ಮಲೆನಾಡಿನ ರೈತರ ಪ್ರಸಿದ್ಧ ಹಬ್ಬ ಎಂದೇ ಹೇಳಲಾಗುವ ಭೂಮಿ ಹುಣ್ಣೆಮೆ ವಿಶೇಷತೆ.

0
2103

(ಎಳ್ಳು ಅಮವಾಸೆ) ಹಬ್ಬದ ದಿನ ಮನೆಯಲ್ಲಿ ಏನೋ ಒಂಥರಾ ಸಡಗರ ಸಂಭ್ರಮ ಇದ್ದೆ ಇರುತ್ತೆ ಆದರೆ ಮಲೆನಾಡಿನ ರೈತರಿಗೆ ಎಳ್ಳು ಅಮವಾಸೆ ಬಂದರೆ ಒಂಚೂರು ಜಾಸ್ತಿನೆ ಸಂಭ್ರಮ ಮನೆಯಲ್ಲಿರುತ್ತೆ.

ಹೆಚ್ಚಾಗಿ ರೈತರು ಫಲ ಬೆಳೆಯಲು ಕನಿಷ್ಠ ಒಂದು ವರ್ಷಗಳ ಕಾಲಾವಧಿ ಬೇಕಿರುತ್ತೆ ಆದ್ರೆ ಹಸಿರುಡುಗೆ ತೊಟ್ಟು ಬಸಿರಾದ ಭೂಮಿತಾಯಿಗೆ ಸಿಮಂತ ಮಾಡುವ ಹಬ್ಬವೆ ಭೂಮಿ ಹುಣ್ಣೆಮೆ.

ಭತ್ತದ ಸಸಿಗೆ ಕಬ್ಬು, ಬಾಳೆ, ಮಾವಿನ ತೋರಣಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತೆ.ಭೂತಾಯಿಗೆ ಸೀಮಂತ ಮಾಡುವ ಈ ದಿನ ಭೂತಾಯಿಯ
ಬಯಕೆ ಈಡೇರಿಸಲು ಕಡುಬು, ಹೋಳಿಗೆ, ರೊಟ್ಟಿ, ವಿವಿಧ ಆಹಾರ ಪದಾರ್ಥ ಮಾಡಿ ಭೂತಾಯಿಗೆ ನೈವೇದ್ಯವಿಟ್ಟು ತೃಪ್ತಿ ಪಡಿಸಲಾಗುತ್ತೆ.

ಹಬ್ಬದ ದಿನ ಹೊಲದಲ್ಲಿ ಹಚ್ಚ ಹಸಿರಾಗಿ ಬೆಳೆದ ಬೆಳೆಗೆ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ರೈತರು ಹೊಲ ಗದ್ದೆಗಳಿಗೆ ಮನೆ ಮಂದಿಯೆಲ್ಲ ತೆರಳಿ ಭೂಮಿತಾಯಿಗೆ (ಚರಗ ಚೆಲ್ಲುವುದು) ನೈವೇದ್ಯವೆಂದು ಬೆಳೆದ ಬೆಳೆಗೆಲ್ಲಾ ವಿಧವಾದ ಬೇಯಿಸಿದ ಆಹಾರಪದಾರ್ಥವನ್ನು ಎರಚುವ ಪದ್ಧತಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.

ಈ ಹಬ್ಬ ಕೇವಲ ಕೃಷಿಕ ಸಮುದಾಯಗಳು ಮಾತ್ರ ಆಚರಿಸುವ ಆಚರಣೆಯಾಗಿದ್ದು,ಹಬ್ಬದ ದಿನದಂದು ಮನೆ ಮಂದಿಯೆಲ್ಲ ಹೊಲಗಳಿಗೆ ಹೋಗಿ ಭೂತಾಯಿಗೆ ಪೂಜೆ ಸಲ್ಲಿಸಿ,ಹೊಲದಲ್ಲಿಯೇ ಊಟ ಮಾಡಿ ಮನೆಗೆ ಹಿಂದಿರುಗುತ್ತಾರೆ.