ಭರ್ಜರಿ ಚಿತ್ರದಿಂದ ನಿರ್ಮಾಪಕರಿಗೆ ಲಾಸ್ ಆಗಿದ್ದು ಇದೇ ಕಾರಣಕ್ಕೆ.. ಲಾಸ್ ಆದರೂ ಭರ್ಜರಿ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ??

0
630

ಧೃವ ಸರ್ಜಾರ ಬಹು ನಿರೀಕ್ಷೆಯ ಚಿತ್ರ ಭರ್ಜರಿ ಇದೇ ಶುಕ್ರವಾರ ತೆರೆ ಕಂಡಿದ್ದು ಎಲ್ಲರಿಗೂ ತಿಳಿದಿರುವ ವಿಷಯವೆ. ಆದರೆ ಮೊದಲ ದಿನವೇ ನಿರ್ಮಾಪಕರಿಗೆ ನಷ್ಟವಾಗಿದ್ದು ವಿಪರ್ಯಾಸ..

ಅದ್ಧೂರಿ ಬಹದ್ದೂರ್ ಆದಮೇಲೆ 2 ವರ್ಷದಿಂದ ಭರ್ಜರಿ ಚಿತ್ರದ ಶೂಟಿಂಗ್ ನಡೆಯುತ್ತಲೇ ಇತ್ತು.. ಇದೇ ಕಾರಣಕ್ಕೆ ಹಲವಾರು ಟ್ರಾಲ್ ಪೇಜ್ ಗಳು ಭರ್ಜರಿ ಚಿತ್ರದ ಬಗ್ಗೆ ಹಾಸ್ಯ ಮಾಡಿದ್ದೂ ಇದೆ..

ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಭರ್ಜರಿ ತೆರೆ ಕಾಣುತ್ತಲೆ ಅದ್ಧೂರಿ ಒಪನಿಂಗ್ ಏನೋ ಪಡೆಯಿತು.. ಆದರೆ ಕೆಲವು ಕಿಡಿಗೇಡಿಗಳ ದುಷ್ಕೃತ್ಯ ದಿಂದ ಸಿನಿಮಾಗೆ ಸ್ವಲ್ಪ ಮಟ್ಟಿನ ಲಾಸ್ ಕೂಡ ಆಯಿತು..

ಹೌದು ಮೊದಲ ದಿನ ಮೊದಲ ಶೊ ಎಂದರೆ ಫ್ಯಾನ್ಸ್ ಗೆ ಹಬ್ಬ.. ಆದರೆ ಕೆಲವು ಮಂದಿ ಮೊದಲ ಶೊ ನಡೆಯುವಾಗಲೇ ಸಿನಿಮಾವನ್ನು ಪೂರ್ತಿ ಫ಼ೇಸ್ ಬುಕ್ ಲೈವ್ ನಲ್ಲಿ ತೋರಿಸಿದ್ದಾರೆ.. ಹಾಗೆ ವಿಡೀಯೊ ಮಾಡಿ ಯೂಟ್ಯೂಬ್ ನಲ್ಲೂ ಹಾಕಿದ್ದಾರೆ.. ಇದರಿಂದ ಭರ್ಜರಿ ನಿರ್ಮಾಪಕರಿಗೆ ಲಾಸ್ ಕೂಡ ಆಗಿದೆ.. ತಕ್ಷಣವೇ ಎತ್ತೆಚ್ಚುಕೊಂಡ ಚಿತ್ರತಂಡ ಯೂಟ್ಯೂಬ್ ನಲ್ಲಿ ಕಂಪ್ಲೈಂಟ್ ಕೊಟ್ಟು ವೀಡಿಯೊಗಳನ್ನು ತೆಗಿಸಿ ಹಾಕಿದ್ದಾರೆ..

ಏನೇ ಆದರೂ ಒಂದು ಸಿನಿಮಾಗೋಸ್ಕರ ನೂರಾರು ಮಂದಿ ಕೆಲಸ ಮಾಡಿರುತ್ತಾರೆ.. ಈ ರೀತಿ ಕಿಡಿಗೇಡಿಗಳು ವೀಡಿಯೊ ಮಾಡಿ ಫೇಸ್ ಬುಕ್ ನಲ್ಲಿ ಹಾಕುವುದರಿಂದ ಅವರ ಹೊಟ್ಟೆಯ ಮೇಲೆ ಒಡೆದಂತಾಗುತ್ತದೆ..

ಇಷ್ಟರ ಮದ್ಯೆಯೂ ಸಿನಿಮಾ ಭರ್ಜರಿ ಪ್ರದರ್ಶನ ಕಂಡು ಮೊದಲ ದಿನ 6.80 ಕೋಟಿ ಬಾಚಿಕೊಂಡಿದೆ.ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂಬುದೇ ನಮ್ಮ ಆಶಯ.. ಏನೇ ಆದರೂ ಕನ್ನಡಿಗರಾಗಿ ಕನ್ನಡ ಸಿನಿಮಾವನ್ನ ಹೀಗೆ ಮಾಡಬಾರದಿತ್ತು.. ಕನ್ನಡ ಇಂಡಸ್ಟ್ರಿ ಬೆಳೆಯಲು ನಾವುಗಳು ಸಹಕರಿಸಬೇಕು..