ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಡೆಪ್ಯುಟಿ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
208

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್‌) 10 ಡೆಪ್ಯುಟಿ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ನವೆಂಬರ್ 30,2019 ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.

Also read: ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್​ನಲ್ಲಿ ನೇಮಕಾತಿ ಪ್ರಕಟಣೆ.!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಡೆಪ್ಯುಟಿ ಇಂಜಿನಿಯರ್

ಸಂಸ್ಥೆ (Organisation): ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್‌)

ಉದ್ಯೋಗ ಸ್ಥಳ (Job Location): ಭಾರತದೆಲ್ಲೆಡೆ

ವಿದ್ಯಾರ್ಹತೆ (Educational Qualification): ಬಿ.ಇ /ಬಿ.ಟೆಕ್ ಮತ್ತು ಬಿ.ಆರ್ಕ್

ವಯೋಮಿತಿ: ನವೆಂಬರ್ 1,2019 ರ ಅನ್ವಯ ಗರಿಷ್ಟ 26 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಓಬಿಸಿ (ಎನ್‌ಸಿಎಲ್‌) ಅಭ್ಯರ್ಥಿಗಳಿಗೆ 3 ವರ್ಷ,ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅರ್ಜಿದಾರರು ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಇಂಜಿನಿಯರ್ ಹುದ್ದೆಗಳಿಗೆ ಸಾಮಾನ್ಯ/ ಓಬಿಸಿ ಅಭ್ಯರ್ಥಿಗಳು 500/-ರೂ ಮತ್ತು ಡೆಪ್ಯುಟಿ ಇಂಜಿನಿಯರ್ ಹುದ್ದೆಗಳಿಗೆ ಸಾಮಾನ್ಯ ಓಬಿಸಿ ಅಭ್ಯರ್ಥಿಗಳು 750/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಅಥವಾ ಚಲನ್ ಮೂಲಕ ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್‌)ನ ಅಧಿಕೃತ ವೆಬ್‌ಸೈಟ್‌ http://www.bel-india.in/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ನಂತರ ನಿಗದಿತ ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ನವೆಂಬರ್ 30,2019ರೊಳಗೆ ತಲುಪಿಸಬೇಕಿರುತ್ತದೆ.

ಕಚೇರಿಯ ವಿಳಾಸ: ಮ್ಯಾನೇಜರ್, ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್‌), ಜಾಲಹಳ್ಳಿ ಪೋಸ್ಟ್, ಬೆಂಗಳೂರು-560013

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ ಮಾಡಿ