SSLC ಪರೀಕ್ಷೆಯಲ್ಲಿ ಹಾಸನ ಮೊದಲು ಬರಲು ನನ್ನ ಹೆಂಡತಿ ಮಾಡಿದ ಪಾಠವೇ ಕಾರಣ: ಎಚ್.ಡಿ.ರೇವಣ್ಣ; ಇದು ಒಪ್ಪುವಂತಹ ಮಾತೇ?

0
507

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನ ಬಂದು ರಾಜ್ಯದಲ್ಲಿ ಮಿಂಚುತ್ತಿದೆ. ಈ ಪಲಿತಾಂಶಕ್ಕೆ HD ಕುಟುಂಬವೆ ಕಾರಣವೆಂದು ಸಚಿವ ರೇವಣ ಹೇಳಿಕೆ ನೀಡಿದ್ದು ಬಾರಿ ವೈರಲ್ ಆಗಿದೆ. ಮೊದಲ ಸ್ಥಾನ ಬಂದಿರುವುದಕ್ಕೆ ಸಚಿವ ರೇವಣ್ಣ ಸಂಪೂರ್ಣ ಕ್ರೆಡಿಟ್​ ಅನ್ನು ತಮ್ಮ ಪತ್ನಿ ಭವಾನಿ ರೇವಣ್ಣನವರಿಗೆ ನೀಡಿದ್ದಾರೆ. ಎಸ್​ಎಸ್​ಎಲ್​ಸಿಯಲ್ಲಿ ಹಾಸನ ಫಸ್ಟ್ ಬರಲು ನನ್ನ ಹೆಂಡತಿ ಭವಾನಿ ಕೂಡ ಕಾರಣ. ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ ಸಭೆ ನಡೆಸಲಾಗಿತ್ತು. ಸಿಎಂ, ರಾಜ್ಯ ಕಾರ್ಯದರ್ಶಿ, ನಾನು ಸಭೆ ನಡೆಸಿದ್ದೇವೆ ಅದೇ ಪಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.

ಹೌದು ರಾಜ್ಯದಲ್ಲಿ ಯಾವುದೇ ಒಳ್ಳೆಯ ಕೆಲಸಗಳು ನಡೆದರು ತಾವೇ ಮಾಡಿದ್ದು ಎಂದು ಹೇಳಿಕೊಳ್ಳುವ ದೇವೇಗೌಡರ ಕುಟುಂಬ ಮತ್ತೆ ಬಾಯಿ ಬಿಟ್ಟಿದ್ದು ಎಸ್ಎಸ್ಎಲ್ ಸಿ ಪಲಿತಾಂಶ ಬಂದ ನಂತರ ಅದರ ಕ್ರೆಡಿಟ್ ಕೂಡ ತಾವೇ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಮಾತನಾಡಿದ ರೇವಣ್ಣ ಎಸ್​ಎಸ್​ಎಲ್​ಸಿಯಲ್ಲಿ ಹಾಸನ ಮೊದಲ ಸ್ಥಾನ ಬಂದಿರುವುದಕ್ಕೆ ಸಂಪೂರ್ಣ ಕ್ರೆಡಿಟ್​ ಅನ್ನು ತಮ್ಮ ಪತ್ನಿ ಭವಾನಿ ರೇವಣ್ಣನವರಿಗೆ ನೀಡಿದ್ದಾರೆ. ಎಸ್​ಎಸ್​ಎಲ್​ಸಿಯಲ್ಲಿ ಹಾಸನ ಫಸ್ಟ್ ಬರಲು ನನ್ನ ಹೆಂಡತಿ ಭವಾನಿ ಕೂಡ ಕಾರಣ. ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ ಸಭೆ ನಡೆಸಲಾಗಿತ್ತು. ಸಿಎಂ, ರಾಜ್ಯ ಕಾರ್ಯದರ್ಶಿ, ನಾನು ಸಭೆ ನಡೆಸಿದ್ದೇವೆ. ನನ್ನ ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದು, ವಿಶೇಷ ತರಗತಿ ನಡೆಸಲು ಸೂಚಿಸಿದ್ದರು. ನಾನು ಮಂತ್ರಿಯಾದ ಬಳಿಕ ಎಲ್ಲಾ ಮುಖ್ಯೋಪಾಧ್ಯಾಯರನ್ನ ಕರೆಸಿ 2 ಬಾರಿ ಸಭೆ ನಡೆಸಿದ್ದೆ. ಬೆಳಗ್ಗೆ, ಸಂಜೆ ವಿಶೇಷ ತರಬೇತಿ ನಡೆಸಲು ಸೂಚಿಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ಹಾಸನ ಎರಡು ವರ್ಷದ ಹಿಂದೆ 31 ನೇ ಸ್ಥಾನ ಹೊಂದಿತ್ತು. ನಾನು ಶಿಕ್ಷಣ ವಿಭಾಗದ ಜೊತೆ ಸಾಕಷ್ಟು ಚರ್ಚೆ ಮಾಡಿದ್ದೆ. ನಂತರ ನಾವು ಒಂದು ಕಾರ್ಯಕ್ರಮ ಮಾಡಿಕೊಂಡಿದ್ದೆವು. ಇದರಿಂದ 2017-18ರಲ್ಲಿ 7ನೇ ಸ್ಥಾನಕ್ಕೆ ಬಂದಿತ್ತು. ಕಳೆದ ವರ್ಷ ನಾವು ಶಿಕ್ಷಕರಿಗೆ ಪರೀಕ್ಷೆ ಮಾಡಬೇಕು ಎಂದು ತೀರ್ಮಾನ ಮಾಡಿ ಎರಡು ತಿಂಗಳು ಸಮಯ ಕೊಟ್ಟಿದ್ದೆವು. ಅದು ಸಾಧ್ಯವಾಗಲಿಲ್ಲ, ಆದರೆ ಶಿಕ್ಷಕರು ಪರೀಕ್ಷೆಗೆ ರೆಡಿಯಾಗಿದ್ದರು. ಅದರಂತೆ ಪ್ರಥಮ ಸ್ಥಾನ ಬರಲು ದೇವರ ಅನುಗ್ರಹವೇ ಕಾರಣ. ದೈವಾನುಗ್ರಹದಿಂದ ನಮ್ಮ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದೆ. ಎಂದು ರೇವಣ್ಣ ಹೇಳಿದ್ದಾರೆ.

