ಎರಡು ದಿನ ದೇಶವ್ಯಾಪಿ ಮುಷ್ಕರ: ಏನಿರುತ್ತೆ, ಏನಿರಲ್ಲ? ಇಂದಿನಿಂದಲೇ ಜಾಗೃತಿ ವಹಿಸಿ ಮುಂದಿನ ವ್ಯವಸ್ಥೆ ಮಾಡಿಕೊಳ್ಳಿ..

0
624

ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಜನವರಿ 8 ಮತ್ತು 9 ರಂದು ರಾಷ್ಟ್ರ ವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿವೆ. ಹೀಗಾಗಿ ಬಸ್, ಆಟೋ, ಟ್ಯಾಕ್ಸಿ, ಕ್ಯಾಬ್, ​ಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದ್ದು. ಅಂದು ಒಂದೇ ಒಂದು ಬಸ್​ ಕೂಡ ರಸ್ತೆಗಿಳಿಯಲ್ಲ. 26 ಸಾವಿರ ಸರ್ಕಾರಿ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಕೆಎಸ್ ಆರ್ ಟಿಸಿಯ 8 ಸಾವಿರ, ಬಿಎಂಟಿಸಿಯ 6,300, ಈಶಾನ್ಯ ಸಾರಿಗೆಯ 4 ಸಾವಿರ ಹಾಗೂ ವಾಯುವ್ಯ ಸಾರಿಗೆಯ 4,300 ಬಸ್ ಗಳ ಸಂಚಾರ ಸ್ಥಗಿತಗೊಳ್ಳಲಿದೆ.

Also read: ಬಸ್ ಪ್ರಯಾಣಿಕರೇ ಗಮನಿಸಿ, ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಜ.8, 9 ರಂದು ಬಸ್ ಸೇವೆ ಇಲ್ಲದಿರಬಹುದು!! ಬದಲಿ ಸಾರಿಗೆ ವ್ಯವಸ್ಥೆ ಬಗ್ಗೆ ಯೋಚಿಸಿ!!

ಬಂದ್ ಕುರಿತು ಸಾರಿಗೆ ಘಟಕದ ಕಾರ್ಯದರ್ಶಿ;

ಎಐಟಿಯುಸಿ ಸಾರಿಗೆ ಘಟಕದ ಕಾರ್ಯದರ್ಶಿ ರಾಜಗೋಪಾಲ್, ಆನಂದ್ ಸಿಐಟಿಯು ಸಾರಿಗೆ ಘಟಕದ ಜಿಲ್ಲಾ ಕಾರ್ಯದರ್ಶಿ ಆನಂದ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ್ದು. ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 8 ಮತ್ತು 9ರಂದು ರಾಷ್ಟ್ರ ವ್ಯಾಪ್ತಿ ಮುಷ್ಕರಕ್ಕೆ ನಡೆಯಲಿದೆ. 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಬುಧವಾರ ಸಂಜೆ 5 ಗಂಟೆಯ ತನಕ ಮುಷ್ಕರ ನಡೆಯಲಿದೆ. ಕೇಂದ್ರ ಸರ್ಕಾರದ ವಿರುದ್ಧ ನಡೆಯಲಿರುವ ಮುಷ್ಕರಕ್ಕೆ ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರವೂ ಬೆಂಬಲ ನೀಡುವ ನಿರೀಕ್ಷೆ ಇದೆ ಎಂದು ತಿಳಿದ್ದಾರೆ.

ಬಂದ್ ದಿನ ಏನೆಲ್ಲ ಇರುವುದಿಲ್ಲ?

ಭಾರತ ಬಂದ್ ಹಿನ್ನಲೆಯಲ್ಲಿ ‘ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್‌ ಸಂಚಾರ ಜನವರಿ 8 ಮತ್ತು 9ರಂದು ಸ್ಥಗಿತವಾಗಲಿದೆ’ ಎಂದು ಸಿಐಟಿಯು ಉಪಾಧ್ಯಕ್ಷ ಅನಂತ್ ಸುಬ್ಬರಾವ್ ಅವರು ಹೇಳಿದ್ದಾರೆ.ಹಾಗೆಯೇ ಆಟೋ ರಿಕ್ಷಾ ಚಾಲಕರ ಐಕ್ಯ ಹೋರಾಟ ಸಮಿತಿ ಎರಡು ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಬೆಂಬಲ ನೀಡಿದೆ. ಆಟೋ ಚಾಲಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಮುಷ್ಕರದ ದಿನ ಆಟೋಗಳ ಸಂಚಾರವಿರುವುದಿಲ್ಲ. ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರು ಸಹ ಬೆಂಬಲ ನೀಡಿದ್ದು OLA, UBER ಟ್ಯಾಕ್ಸಿಗಳ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ವಿಮಾನ ನಿಲ್ದಾಣದ ಟ್ಯಾಕ್ಸಿಗಳು ಬೆಂಬಲ ನೀಡುವ ಕುರಿತು ಸೋಮವಾರ ನಿರ್ಧಾರ ಪ್ರಕಟಿಸಲಿವೆ.

ಶಾಲಾ-ಕಾಲೇಜುಗಳು ಹೋಟೆಲ್, ಚಿತ್ರೋದ್ಯಮ?

SFI ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯು ಈಗಾಗಲೇ ಬೆಂಬಲ ಸೂಚಿಸಿದೆ. ಬಸ್, ಆಟೋ ಸಂಚಾರ ಸ್ಥಗಿತಗೊಳ್ಳುವುದದಿಂದ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗಲು ಸಮಸ್ಯೆ ಆಗಲಿದೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತದೆ. ಇನ್ನೂ ಹೋಟೆಲ್ ಮಾಲೀಕರು ಮುಷ್ಕರಕ್ಕೆ ನೈತಿಕ ಬೆಂಬಲ ನೀಡಲಿದ್ದಾರೆ. ಆದ್ದರಿಂದ, ಹೋಟೆಲ್‌ಗಳು ತೆರೆದಿರುತ್ತವೆ. ಚಲನಚಿತ್ರ ಪ್ರದರ್ಶನ ಬಂದ್ ಮಾಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

ಏನಿರುತ್ತೆ?:

ಮೆಟ್ರೋ, ಆಸ್ಪತ್ರೆ, ರೈಲು; ಎರಡು ದಿನದ ಮುಷ್ಕರದ ವೇಳೆ ಆಸ್ಪತ್ರೆ, ಮೆಡಿಕಲ್ ಶಾಪ್, ಅಂಗಡಿ ಮುಂಗಟ್ಟುಗಳು, ನಮ್ಮ ಮೆಟ್ರೋ, ರೈಲು ಸೇವೆಗೆ ಯಾವುದೇ ತೊಂದರೆ ಇಲ್ಲ. ಆಂಬ್ಯಲೆನ್ಸ್, ಹಾಲಿನ ವಾಹನಗಳು ಸಹ ಎಂದಿನಂತೆ ಇರಲಿವೆ.