಾಜಕಾರಣಿಗಳು ನಿದ್ದೆಗೆಟ್ಟು ಹಗಲೂ ರಾತ್ರಿ ಕಷ್ಟಪಡುತ್ತಿರುತ್ತಾರೆ!!). ಇದು ಕೇವಲ ಒಂದೆರಡು ದಿನವಲ್ಲ.. ಪ್ರತಿನಿತ್ಯ, ಮತ್ತೆ ಮತ್ತೆ ಮಾಡುತ್ತಿರುತ್ತೇವೆ. ಇದಲ್ಲವೇ ನಾವು ದಿನಂಪ್ರತಿ ಕಾಣುತ್ತಿರುವ “ರಾಜಸಿಕ ಕರ್ಮ”!!

* ಮೋಹವು ಹೇಗೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ?

ಧ್ಯಾಯತೇ ವಿಷಯಾನ್ ಪುಂಸಃ ಸನ್ಗಸ್ತೇಷೂಪಜಾಯತೇ
ಸನ್ಗಾತ್ಸಞ್ಜಾಯತೇ ಕಾಮಃ ಕಾಮಾತ್ಕ್ರೋಧೋಭಿಜಾಯತೇ!!
ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ
ಸ್ಮೃತಿ ಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ!!(ಭಗವದ್ಗೀತೆ, ಅಧ್ಯಾಯ 2, ಶ್ಲೋಕ 62,63)

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಂದ್ರಿಯ ವಸ್ತುಗಳನ್ನು ಕುರಿತು ಚಿಂತಿಸುವ ಮನುಷ್ಯನಿಗೆ ಅವುಗಳಲ್ಲಿ ಆಸಕ್ತಿ ಹುಟ್ಟುತ್ತದೆ. ಇಂತಹ ಆಸಕ್ತಿಯಿಂದ ಕಾಮವು ಹುಟ್ಟುತ್ತದೆ. ಕಾಮದಿಂದ ಕ್ರೋಧವು ಉದ್ಭವವಾಗುತ್ತದೆ. ಕ್ರೋಧದಿಂದ ಸಮ್ಮೋಹವು ಉಂಟಾಗುತ್ತದೆ;ಸಮ್ಮೋಹದಿಂದ ಸ್ಮೃತಿ ಭ್ರಮೆಯಾಗುತ್ತದೆ. ಸ್ಮೃತಿ ಭ್ರಮೆಯಿಂದ ಬುದ್ಧಿನಾಶವಾಗುತ್ತದೆ. ಬುದ್ಧಿ ನಾಶವಾದಾಗ ಮನುಷ್ಯ ಹಾಳಾಗುತ್ತಾನೆ.
ಇದನ್ನು ನಮ್ಮ ದಿನಚರಿಗೆ ಹೋಲಿಸಿದಾಗ.. ಕಾರು, ಬಂಗಲೆ ಬೇಕೆನ್ನುವ “ಇಂದ್ರಿಯಗಳ ಆಸೆ”. ಅದೇ ಮೋಹ. ಸಾಕಷ್ಟು ದುಡ್ಡುಗಳಿಸಬೇಕು, ನನ್ನದು ಎನ್ನುವ ಅಧಿಕಾರ ಸಂಪಾದಿಸಬೇಕು ಎಂಬ ಮೋಹದಿಂದ ಆರಂಭಿಸುವ ಕಾರ್ಯ. ಅದರ ಕುರಿತು ಚಿಂತಿಸಿ ಚಿಂತಿಸಿ ಅದರ “ಸಂಗ” ಬೆಳೆಯುವುದು (ಅಂದರೆ ನನಗೇನಾದರು ಲಾಭವಿದ್ದರೆ ಮಾತ್ರ ಆ ಕೆಲಸ ಮಾಡುವುದು ಎಂಬ ಮನಃಸ್ಥಿತಿ!!). ಇದರಿಂದ ಆ ಕೆಲಸದ ಮೇಲೆ “ಕಾಮ” ಅಂದರೆ ಆಸೆ ಬೆಳೆಯುವುದು. ಹಾಗೆಯೇ ಆ ಕೆಲಸ ಎಲ್ಲಿ ಹಾಳಾಗಿಬಿಡುವುದೋ ಎಂಬ ಚಿಂತೆ. ಅದೇ “ಕ್ರೋಧ”.(ಆಫೀಸ್ ನಲ್ಲಿ ಬಾಸ್ ಸಹೋದ್ಯೋಗಿಗಳ ಮೇಲೆ ಸಿಟ್ಟುಮಾಡಿಕೊಂಡಂತೆ. ಕೆಲಸ ಹಾಳಾದಲ್ಲಿ ತನ್ನ ಹೆಸರು ಹಾಳಾಗುವುದು ಎಂಬ ಚಿಂತೆ!!). ಅದೇ ಕ್ರೋಧವು ” ಸಮ್ಮೋಹ” ಗೊಳಿಸುತ್ತದೆ. (ಅಂದರೆ ವಶದಲ್ಲಿರುವುದು: ಇತರೆ ಚಿಕ್ಕ ಪುಟ್ಟ ವಿಷಯಗಳಿಗೂ ರೇಗುವುದು). ಸಮ್ಮೋಹದಿಂದ “ಸ್ಮೃತಿ ವಿಭ್ರಮ”ವಾಗುವುದು. ಸ್ಮೃತಿ ಎಂದರೆ ನೆನಪು. ಅನುಭವಿಸಿದ ವಿಷಯಗಳನ್ನು ಕಳೆದುಕೊಳ್ಳದಿರುವಿದು. ಸೃತಿ ವಿಭ್ರಮವೆಂದರೆ ತಾನು ಹಿಂದೆ ಅನುಭವಿಸಿದ ತೊಂದರೆಯನ್ನು ನೆನಪಿಸಿಕೊಳ್ಳದಿರುವುದು. (ಬಾಸ್ ಆದವನಿಗೆ ಒಂದು ಕೆಲಸ ಸಹೋದ್ಯೋಗಿಗಳು ಇಂದೇ ಮಾಡಿಕೊಡಬೇಕು ಎಂಬ ಹಠ. ಅದೇ ಕೆಲಸವನ್ನು ಬಾಸ್ ಸ್ವತಃ ಮಾಡಲು ಒಂದು ವಾರ ತೆಗೆದುಕೊಂಡಿದ್ದ!!!).