ಹಾಸನ್ ಫಲಿತಾಂಶಕ್ಕೆ DC ರೋಹಿಣಿ ಪ್ರತಿಕ್ರಿಯೆ;

ಹಾಸನ ಎಸ್‌ಎಸ್‌ಎಲ್‌ಸಿಯಲ್ಲಿ ಗಣನೀಯ ಸಾಧನೆ ಮಾಡಿದ ಬಳಿಕ ರೋಹಿಣಿ ಸಿಂಧೂರಿ ಅವರು ತೆಗೆದುಕೊಂಡಿದ್ದ ಶೈಕ್ಷಣಿಕ ಸುಧಾರಣಾ ಕ್ರಮಗಳ ಬಗ್ಗೆ ತೀವ್ರ ಚರ್ಚೆಯಾಗಿತ್ತು. ಈ ಕುರಿತು ಮಾತಾನಾಡಿದ ಹಿಂದಿನ DC ರೋಹಿಣಿ ಶಿಕ್ಷಣ ಕ್ಷೇತ್ರವನ್ನು ಸವಾಲಾಗಿ ತೆಗೆದುಕೊಂಡು 1 ರಿಂದ 3ನೇ ಸ್ಥಾನದೊಳಗೆ ಬರಬೇಕು ಎಂದು ಶಿಕ್ಷಣಾಧಿಕಾರಿಗಳಿಗೆ ಹೇಳಿದ್ದೆ. ಆರಂಭದಲ್ಲಿ ಈ ಗುರಿಯನ್ನು ತಲುಪುವುದು ಎಲ್ಲರಿಗೂ ಬಹಳ ಕಷ್ಟವಾಗಿತ್ತು. ಎಲ್ಲ ಶಾಲೆಗಳ ಪ್ರಾಂಶುಪಾಲರಿಗೆ ಖುದ್ದಾಗಿ ಪತ್ರ ಬರೆದಿದ್ದೆ. ರೇಡಿಯೋ ಕಾರ್ಯಕ್ರಮಗಳನ್ನು ನಡೆಸಿದ್ದೆ.
ನಿರಂತರ ಸಭೆಗಳನ್ನು ಮಾಡಿದ್ದೆ ಪ್ರತಿಯೊಂದು ಪರೀಕ್ಷೆ ಆದ ಮೇಲೆ ತಾಯಿ ಸಭೆ ಎಂದು ಮಾಡುತ್ತಿದ್ದೆವು. ಯಾಕೆಂದರೆ ಮಕ್ಕಳ ಶಿಕ್ಷಣದಲ್ಲಿ ತಾಯಂದಿರ ಪಾತ್ರವೂ ಮುಖ್ಯವಾಗಿದೆ. ಒಂದು ವರ್ಷದಲ್ಲಿ ಹಾಸನವನ್ನು 3ನೇ ಸ್ಥಾನ ಅಥವಾ ಸೆಕೆಂಡ್‍ಗೆ ತರಲೇಬೇಕು. ಇದು ನಿಮಗೆ ಸವಾಲು ಎಂದು ನಾನು ಎಲ್ಲ ಪ್ರಾಂಶುಪಾಲರಿಗೂ ಪತ್ರ ಬರೆದಿದ್ದೆ. ಈಗ ಅವರ ಕಠಿಣ ಪರಿಶ್ರಮದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಖುಷಿ ಪಟ್ಟರು.

ಈದೆ ವಿಷಯಕ್ಕೆ ಕಿಡಿ ಕಾರಿದ ರೇವಣ್ಣ ಹಿಂದಿನ ಜಿಲ್ಲಾಧಿಕಾರಿ ಕಡಿದು ದಬಾಕಿರೋದು ಏನು? ಶಿಕ್ಷಕರಿಗೆ ಪಾಠ ಮಾಡಲು ಹೋಗಿ ಅವರೇ ಉಗಿಸಿಕೊಂಡಿದ್ದರು. ನನ್ನ ಪತ್ನಿ ಪ್ರಯತ್ನ ಸಫಲವಾಗಿದೆ. ಆದರೆ, ಇದನ್ನು ನಾನು ಹೇಳಿಕೊಂಡಿದ್ದೇನೆಯೇ? ಶಿಕ್ಷಣದ ಅಭಿವೃದ್ಧಿಗೆ ಕುಮಾರಸ್ವಾಮಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ರೇವಣ್ಣ, ರೋಹಿಣಿ ವಿರುದ್ಧ ಕಿಡಿಕಾರಿದ್ದಾರೆ.