ಕನ್ನಡ ನುಡಿ ಮಾತೆ ಭುವನೇಶ್ವರಿಗೆ ಮೀಸಲಾದ ಏಕೈಕ ದೇವಾಲಯ

0
2089

ಕನ್ನಡ ನುಡಿ ಮಾತೆ ಭುವನೇಶ್ವರಿಗೆ ಮೀಸಲಾದ ಏಕೈಕ ದೇವಾಲಯ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸುಂದರ ಹಚ್ಚ ಹಸುರಿನ ಸಿದ್ದಾಪುರ ತಾಲ್ಲೂಕಿನಲ್ಲಿದೆ 300 ಅಡಿ ಎತ್ತರದ ಈ ದೇವಾಲಯವನ್ನು ಕ್ರಮಿಸಬೇಕಾದರೆ 350 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕು ಹಾಗೂ ಇದು ಮೂರು ಶತಮಾನಗಳಷ್ಟು ಹಳೆಯದು .

bhuva5bhuva4

ಕರ್ನಾಟಕದ ಇದುವರೆಗು ದಾಖಲಾದ ಮೊಟ್ಟ ಮೊದಲ ಕನ್ನಡ ಕಲಿಗಳ ಮನೆತನ ಕದಂಬ ವಂಶಸ್ಥರು ಈ ದೇವಾಲಯನ್ನು ಸ್ಥಾಪಿಸಿದ್ದಾರೆ , ಕದಂಬರ ಲಾಂಛನವಾದ ಸಿಂಹವನ್ನು ನಾವು ಈ ದೇವಾಲಯದ ಮುಂಭಾಗದಲ್ಲಿ ಕಾಣಬಹುದು , ಇದರ ಜೊತೆಗೆ ಶಿವ ಲಿಂಗ ಹಾಗೂ ನಂದಿಯನ್ನು ಸಹ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ದೈವಗಳಿಗೆ ಮಂತ್ರಗಳ ಪಠಣದ ಜೊತೆ ಜೊತೆಗೆ, ನೈವೇದ್ಯ ಅಭಿಷೇಕ ಸಂಪೂರ್ಣ ವರ್ಷದ ಎಲ್ಲಾ ದಿನಗಳಲ್ಲಿ ಮಾಡಲಾಗುತ್ತದೆ.

bhuva2

ಭುವನೇಶ್ವರಿ ದೇವಿ ದೇವಾಲಯದ ಕಲ್ಪನೆ ಕದಂಬ ವಂಶದ್ದಾದರೂ ಮುಂದೆ ವಿಜಯನಗರ ರಾಜರು ದೇವಾಲಯದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನಡೆಸಿಕೊಂಡು ಹೋಗುತ್ತಾರೆ . ಉಡುಪಿ ಜಿಲ್ಲೆಯ ಗಂಗೊಳ್ಳಿ ನದಿಯಿಂದ ಮೊದಲುಗೊಂಡು ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಯವರೆಗೂ ಬಿಳಗಿ ರಾಜ್ಯವು ಹಬ್ಬಿರುತ್ತದೆ . ಬಸವೇಂದ್ರ ಬಿಳಗಿ ಮನೆತನದದ ಕೊನೆಯ ಆಡಳಿತಗಾರ 1692 ರಲ್ಲಿ ದೇವಾಲಯದ ಸಂಪೂರ್ಣ ಜೀರ್ಣೋದ್ಧಾರ ಮಾಡಿದರು ಎನ್ನಲಾಗಿದೆ.

bhuva1bhuva3

ಒಂದು ಭಾಷೆಗೆ ದೇವರ ಸ್ಥಾನ ಮಾನಗಳನ್ನು ಕೊಟ್ಟು ದೇವಾಲಯವನ್ನು ನಿರ್ಮಿಸಿರುವುದು ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅಂತಹ ದೈವ ಭಾಷೆಯನ್ನು , ನಮ್ಮ ಹಿರಿಯರಿಂದ ಬಂದ ಬಳುವಳಿಯನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ .