ಬಿಗ್ ಬಾಸ್ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಇನ್ನೊಂದು ಟ್ವಿಸ್ಟ್ ನೀಡಿದ್ರು ಕಿಚ್ಚ ಸುದೀಪ್

0
2238

ಬೆಂಗಳೂರು: ವಾರದ ಕಥೆ ಕಿಚ್ಚನ ಜೊತೆ ಶುರುವಾಗೋ ಮೊದಲೇ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಇನ್ನೊಂದು ಟ್ವಿಸ್ಟ್‌ ನೀಡಿದ್ರು. ಅದೇನೆಂದರೆ ಈ ವಾರ 2 ಸ್ಪರ್ಧಿಗಳು ಬಿಗ್‌ಬಾಸ್‌ ಮನೆಯಿಂದ ಹೊರನಡೆಯುತ್ತಾರೆ ಅನ್ನೋದು. ಇದನ್ನು ಕೇಳಿದ ಸ್ಪರ್ಧಿಗಳೆಲ್ಲಾ ನಿರಾಶರಾದರು.

 

ಈ ವಾರದ ಎಲಿಮಿನೇಶನ್‌ನಿಂದ ಭುವನ್‌ ಹಾಗೂ ಕೀರ್ತಿ ಸೇಫ್‌ ಆದ್ರು. ಮಾಳವಿಕ ಹಾಗೂ ಪ್ರಥಮ್‌ ಮನೆಯಿಂದ ಹೊರನಡೆಯಬೇಕಾಯಿತು. ಆದ್ರೆ ಒಳ್ಳೆ ಹುಡುಗ ಪ್ರಥಮ್‌ ಹೊರಹೋಗಿದ್ದು ಪ್ರಥಮ್‌ ಅಭಿಮಾನಿಗಳಿಗಂತೂ ಶಾಕ್‌ ನೀಡಿದೆ.

 

ಮನೆಯಿಂದ ಹೊರಹೋಗುತ್ತಾ  ಪ್ರಥಮ್‌ ಸುದೀಪ್‌ರಲ್ಲಿ ತನ್ನ ಮೂರು ಆಸೆಯನ್ನ ಈಡೇರಿಸುವಂತೆ ಕೇಳಿದ್ರು, ಒಂದು ಸುದೀಪ್‌ಗೆ ಕೈಯಾರೆ ಸಿಹಿ ತಿನ್ನಿಸಬೇಕೆನ್ನುವುದು, ಇನ್ನೊಂದು ಸೆಲ್ಫಿ ತೆಗೆದುಕೊಳ್ಳಬೇಕೆಂಬುದು  ಇನ್ನು ಮೂರನೆಯದು ಬಿಗ್‌ಬಾಸ್‌ ಯಾರು ಎನ್ನುವುದನ್ನು ಕಣ್ಣಾರೆ ನೋಡಬೇಕು ಎನ್ನುವುದು. ಬರೀ ಇಷ್ಟು ದಿನದಿಂದ ವಾಯ್ಸ್‌ ಮಾತ್ರ ಕೇಳುತ್ತಿದೆ. ಇದೀಗ ಕಣ್ಣಾರೆ ನೋಡಬೇಕು ಎನ್ನುವ ಬೇಡಿಕೆಯನ್ನು ಕಿಚ್ಚನ ಮುಂದಿಟ್ಟಿದ್ದಾರೆ.

 

ಇದಕ್ಕೆ ಜಾಣ್ಮೆಯಿಂದ ಉತ್ತರಿಸಿದ ಸುದೀಪ್‌ ನನಗೆ ದೇವರನ್ನು ನೋಡಬೇಕೆಂಬ ಆಸೆ ಚಿಕ್ಕಂದಿನಿಂದಲೂ ಇದೆ, ದೇವರು ನನ್ನ ಮುಂದೆ ಯಾವಾಗ ಪ್ರತ್ಯಕ್ಷರಾಗುತ್ತಾರೋ  ಅಂದು ಬಿಗ್‌ಬಾಸ್‌ನ ದರ್ಶನ ನಿಮಗೆ ಮಾಡಿಸುತ್ತೇನೆ ಎಂದು ಹೇಳಿ ಜಾರಿಕೊಂಡರು.

 

ಹೌದು, ಬಿಗ್‌ಬಾಸ್‌ ರಿಯಾಲಿಟಿ ಶೋ ಇನ್ನೂ ಎರಡು ವಾರ ಮುಂದುವರೆಯಲಿದೆ. ಅದನ್ನು ಕಾರ್ಯಕ್ರಮದ ನಿರ್ವಾಹಕ ಕಿಚ್ಚ ಸುದೀಪ್‌ ಪ್ರಕಟಿಸಿದ್ದಾರೆ.

ಇನ್ನು, ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್‌ ಆಗಿದ್ದಾರೆ. ಒಬ್ಬರು ಪ್ರಥಮ್‌, ಇನ್ನೊಬ್ಬರು ಮಾಳವಿಕ. ಆದರೆ, ಬಿಗ್‌ಬಾಸ್‌ಗೆ ಟ್ವಿಸ್ಟ್‌ ಕೊಡುವ ಕಾರಣಕ್ಕಾಗಿ ಈ ಹಿಂದೆ ಶಾಲಿನಿ ಹಾಗೂ ಶೀತಲ್‌ಶೆಟ್ಟಿ ಅವರನ್ನು ಸೀಕ್ರೇಟ್‌ ರೂಮ್‌ಗೆ ಕಳುಹಿಸಿದಂತೆ ಇವರಿಬ್ಬರನ್ನೂ ಅಥವಾ ಇಬ್ಬರಲ್ಲಿ ಒಬ್ಬರನ್ನು ಸೀಕ್ರೇಟ್‌ ರೂಮ್‌ನಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ.  ಈ ಕುತೂಹಲಕ್ಕೆ ಅದಕ್ಕೆ ಭಾನುವಾರ ಖಚಿತ ಉತ್ತರ ಸಿಕ್ಕಿದೆ.

 

ಇನ್ನೊಂದು ಸುದ್ದಿಯೆಂದರೆ, ಬಹುತೇಕ ಕಡೆ ಈ ಬಾರಿಯ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ರೇಖಾ ಅವರೇ ಗೆಲ್ಲಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದುವರೆಗೆ ಹೊರಬಂದಿರುವ ಸ್ಪರ್ಧಿಗಳ ಪ್ರಕಾರ, ರೇಖಾ ಅವರು ಉತ್ತಮವಾಗಿ ಆಟವಾಡುತ್ತಿದ್ದು, ಅವರೇ ಬಿಗ್‌ಬಾಸ್‌ ಆಗುವ ಸಾಧ್ಯತೆ ಇದೆ. ಪ್ರಥಮ್‌ ಹಾಗೂ ಮಾಳವಿಕ ಎಲಿಮಿನೇಟ್‌ ಆಗುವುದರೊಂದಿಗೆ ಬಿಗ್‌ಬಾಸ್‌ ಮನೆಯಲ್ಲೀಗ ಭುವನ್‌, ಕಿರಿಕ್‌ ಕೀರ್ತಿ, ಶಾಲಿನಿ, ಮೋಹನ್‌ ಹಾಗೂ ರೇಖಾ ಉಳಿದಂತಾಗಿದೆ. ಎಂದು ತಿಳಿದು ಬಂಬ ಮೂಲಗಳಿಂದ ಬಂದಮಾಹಿತಿ.