ಸ್ಮೃತಿ ಭ್ರಂಶವಾದಾಗ (ಹಾಳಾದಾಗ) ಬುದ್ಧಿನಾಶವಾಗುತ್ತದೆ. ಬುದ್ಧಿ ಎಂದರೆ ಯಾವುದು ಸರಿ /ಯಾವುದುತಪ್ಪು ಎಂದು ತಿಳಿದುಕೊಳ್ಳುವುದು. ನಾಶವಾದಾಗ ಎಂದರೆ ತಪ್ಪೆಂದು ಗೊತ್ತಿದ್ದೂ ಆ ಕೆಲಸದಲ್ಲಿ ತೊಡಗಿಕೊಳ್ಳುವುದು. (ಮದ್ಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದೆ. ಆದರೆ ವೀಕ್ ಎಂಡ್ ಬಂದಾಗ ಬುದ್ಧಿನಾಶವಾಗಿರುತ್ತದೆ!! ಗೊತ್ತಿದ್ದೂ ಸಾರಾಯಿ ಕುಡಿಯುತ್ತಾರೆ!!). ನಿದ್ದೆ ಕೆಡುವುದು ಒಳ್ಳೆಯದಲ್ಲ ಎಂದು ಗೊತ್ತಿದೆ. ಹಾಗಿದ್ದೂ ನಿದ್ದೆ ಕೆಟ್ಟು ದುಡಿಯುತ್ತಾರೆ ( ಹೆಚ್ಚು ದುಡ್ಡು ಸಂಪಾದಿಸಬೇಕಲ್ಲ??). ಅದಲ್ಲವೇ ಮಾನಸಿಕ ಒತ್ತಡ?? ಬೇಗ ಎದ್ದು ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿದೆ. ಹಾಗಿದ್ದೂ ಮಾಡುವುದಿಲ್ಲ!! ಆಗ ಉದ್ಭವಗೊಳ್ಳುವುದೇ “ಪ್ರಣಶ್ಯತಿ” ಅಂದರೆ ಹಾಳಾಗುವುದು. ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ ಹಾಳಾಗುತ್ತಾನೆ. ಅದಲ್ಲವೇ ಅನಾರೋಗ್ಯವೆಂದರೆ? ಸಾಕಲ್ಲವೇ ಮಧುಮೇಹ ಆರಂಭಗೊಳ್ಳಲು??!!

ಮಾನಸಿಕ ಒತ್ತಡ ಹೆಚ್ಚು ದೀರ್ಘವಾದಂತೆ ಶರೀರದ “ಸ್ಟ್ರೆಸ್ ಹಾರ್ಮೋನ್’ಗಳ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಇದರಿಂದ ‘ಇನ್ಸುಲಿನ್ ಪ್ರತಿರೋಧ’ ಆರಂಭವಾದಂತೆ ಶರೀರದ ಸಕ್ಕರೆಯ ಅಂಶ ಹೆಚ್ಚಾಗತೊಡಗುತ್ತದೆ. ಅದುವೇ “ಡಯಾಬಿಟಿಸ್”. ಹಾಗಾಗಿ ಮಧುಮೇಹ ಬರಲು “ಮಧುಮೋಹ” ಬೇಕೆಂದಿಲ್ಲ. ಅಂದರೆ ಅತಿಯಾಗಿ ಸಿಹಿ ಸೇವನೆ ಮಾಡಬೇಕೆಂದಿಲ್ಲ. ಕೇವಲ ಸುಖಪಡಬೇಕು, ಐಷಾರಾಮಿ ಜೀವನ ನಡೆಸಬೇಕು, ನಾನು/ನನ್ನದೆಂಬ ಅಧಿಕಾರ ಹೊಂದಿರಬೇಕೆಂಬ “ವ್ಯಾಮೋಹ”ವೊಂದಿದ್ದರೆ ಸಾಕು!!!

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522