ಅತ್ಯಾಚಾರ ಆರೋಪ ಹೊತ್ತಿರುವ ಬಿಡದಿ ನಿತ್ಯಾನಂದಸ್ವಾಮಿ ದೇಶ ಬಿಟ್ಟು ಪರಾರಿ; ಪಾಸ್‌ಪೋರ್ಟ್ ಇಲ್ಲದೆ ವಿದೇಶಕ್ಕೆ ಮಾಯವಾಗಿ ಹೋದ್ರಾ??

0
391

ಅತ್ಯಾಚಾರ ಆರೋಪ ಹೊತ್ತಿರುವ ಸ್ವಗೋಷಿತ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ದೇಶದಿಂದ ಪರಾರಿಯಾಗಿದ್ದಾನೆ ಎಂದು ಗುಜರಾತ್​ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಸಲಿಗೆ ಸುಮಾರು ಎರಡು ತಿಂಗಳ ಹಿಂದೆಯೇ ನಿತ್ಯಾನಂದಸ್ವಾಮಿ ಭಾರತದಲ್ಲಿರುವ ಬಗ್ಗೆ ಹಲವು ಅನುಮಾನಗಳಿದ್ದವು. ಕೆರಬಿಯನ್ ಅಥವಾ ಆಸ್ಟ್ರೇಲಿಯಾ ದ್ವೀಪಕ್ಕೆ ಹಾರಿ ಕೆಲವು ದಿನಗಳಾದವು ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು ಅದು ನಿಜವೆಂದು ಗುಜರಾತ್ ಪೊಲೀಸ್ ಖಚಿತಗೊಳಿಸಿದ್ದಾರೆ.


Also read: ಫೇಸ್‍ಬುಕ್ ಪ್ರಿಯತಮೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಗುಡಿ ನಿರ್ಮಿಸಿ ಗೆಳತಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಟೆಕ್ಕಿ.!

ನಿತ್ಯಾನಂದ ಪರಾರಿ?

ಹೌದು ಆಶ್ರಮಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣ ಬೆಳಕಿಗೆ ಬಂದ ನಂತರ ಸ್ವಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ದೇಶ ಬಿಟ್ಟು ಪಲಾಯನಗೈದಿದ್ದು ಆತನ ವಿರುದ್ಧ ಸಾಕ್ಷಿ ಸಂಗ್ರಹಿಸಲು ಗುಜರಾತ್ ಪೊಲೀಸರು ಸತತ ಪ್ರಯತ್ನ ಮುಂದುವರಿಸಿದ್ದಾರೆ. ನಿತ್ಯಾನಂದನ ಇಬ್ಬರು ಶಿಷ್ಯರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತಮ್ಮ ಆಶ್ರಮವನ್ನು ನಡೆಸಲು ಅನುಯಾಯಿಗಳಿಂದ ಹಣ ಸಂಗ್ರಹಿಸಲು ಇಬ್ಬರು ಮಕ್ಕಳನ್ನು ಅಪಹರಿಸಿ ಬಂಧಿಸಿಟ್ಟ ಆರೋಪದ ಮೇಲೆ ಈಗಾಗಲೇ ನಿತ್ಯಾನಂದನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನಗರದ ಹೊರವಲಯದಲ್ಲಿರುವ ಬಿಡದಿಯಲ್ಲಿ ಆಶ್ರಮ ಕಟ್ಟಿಕೊಂಡು ಅಲ್ಲಿನ ಗುರುಕುಲದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವನ್ನೂ ನೀಡುತ್ತಿದ್ದ ಆದರೆ, ಈ ವದಂತಿಯನ್ನು ತಳ್ಳಿಹಾಕಿದ್ದ ಅವರ ಶಿಷ್ಯರು ನಿತ್ಯಾನಂದ ಸ್ವಾಮಿಗಳು ದೀರ್ಘಕಾಲದ ತಪಸ್ಸಿಗಾಗಿ ಉತ್ತರ ಭಾರತಕ್ಕೆ ತೆರಳಿದ್ದಾರೆ ಎಂದು ಹೇಳಿದ್ದರು. ಆದರೀಗ, ವಿವಾದಿತ ಸ್ವಾಮಿ ನಿತ್ಯಾನಂದ ದೇಶ ಬಿಟ್ಟು ಹೋಗಿರುವುದನ್ನು ಗುಜರಾತ್​ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರುತ್ತಿದ್ದಂತೆ ಅವರು ಗುಜರಾತ್​ನ ಅಹಮದಾಬಾದ್​ನಲ್ಲಿರುವ ತಮ್ಮ ಆಶ್ರಮದ ಇನ್ನೊಂದು ಬ್ರಾಂಚ್​ಗೆ ಶಿಫ್ಟ್​ ಆಗಿದ್ದರು. ಅವರ ಆಶ್ರಮದ ಆಡಳಿತ ಮಂಡಳಿಯೂ ಅಹಮದಾಬಾದ್​ಗೆ ಸ್ಥಳಾಂತರವಾಗಿತ್ತು.


