ಭಾರತ್ ಬಂದ್ ಬಿಸಿ ಹೇಗಿದೆ? ಜಿಲ್ಲಾವಾರು ಪ್ರತಿಭಟನೆಯ ಪ್ರತಿಕ್ರಿಯೆ ಹೇಗಿದೆ ನೋಡಿ..

0
432

ಕೇಂದ್ರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ದೇಶದೆಲ್ಲಡೆ ಹೋರಾಟ ನಡೆಯುತ್ತಿದೆ, ಕೆಲವು ರಾಜ್ಯಗಳಲ್ಲಿ ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೆಡೆಯುತ್ತಿದರೆ, ಇನ್ನು ಕೆಲವು ರಾಜ್ಯಗಳಲ್ಲಿ ಅಷ್ಟೊಂದು ಬಿರುಸಿನ ಕಾವು ನಡೆಯುತ್ತಿಲ್ಲ, ಕರ್ನಾಟಕದಲ್ಲಿವು ಕೂಡ ಇದೆ ಪರಿಸ್ಥಿತಿ ಮುಂದುವರೆದಿದೆ. ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇದ್ದರೆ ಕೆಲವು ಜಿಲ್ಲೆಗಳಲ್ಲಿ ರಜೆ ನೀಡಿಲ್ಲ, ಕೆಲವು ಸರಕಾರಿ ಆಫೀಸ್ ಗಳು ಎಂದಿನಂತೆ ತೆರೆದಿವೆ.

ಬೆಂಗಳೂರು ನಗರದಲ್ಲಿ BMTC, KSRTC ಸೇರಿದಂತೆ ಆಟೋ, ಕ್ಯಾಬ್, ಮತ್ತು ಖಾಸಗಿ ವಾಹನಗಳು ರಸ್ತೆಗೆ ಇಳಿದು ಸಂಚಾರಿ ನಡೆಸಿವೆ, ಕೆಲವೊಂದು ಮಾರ್ಗಗಳಲ್ಲಿ ಬಸ್ ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು ಮತ್ತಷ್ಟು ಬಸ್ ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ. 2543 ಕೆಎಸ್ ಆರ್ ಟಿಸಿ ಬಸ್ ಗಳ ಪೈಕಿ 1104 ಬಸ್ ಗಳ ಸಂ ಚಾರ ಆರಂಭವಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಫ್ಲೈ ಬಸ್ ಗಳ ಸಂಚಾರ ಶುರುವಾಗಿದೆ. ಇದರಿಂದ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ಇನ್ನು

ಉಳಿದ ಜಿಲ್ಲೆಗಳಲ್ಲಿ ಹೇಗಿದೆ ಬಂದ್ ಬಿಸಿ;

ಹುಬ್ಬಳ್ಳಿ ಮತ್ತು ಬೆಳಗಾವಿ;

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್‌ಗೆ ಭಾಗಶಃ ಬೆಂಬಲ ವ್ಯಕ್ತವಾಗಿದೆ. ಸರಕಾರಿ ಬಸ್ ಸೇವೆ ಸ್ಥಗಿತಗೊಂಡಿದ್ದು, ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಆಟೋ ಸೇವೆ ಕೂಡ ಬಹುತೇಕ ಸ್ಥಗಿತಗೊಂಡಿದೆ. ಬಂದ್ ಬಿಸಿ ಜೋರಾಗಿ ಮುಟ್ಟಿದೆ. ಬೆಳಗಾವಿ ನಗರದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ. ಇದ್ದು ಸಿಟಿ ಬಸ್, ಆಟೋ ರಿಕ್ಷಾ ಸಂಚಾರ ಸ್ಥಗಿತ, ಶಾಲಾ ಕಾಲೇಜುಗಳಿಗೆ ರಜೆ. ಉಳಿದಂತೆ ಜನಜೀವನ ಎಂದಿನಂತೆ. ಅಂಗಡಿಗಳಲ್ಲೂ ಸಹಜ ವ್ಯಾಪಾರ ವಹಿವಾಟು. ಎಲ್ಲೆಡೆ ಪೊಲೀಸ್ ಬಂದೋಬಸ್ತ್

ಕೊಡಗು ಮತ್ತು ಚಿಕ್ಕಮಗಳೂರು 50-50;

ಕೊಡಗಿನಲ್ಲಿ ಬಂದ್ ಬಿಸಿ 50-50 ಯಾಗಿದ್ದು ಸರ್ಕಾರಿ ಬಸ್ ಸಂಚಾರ ರದ್ದಾಗಿರುವುದು ಹೊರತುಪಡಿಸಿ ಉಳಿದಂತೆ ಎಲ್ಲವೂ ಸಾಮಾನ್ಯವಾಗಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್ಸುಗಳ ಸಂಚಾರವೂ ಎಂದಿನಂತೆಯೇ ಇದೆ. ಆಟೋ, ಟ್ಯಾಕ್ಸಿ, ಹಾಗೂ ಖಾಸಗಿ ಬಸ್ಸುಗಳು ಸಂಚಾರವೂ ಸಾಮಾನ್ಯವಾಗಿವೆ. ಖಾಸಗಿ, ಸರ್ಕಾರಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಜನಜೀವನ ಸಾಮಾನ್ಯ ಸ್ಥಿತಿಯಲ್ಲಿದೆ. ಆದರೆ ಜಿಲ್ಲೆಯ ಹೊರಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಮಾತ್ರ ವಾಹನವಿಲ್ಲದೆ ಪರದಾಡುವಂತಾಗಿದೆ. ಚಿಕ್ಕಮಗಳೂರು ನಗರದ ಅಂಚೆ ಕಚೇರಿ ಮುಂದೆ ನೌಕರರು ಪ್ರತಿಭಟನೆ ನಡೆಸಿದರು. ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹ. ನೂರಕ್ಕೂ ಹೆಚ್ಚು ಅಂಚೆ ನೌಕರರಿಂದ ಆಕ್ರೋಶ. ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದ ಅಂಚೆ ನೌಕರರು.

ಹಾವೇರಿ ಮತ್ತು ಬಾಗಲಕೋಟೆ;

ಹಾವೇರಿ ಜಿಲ್ಲಾದ್ಯಂತ ಬಂದ್ ಗೆ ಮಿಶ್ರ ಪ್ರತಿಕ್ರಿಯೆ, ಕಂಡು ಬಂದಿದು ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ರಜೆ ನೀಡಿವೆ. ಸರಕಾರಿ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿಲ್ಲ. ಗ್ರಾಮೀಣ ಬಸ್ ಸಂಚಾರ ಇನ್ನೂ ಆರಂಭಗೊಳ್ಳದ ಕಾರಣಕ್ಕೆ ಹಳ್ಳಿಯ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿದೆ. ಬಾಗಲಕೋಟೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಖಾಸಗಿ ವಾಹನ ಎಂದಿನಂತಿದೆ. ಕಾರ್ಮಿಕ ಸಂಘಟನೆಗಳ ಸದಸ್ಯರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಇನ್ನೂ ಉಳಿದ ಜಿಲ್ಲೆಗಳಾದ ಕಾರವಾರ, ಕೋಲಾರ, ರಾಮನಗರ, ರಾಯಚೂರು, ಬೀದರ್, ತುಮಕೂರು ಸೇರಿದಂತೆ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದ್ದು ಯಾವುದೇ ಅಹಿತಕರ ಘಟನೆಗಳು ಕಂಡು ಬಂದಿಲ್ಲ ಪ್ರತಿಯೊಂದು ನಗರಗಳಲ್ಲಿ ಪೊಲೀಸ್ ಬೀಗಿ ಬಂದೋಬಸ್ ಇದೆ, ಇನ್ನೂ ನಾಳಿನ ಪ್ರತಿಭಟನೆ ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.