ಭೀಮನ ಅಮಾವಾಸ್ಯೆ ವೃತದ ಮಹತ್ವ ಹಾಗು ಪೂಜಾ ವಿಧಾನ.

0
1272

ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನವನ್ನು ಭೀಮನ ಅಮಾವಾಸ್ಯೆ/ ದಿವಶಿ ಗೌರಿ ವೃತ/ ಜ್ಯೋತಿರ್ಭೀಮೇಶ್ವರ ವೃತವಾಗಿ ಆಚರಿಸುತ್ತಾರೆ.ಸ್ಕಂದ ಪುರಾಣದಲ್ಲಿ ಹೇಳಲ್ಪಟ್ಟಿರುವ ವೃತವು ಮೂಲತಃ ಪಾರ್ವತೀ ಪರಶಿವನ ಆರಾಧನೆಯಾಗಿದೆ. ಮದುವೆಯಾದ ಹೆಣ್ಣು ಮಕ್ಕಳು ತಮ್ಮ ಗಂಡನ ಆಯುಸ್ಸು ವೃದ್ಧಿಗೆ ಆಚರಿಸಲಾಗಿ ಈ ವೃತವನ್ನು ಪತಿಸಂಜೀವಿನಿ ವೃತವೆಂದು ಸಹ ಕರೆಯುತ್ತಾರೆ., ಮದುವೆಯಾಗದ ಹೆಣ್ಣು ಮಕ್ಕಳು ಉತ್ತಮ ಗಂಡನ ಪ್ರಾಪ್ತಿಗೆ, ತಂದೆ ಮತ್ತು ಅಣ್ಣತಮ್ಮಂದಿರಿಗೆ ಒಳ್ಳೆಯದಾಗಲೆಂದು ಈ ವೃತವನ್ನು ಆಚರಿಸುತ್ತಾರೆ.

source: 4.bp.blogspot.com

ಬಹಳ ಹಿಂದೆ ಒಬ್ಬ ಕಡು ಬ್ರಾಹ್ಮಣನ ಮಗಳನ್ನು ಒಬ್ಬ ಮೃತ ರಾಜಕುಮಾರನಿಗೆ ಕೊಟ್ಟು ಮಾಡುವೆ ಮಾಡಿದಾಗ, ಅವಳು ಪತಿಯನ್ನು ಬದುಕಿಸಿಕೊಳ್ಳಲು ಮರಳಿನಿಂದ ದೀಪವನ್ನು ಮಾಡಿ ಪಾರ್ವತೀ ಪರಮೇಶ್ವರನ್ನು ಆರಾಧಿಸಲಾಗಿ ಅವಳ ಭಕ್ತಿಗೆ ಮೆಚ್ಚಿ ಈಶ್ವರನು ಅವಳ ಗಂಡನನ್ನು ಬದುಕಿಸುತ್ತಾನೆ. ಮರಳಿನಿಂದ ಮಾಡಿದ ಭಂಡಾರವನ್ನು ಒಡೆದು ಆ ಸಾದ್ವಿಯನ್ನು ತಂಗಿಯಾಗಿ ಸ್ವೀಕರಿಸಿ ಯಾರು ಈ ವೃತವನ್ನು ಮಾಡುತ್ತಾರೋ ಅವರಿಗೆ ಧೀರ್ಘ ಸೌಮಂಗಲ್ಯವನ್ನು ಕರುಣಿಸುವುದಾಗಿ ಹೇಳುತ್ತಾನೆಂಬ ಕತೆಯು ಇದೆ.

source: s-media-cache-ak0.pinimg.com

ಹೆಣ್ಣು ಮಕ್ಕಳು ಮದುವೆಯಾದ ನಂತರ ಒಂಭತ್ತು ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಒಂದು ತಟ್ಟೆಯಲ್ಲಿ ಧಾನ್ಯ ರಾಶಿ (ಅಕ್ಕಿ) ಹಾಕಿ, ಅದರ ಮೇಲೆ 2 ದೀಪದ ಕಂಭ ಇಡಬೇಕು. ಒಂದರಲ್ಲಿ ಎಣ್ಣೆಯನ್ನು ಹಾಕಿ ಮತ್ತೊಂದರಲ್ಲಿ ತುಪ್ಪ ಹಾಕಿ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು . ಜ್ಯೋತಿ ರೂಪದಲ್ಲಿರುವ ಪಾರ್ವತೀ ಪರಮೇಶ್ವರರು ಮನೆಯಲ್ಲಿ ಸದಾ ನೆಮ್ಮದಿ, ಅರೋಗ್ಯ ಆಶ್ವರ್ಯ ಕೊಟ್ಟು ಹರಸುತ್ತಾರೆಂಬ ಪ್ರತೀತಿ ಇದೆ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಕೈಗೆ ಕಟ್ಟಿಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಭೀಮೆಶ್ವರನ ಪೂಜೆ ಮಾಡಬೇಕು. ನೈವೇದ್ಯಕ್ಕೆ 9 ಕರಿಗಡುಬು ಮಾಡಿಕೊಳ್ಳಬೇಕು. ಹೀಗೆ ಒಂಬತ್ತು ವರ್ಷಗಳು ಈ ವೃತವನ್ನು ಆಚರಿಸಿದ ನಂತರ ದೀಪಗಳನ್ನು ಅಣ್ಣ ತಮ್ಮಂದಿರಿಗೆ ಅಥವಾ ಬ್ರಾಹ್ಮಣರಿಗೆ ದಾನ ನೀಡಿ ಉದ್ಯಾಪನೆಯನ್ನು ಮಾಡಬೇಕು.

source: 4.bp.blogspot.com

ಈ ಹಬ್ಬದ ಇನ್ನೊಂದು ವಿಶೇಷತೆ ಭಂಡಾರ . (ಭಂಡಾರ ಅಂದರೆ ನಿಧಿ, ಸಂಪತ್ತು, ಐಶ್ವರ್ಯ ಎಂದರ್ಥ) ಈ ಭಂಡಾರವನ್ನು ಕರಿಗಡುಬು (ಮೈದಾ)ಹಿಟ್ಟಿನಿಂದ ಮಾಡಿಕೊಳ್ಳಬಹುದು. ಮಾಡುವಾಗ ಇದರೊಳಗೆ ದುಡ್ಡು/ನಾಣ್ಯವನ್ನು ಇಡಬೇಕು. ಇದನ್ನು ಹೊಸ್ತಿಲ ಮೇಲೆ ಇಟ್ಟು ಪೂಜೆ ಮಾಡಬೇಕು. ಅಣ್ಣ /ತಮ್ಮ ಇದನ್ನು ಒಡೆಯುತ್ತಾರೆ. ಅವರಿಗೆ ಆರತಿ ಮಾಡಿ, ಒಳಗೆ ಇರುವ ದುಡ್ಡಿನ ಜೊತೆಗೆ ಉಡುಗೊರೆ ಕೊಡಬೇಕು.

source: i.ytimg.com