ನಿಮಗೂ ಹುತಾತ್ಮ ಸೈನಿಕರ ಕುಟುಂಬಗಳಿಗೆ ಧನ ಸಹಾಯ ಮಾಡುವ ಇಚ್ಛೆ ಇದ್ರೆ ಈ ಆ್ಯಪ್​ ಮೂಲಕ ಹುತಾತ್ಮ ಸೈನಿಕರ ಕುಟುಂಬಕ್ಕೆ ನೆರವಾಗಿ..

0
374

ದೇಶ ಕಾಪಾಡುವ ಸೈನಿಕರು ತಮ್ಮ ಜೀವವನ್ನೇ ಬಲಿ ಕೊಟ್ಟು ದೇಶದ ರಕ್ಷಣೆ ಮಾಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಎರಡು ದಿನಗಳ ಹಿಂದೆ ನಡೆದ ಪುಲ್ವಾಮಾ ಘಟನೆ ಇಡಿ ದೇಶದ ತುಂಬ ದುಃಖ ಸಾಗರವಾಗಿದೆ. ಪಾಪಿಗಳು ಮಾಡಿದ ಹೇಡಿ ಆಟದಿಂದ 49 ಸೈನಿಕರು ಹುತಾತ್ಮರಾದ ಸುದ್ದಿ ಕಿಡಿ ಹಚ್ಚಿದೆ. ನಮ್ಮ ಸೈನಿಕರ ಪ್ರಾಣ ತೆಗೆದ ಹೇಡಿಗಳ ರಕ್ತವನ್ನು ಹರಿಸುವವರೆಗೆ ದೇಶದಲ್ಲಿ ಶಾಂತಿ ನಲೆಸಲು ಸಾದ್ಯವಿಲ್ಲ ಎನ್ನುವುದು ತಿಳಿದಿದೆ. ಈ ಸಮಯದಲ್ಲಿ ಹುತಾತ್ಮರಾದ ನಮ್ಮ ಸೈನಿಕರ ಕುಟುಂಬಕ್ಕೆ ನಮ್ಮಿಂದ ಆದ ಅಳಿಲು ಸೇವೆ ಮಾಡಲು ಒಂದು ಅವಕಾಶವನ್ನು ನೀಡಲಾಗಿದೆ ಈ ಮೂಲಕ ನೀವು ನೆರವಾರಿ ಸಹಾಯ ಮಾಡಬಹುದು.

Also read: ನಮ್ಮ ಸೇನೆಯ ಈ ೧೨ ಸತ್ಯ ಸಂಗತಿಗಳನ್ನು ತಿಳಿದರೆ ನೀವು ಅವರನ್ನು ಇನ್ನೂ ಹೆಚ್ಚು ಗೌರವಿಸುತ್ತೀರ.

ಹೌದು, ದೇಶಕ್ಕಾಗಿ ಪ್ರಾಣ ಬಿಡುವ ವೀರ ಯೋಧರ ಕುಟುಂಬಕ್ಕೆ ನೆರವಾಗಲು ಸಾರ್ವಜನಿಕರಿಗೆ ಒಂದು ವೇದಿಕೆ ಕಲ್ಪಿಸಬೇಕಿದೆ ಎಂಬ ಆಲೋಚನೆ ಅಕ್ಷಯ್ ಕುಮಾರ್ ಅವರಿಗೆ ಬಂತು. ಸಾಮಾಜಿಕ ಜಾಲತಾಣಗಳಲ್ಲೂ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಜತೆಗೂ ಚರ್ಚಿಸಿದ್ದರು. ಇದನ್ನು ಪರಿಗಣಿಸಿದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು, ಸಿಆರ್ ಪಿಎಫ್ ಶೌರ್ಯ ದಿನ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ವೆಬ್ ಸೈಟ್ ಅನ್ನು ಉದ್ಘಾಟಿಸಿದ್ದರು, ಇದರೊಂದಿಗೆ ಅಕ್ಷಯ್ ಕುಮಾರ್ ಅವರ ಕನಸಿನ ಯೋಜನೆ ಒಂದು ಸ್ವರೂಪ ಪಡೆದು ಜೀವತಾಳಿದೆ. ಅಂದಹಾಗೆ ಈ ವೆಬ್ ಸೈಟ್ ಮೂಲಕ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಯೋಧರ ಕುಟುಂಬಕ್ಕೆ ಸಾರ್ವಜನಿಕರು ರೂ 15 ಲಕ್ಷದವರೆಗೂ ದಾನ ಮಾಡಬಹುದು.

ಆ್ಯಪ್​ ಮೂಲಕ ನೆರವು:

ಒಂದು ಆ್ಯಪ್​ ಮೂಲಕ. ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ನೆರವಾಗುವಂತಹ ವೆಬ್​ಸೈಟ್​ವೊಂದನ್ನು 2017ರಲ್ಲಿ ಸರ್ಕಾರ ಹೊರ ತಂದಿದೆ. ಈ ವೆಬ್​ ಅಥವಾ ಅಪ್ಲಿಕೇಶನ್​ ಮೂಲಕ ಸಶಸ್ತ್ರ ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಆಂತರಿಕ ಭದ್ರತಾ ಪಡೆ, ಅರೆಸೈನಿಕ ಪಡೆಯ ಹುತಾತ್ಮ ಸಿಬ್ಬಂದಿಗಳ ಕುಟುಂಬಕ್ಕೆ ನೀವು ಸಹಾಯ ಹಸ್ತ ಚಾಚಬಹುದು. ಅದು ಹೇಗೆಂದರೆ ಭಾರತ್ ಕೆ ವೀರ್​ ಎಂಬ ವೆಬ್​ಸೈಟ್​ ಅಥವಾ ಅಪ್ಲಿಕೇಶನ್​ನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸಂಪೂರ್ಣ ವಿವರಗಳನ್ನು ನೀಡಲಾಗಿರುತ್ತದೆ. ಇಲ್ಲಿ ವೀರ ಶಹೀದರ ಭಾವಚಿತ್ರದೊಂದಿಗೆ ಅವರ ವಿವರ ಹಾಗೂ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನೀಡಲಾಗಿದೆ. ಈ ಖಾತೆಗಳಿಗೆ ಧನ ಸಹಾಯ ಮಾಡುವ ಮೂಲಕ ಪ್ರತಿಯೊಬ್ಬರು ಯೋಧರ ಕುಟುಂಬಗಳಿಗೆ ನೆರವಾಗಬಹುದು.

ಸಹಾಯ ಮಾಡುವುದು ಹೇಗೆ?

ವೀರ ಯೋಧರ ಕುಟುಂಬಕ್ಕೆ ಸಹಾಯ ಮಾಡಲು ಬಯಸಿದರೆ ನೀವು ಮೊದಲು bharat ke veer ಅಪ್ಲಿಕೇಶನ್​ ಅನ್ನು ಇನ್​ಸ್ಟಾಲ್​ ಮಾಡಬೇಕು. ಅಥವಾ https://bharatkeveer.gov.in/ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಅಲ್ಲಿ ದೇಶಕ್ಕಾಗಿ ಮಡಿದ ಹಲವು ಸೈನಿಕರ ಭಾವಚಿತ್ರದೊಂದಿಗಿನ ಸಂಪೂರ್ಣ ವಿವರಗಳನ್ನು ಕಾಣಬಹುದು. ಇಲ್ಲಿ ನೀವು ಸಹಾಯ ಮಾಡಲು ಬಯಸಿದ ಯೋಧರ ಫೋಟೋ ಮೇಲೆ ಕ್ಲಿಕ್ ಮಾಡಿದರೆ ಅವರ ಹುದ್ದೆ, ಹುತಾತ್ಮ ದಿನಾಂಕ, ಈಗಾಗಲೇ ಅವರ ಖಾತೆಗೆ ನೀಡಲಾದ ಧನ ಸಹಾಯಕ್ಕೆ ಸಂಬಂಧಿಸಿದ ಮಾಹಿತಿಗಳು ಕಾಣಿಸುತ್ತದೆ. ಅದರೊಂದಿಗೆ ಅವರ ಕುಟುಂಬದ ಬ್ಯಾಂಕ್ ಖಾತೆಯ ಸಂಖ್ಯೆ ನೀಡಲಾಗಿರುತ್ತದೆ. ಈ ಖಾತೆ ಸಂಖ್ಯೆಗೆ ನೀವು ನಿಮ್ಮ ಕೈಲಾದ ಮೊತ್ತವನ್ನು ನೀಡುವ ಮೂಲಕ ಭಾರತಾಂಭೆಯ ವೀರ ಮಕ್ಕಳ ನೆರವಿಗೆ ನಿಲ್ಲಬಹುದು.

15 ಲಕ್ಷ ರೂ ವರೆಗೆ ಮಿತಿ:

ಈ ಹುತಾತ್ಮರ ಪಟ್ಟಿಯಲ್ಲಿರುವ ಸೈನಿಕರ ಖಾತೆಗಳಿಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ. ಅದರಂತೆ ಒಬ್ಬ ಯೋಧರ ಕುಟುಂಬಕ್ಕೆ 15 ಲಕ್ಷದವರೆಗೆ ಧನ ಸಹಾಯ ಮಾಡಬಹುದು. ಈ ಖಾತೆಯ ಒಟ್ಟು ಮೊತ್ತ 15 ಲಕ್ಷ ತಲುಪಿದರೆ, ಹುತಾತ್ಮರ ಕುಟುಂಬಕ್ಕೆ ಮಾಹಿತಿ ತಿಳಿಸಿ, ಸ್ವಯಂಚಾಲಿತವಾಗಿ ವೆಬ್​ಸೈಟ್​ನಿಂದ ಅವರ ಖಾತೆಯನ್ನು ತೆಗೆಯಲಾಗುತ್ತದೆ. ಇದರಿಂದ ಪ್ರತಿಯೊಬ್ಬ ಯೋಧರ ಕುಟುಂಬಕ್ಕೆ ನೆರವಾಗಲು ಸಹಾಯಕವಾಗುತ್ತದೆ.

Also read: ಚೀನಿಯರ ವಿರುದ್ಧ ಪರಮವೀರ ಸುಬೇದಾರ್ ಜೋಗಿಂದರ್ ಸಿಂಗ್-ರವರ ಸಾಹಸ ಶೌರ್ಯದ ಕಥೆ ಕೇಳಿ, ನಮ್ಮ ಸೇನೆ ನಮಗಾಗಿ ಮಾಡುತ್ತಿರುವ ತ್ಯಾಗದ ಬಗ್ಗೆ ಇನ್ನೂ ಗೌರವ ಹೆಚ್ಚುತ್ತೆ!!