Also read: ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ; ಪರಿಣಾಮಕಾರಿ ಕಲಿಕೆಗೆ ಮಾತೃಭಾಷೆಯಲ್ಲಿ ಬೋಧಿಸುವುದು ಮುಖ್ಯವೆಂದ ಕೇಂದ್ರದ ಮಂತ್ರಿಗಳು.!

ನಂತರ ಅವರು ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ನಿತ್ಯಾನಂದ ಸ್ವಾಮಿ ಇತ್ತೀಚೆಗೆ ತಮ್ಮ ಪ್ರವಚನದ ಕೆಲವು ವಿಡಿಯೋ ತುಣುಕುಗಳನ್ನು ಕೂಡ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ, ಆ ಯಾವ ವಿಡಿಯೋಗಳೂ ಈಗ ರೆಕಾರ್ಡ್​ ಮಾಡಿರುವುದಲ್ಲ. ನಿತ್ಯಾನಂದ ಸ್ವಾಮಿ ಬೆಂಗಳೂರಿಗೆ ಬಾರದೆ ಅನೇಕ ವರ್ಷಗಳಾಗಿವೆ. ಆತನ ಮೇಲೆ ರಂಜಿತಾ ಸೇರಿದಂತೆ ಇನ್ನೂ ಕೆಲವು ಶಿಷ್ಯರು ಅತ್ಯಾಚಾರದ ಆರೋಪ ಮಾಡಿದ ನಂತರ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು ಭಾರತದಲ್ಲಿ ಹುಡುಕುವುದು ವ್ಯರ್ಥ ಎಂದು ಅಹಮದಾಬಾದ್​ ಪೊಲೀಸರು ಹೇಳಿದ್ದಾರೆ.


Also read: ಕಟ್ಟಡವೊಂದರ ಮಹಡಿಯಿಂದ ಸುರಿಯಿತು ಹಣದ ಮಳೆ; -2 ಸಾವಿರ, 500 ಮುಖಬೆಲೆಯ ನೋಟುಗಳನ್ನು ನೋಡಿ ಮುಗಿಬಿದ್ದು ಆರಿಸಿಕೊಂಡ ಜನ.!

ಖಚಿತ ಪಡಿಸಿದ ಗುಜರಾತ್ ಪೊಲೀಸ್:

ಗುಜರಾತ್ ಪೊಲೀಸರಲ್ಲದೇ, ಕರ್ನಾಟಕದಲ್ಲೂ ನಿತ್ಯಾನಂದ ಅವರ ಮೇಲೆ ಹಲವು ಕ್ರಿಮಿನಲ್ ಕೇಸ್ ಗಳಿವೆ. 2018ರಲ್ಲಿ ನಿತ್ಯಾನಂದ ತಮ್ಮ ಪಾಸ್‌ಪೋರ್ಟ್ ನವೀಕರಣಕ್ಕೆ ರಾಮನಗರ ಪೊಲೀಸ್ ವರಿಷ್ಠರಿಗೆ ಅರ್ಜಿ ಸಲ್ಲಿಸಿದ್ದರು. ನವೀಕರಣಕ್ಕೆ ಪೊಲೀಸರ ಧೃಡೀಕರಣ ಅಗತ್ಯವಾಗಿರುವುದರಿಂದ, ನಿತ್ಯಾನಂದ ತಮ್ಮ PROಗಳ ಮೂಲಕ ಎಸ್ಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹಲವು ಕೇಸ್ ಗಳಿರುವುದರಿಂದ ರಾಮನಗರದ ಎಸ್ಪಿ ರಮೇಶ್ ಬಾನೋತ್, ಅವರ ಪಾಸ್‌ಪೋರ್ಟ್ ನವೀಕರಣಕ್ಕೆ ಪೊಲೀಸ್ ಧೃಡೀಕರಣ ನೀಡಿರಲಿಲ್ಲ. ಕಾನೂನು ಪ್ರಕಾರ ಅವರು ದೇಶ ಬಿಟ್ಟು ಹೋಗುವ ಹಾಗಿಲ್ಲ. ಆದರೆ ಬೇರೆ ಹೆಸರಿನಲ್ಲಿ ಹೋದ್ರಾ ಎನ್ನುವ ಅನುಮಾನಗಳು ಮೂಡಿದೆ,