ಮನೆ ಕಟ್ಟಲು/ಕೊಂಡುಕೊಳ್ಳಲು ತುಂಬಾ ಸಂಕಷ್ಟಗಳು ಎದುರಿಸುತ್ತಿದ್ದರೆ, ಈ ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡಿ!!

0
4575

ಭಕ್ತಿ, ಪೂಜೆ, ಆಚರಣೆಗೆ ಆಯಾ ಪ್ರಾಂತ್ಯದಲ್ಲಿ ಒಂದೊಂದು ನಂಬಿಕೆ. ಆದ್ರೆ ಎಲ್ಲ ಪ್ರಾಂತ್ಯದಲ್ಲೂ ಇರುವ ನಂಬಿಕೆ ಕಷ್ಟದಲ್ಲಿದ್ದಾಗ ದೇವರು ಕಾಪಾಡುತ್ತಾನೆ. ಇನ್ನು ನಮ್ಮ ರಾಜ್ಯದಲ್ಲಿ ಅನೇಕ ಪವಾಡ ದೇವಸ್ಥಾನಗಳು ಇವೆ. ಈ ದೇವಸ್ಥಾನಗಳು ಭಕ್ತರನ್ನು ಕೈ ಬೀಸಿ ಕರೆಯುತ್ತವೆ.

Also read: ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳದೇ ಧರ್ಮಸ್ಥಳಕ್ಕೆ ಹೋದರೆ, ನಿಮಗೆ ಪ್ರವೇಶವಿಲ್ಲ!!

ಆ ಸಾಲಿನಲ್ಲಿ ಧರ್ಮಸ್ಥಳದ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ ಶ್ರೀ ಕೃಷ್ಣನ ದೇವಾಲಯಗಳು ಪ್ರಮುಖವಾದವು. ಈ ದೇಗಲುಕ್ಕೆ ಹಲವು ದೇವಾಲಯಗಳು ಸೇರುತ್ತಿದ್ದು, ಭಕ್ತ ಸಮೂಹವನ್ನು ಆಕರ್ಷಿಸುತ್ತಿವೆ.

ಅಂತಹ ದೇವಸ್ಥಾನಗಳ ಸಾಲಿಗೆ ಸೇರುವುದೇ ಪುರಾಣ ಪ್ರಸಿದ್ಧ ಕಲ್ಲುವೀರನಹಳ್ಳಿ ಮತ್ತಿತಾಳೇಶ್ವರ ದೇವಸ್ಥಾನ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಲ್ಲುವೀರನಹಳ್ಳಿ ಮತ್ತಿತಾಳೇಶ್ವರ ದೇವಸ್ಥಾನದ ಪ್ರಸಿದ್ಧ ಯಾತ್ರಾ ಸ್ಥಳ.

ಪುರಾಣದಲ್ಲಿ ಏನು ಉಲ್ಲೇಖ: ಋಷಿ ಮುನಿಗಳು ತಪಸ್ಸು ಮಾಡಿ ಇದೇ ಜಾಗದಲ್ಲಿ ಐಕ್ಯರಾಗಿದ್ದರು. ಆಗ ಸನ್ಯಾಸಿಯ ಮೇಲೆ ಹುತ್ತ ಬೆಳೆದಿತ್ತು. ಈ ಹುತ್ತಕ್ಕೆ ಗ್ರಾಮದ ಹಸು ದಿನ ನಿತ್ಯ ಹಾಲು ಹಾಕುತ್ತಿತ್ತು. ಅಲ್ಲಿನ ಅಚ್ಚಿರಿಯನ್ನು ಕಂಡು ಗ್ರಾಮದ ಜನ ಒಂದು ದಿನ ಹುತ್ತವನ್ನು ತೆಗೆದು ನೋಡಿದಾಗ ಅಚ್ಚರಿ ಕಾದಿತ್ತು. ಹುತ್ತದ ಕೆಳಗೆ ಒಂದು ಲಿಂಗವು ಒಡೆದು ಮೂಡಿದ್ದು ಗೋಚರವಾಯಿತು. ಮತ್ತಿಮರದ ಕೆಳಗೆ ಋಷಿಮುನಿ ತಪಸ್ಸು ಮಾಡಿರುವುದರಿಂದ ಈ ಸ್ಥಳಕ್ಕೆ ಮತ್ತಿತಾಳೇಶ್ವರ ಎಂದು ಕರೆಯುತ್ತಾರೆ.

Also read: ಈ ದೇವಾಲಯಕ್ಕೆ ಬಂದು ನರಸಿಂಹ ಸ್ವಾಮಿಯ ಮೂಲ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಕಲ ಕಾರ್ಯಗಳಲ್ಲಿ ಯಶಸ್ಸು ಶತಸಿದ್ಧ..!

ಏನು ನಂಬಿಕೆ? ದೇವರು ಭಕ್ರ ಕನಸಿನಲ್ಲಿ ಹೇಳಿರುವಂತೆ, ದೇವಸ್ಥಾನದ ಕೊಳದಲ್ಲಿ ಸ್ನಾನ ಮಾಡಿ, ಅಡುಗೆ ಮಾಡಿ, ಊಟ ಮಾಡಿದ್ರೆ ರೋಗ ರುಜಿನಗಳು ನಿವಾರಣೆಯಾಗುತ್ತವೆ. ಗುರುವಾರ ಹಾಗೂ ಭಾನುವಾರ ಮಾಡಿದ್ರೆ ಹೆಚ್ಚು ಒಳ್ಳೆಯದು. ಗಾಯದ ಸ್ಥಳದಲ್ಲಿ ಮತ್ತಿ ಚಕ್ಕೆಯ ಪುಡಿಯನ್ನು ಅಂಟಿಸಿ, ಮಾಡಿದ ಅಡಿಗೆಯನ್ನು ಮಣ್ಣಿನ ಮೇಲೆ ಹಾಕಿಕೊಂಡು ಮೂರು ವಾರ ಇದೇ ರೀತಿ ಪೂಜೆ ಮಾಡಿದ್ರೆ, ಸಮಸ್ಯೆ ನಿವಾರಣೆ ಆಗುತ್ತದೆ ಎಂದ ನಂಬಿಕೆ ಭಕ್ತರಲ್ಲಿದೆ.

ದೇವಸ್ಥಾನ 6 ರಿಂದ ಸಂಜೆ 5 ಗಂಟೆಗೆ ತೆರೆದಿರುತ್ತದೆ.

ಧನುರ್ಮಾಸದಲ್ಲಿ ಮಾತ್ರ ಬೆಳಿಗ್ಗೆ 4.30 ರಿಂದ 5 ಗಂಟೆ ವರೆಗೆ ದರ್ಶನಕ್ಕೆ ಅವಕಾಶ
ಪ್ರತಿ ಮಾಹೆ ಪೂರ್ಣಿಮೆ ದಿವಸ ಬೆಳಿಗ್ಗೆ 5.ಸರ್ಪ ದೋಷ ನಿವಾರಣೆ 00 ರಿಂದ ಸಾಯಂಕಾಲ 5.00 ರವರೆಗೆ
ಇಲ್ಲಿ ಪೂಜೆ ಮಾಡಿಸಿದ್ರೆ ಸರ್ಪ ದೋಷ ನಿವಾರಣೆ ಹಾಗೂ ರೋಗ ನಿವಾರಣೆ ಎಂಬ ನಂಬಿಕೆ
ಪ್ರತಿ ಗುರುವಾರ ಹಾಗೂ ಭಾನುವಾರ ಭಕ್ತರ ಸಂಖ್ಯೆ ಹೆಚ್ಚು
ವಿಳಾಸ- ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಲ್ಲುವೀರನಹಳ್ಳಿ

Also read: ತಿಮ್ಮಪ್ಪನ ವಿಗ್ರಹದ ತಲೆಯಲ್ಲಿ ಇದೆ ನಿಜವಾದ ಕೂದಲು…ಇದರ ಹಿಂದಿನ ರಹಸ್ಯ ನಿಮಗೆ ತಿಳಿದಿದೆಯೇ..?