ಮನಸ್ಸು ಕ್ರಿಯಾಶೀಲಗೊಳಿಸುವ ಭರತನಾಟ್ಯ

0
627

ನಮ್ಮ ಸಂಸ್ಕೃತಿ ಪರಂಪರೆಯನ್ನು ಪ್ರತಿಬಿಂಬಿಸುವ ಶ್ರೀಮಂತ ಕಲೆ ನೃತ್ಯ, ಅದರಲ್ಲೂ ಭರತನಾಟ್ಯ, ಅತ್ಯಂತ ಪ್ರಮುಖವಾದುದ್ದು.  ಈ ನೃತ್ಯ ತನ್ನದೇ ಆದ ಆಯಾಮ, ವ್ಯಾಯಾಮಗಳನ್ನು ಒಳಗೊಂಡಿದೆಯೆಂಬುದು  ವಿಶೇಷ. ಕಲೆಗಳಲ್ಲಿಯೇ ಶ್ರೇಷ್ಠತೆಯನ್ನು ಪಡೆದಿರುವ  ಭರತನಾಟ್ಯ ಶರೀರದ ಪ್ರತಿಯೊಂದು ಅಂಗಗಳನ್ನು ಕ್ರಿಯರಯಲ್ಲಿ ತೊಡಗಿಸುವ ಕಲೆಯಾಗಿದೆ.

ಭರತನಾಟ್ಯ ಒಂದು ವಿಶ್ವಭಾಷೆ ಇದು ಮನರಂಜನೆಗಷ್ಟೇ ಸೀಮಿತವಾಗಿಲ್ಲ. ಈ ನೃತ್ಯದಿಂದ ಮನುಷ್ಯನ ಮಿದುಳಿನ ಭಾಗಗಳು ಕ್ರಿಯಾಶೀಲವಾಗುವಂತೆ ಪ್ರೇರೆಪಿಸುತ್ತದೆ. ನಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸದ ನಿಷ್ಕ್ರಿಯಗೋಳಿಸಿರುವ ಅಂಗಗಳು ಇಲ್ಲಿ ಪ್ರಯೋಗಿಕವಾಗಿ ಕ್ರಿಯಾಶೀಲವಾಗುತ್ತದೆ. ಶರೀರದ ಎಲ್ಲ ಭಾಗಗಳು ಉತ್ತೇಜಿತಗೊಂಡು ಮನಸ್ಸು, ಮೈಕಟ್ಟು ದೃಡತೆಕಾಪಡುವಲ್ಲಿ ನೃತ್ಯ ಮಾನವನಿಗೆ ಬಹು ಉಪಕಾರಿಯಾಗಿದೆ.

ಭರತನಾಟ್ಯ ಅಭ್ಯಾಸದಿಂದ ಏಕಾಗ್ರತೆ ಸಾಧ್ಯ. ಏಕಕಾಲದಲ್ಲಿ ಹಾಡನ್ನು ಆಲಿಸಿ ನೃತ್ಯ ಮಾಡುವಾಗ ಕೈಕಾಲು ಕಣ್ಣು ಮೆದುಳುಗಳು ಕ್ರಿಯಾಶೀಲತೆಯಲ್ಲಿರುತ್ತವೆ. ಒಂದು ಕ್ಷಣ ಮನಸ್ಸು ಬೇರೆಡೆಗೆ ಸರಿದರೂ ಹೆಜ್ಜೆ ತಪ್ಪುತ್ತದೆ. ಇಂಥ ಎಚ್ಚರದಿಂದಾಗಿಯೇ ಭರತನಾಟ್ಯದ ಸಮಯದಲ್ಲಿ ಏಕಾಗ್ರತೆ ಕೈಗೊಡುತ್ತದೆ.

ಮಕ್ಕಳಿಗೆ ನರತ್ಯಭ್ಯಾಸವನ್ನು ನೀಡುವುದರಿಂದ ಅವರಿಗೆ ನೃತ್ಯವಷ್ಟೇ ಅಲ್ಲದೆ ಬೇರೆ ಬೇರೆ ರೀತಿಯ ಜ್ಞಾನ ಪಡೆಯಲು ಓದಿನ ಕಡೆ ಹೆಚ್ಚಿನ ಗಮನ ಹರಿಸಲು ಮನಸ್ಸನ್ನು ಏಕಾಗ್ರತೆ ಯಿಂದಿರಲು ಈ ನೃತ್ಯ ನೆರವಾಗುತ್ತದೆ.

ಇದು ನೃತ್ಯ ಕಲೆಯ ವೈಭವ ವೈಶಿಷ್ಟತೆ, ಅತ್ಯದ್ಬುತ ಕಲಾರಮ್ಯತೆ ಹಾಗೂ ಸಂಯಮದ ಮಹತ್ವವನ್ನುಸೂಚಿಸುತ್ತದೆ, ಶಿಕ್ಷಣ, ಸಾಹಿತ್ಯ, ಸಂಗೀತ, ಲಲಿತಕಲೆ, ನೃತ್ಯ ಮುಂತಾದ ಕಲೆಗಳು ವ್ಯಕ್ತಿಯ ಮನಸ್ಸನ್ನು ವಿಕಾಸಗೊಳಿಸಿ ಔನತ್ಯ ಸಾಧಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಅದರಲ್ಲೂ ನೃತ್ಯ ಕಲೆ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖಸ್ಥಾನ ಪಡೆದುಕೊಂಡಿದೆಯೆಂದು ವೈದ್ಯ ವಿಜ್ಞಾನ ಹೇಳುತ್ತದೆ.ಶ

ದೇಹದ ಎಲ್ಲ ಅಂಗಾಗಗಳು ಆರೋಗ್ಯವಾಗಿರಿಸಿ ಕ್ರಿಯಾಶೀಲಗೊಳಿಸುತ್ತದೆ. ಆರೋಗ್ಯಕ್ಕೆ ಯೋಗ್ಯ, ವ್ಯಾಯಾಮ ಇದು ಸಹಸ್ರಾರು ವರ್ಷಗಳಿಂದ ರುಜುವಾತಾಗಿದ ಅಂಶ, ಅಂತಹ ಆರೋಗ್ಯಕರ ವ್ಯಾಯಾಮ ನೀಡಿ ನಿರೋಗಿಯಾಗಿಸುವ ಕಲೆಯೇ ನೃತ್ಯ ಕಲೆಯೆನ್ನುತ್ತಾರೆ ಸಂಶೋಧಕರು.