ಪ್ರತೀ ಸೀಸನ್ ನಲ್ಲೂ ಕಿಚ್ಚ ಸುದೀಪ್ ಸ್ನೇಹಿತರೊಬ್ಬರನ್ನು ಬಿಗ್ಗ್ ಬಾಸ್ ಮನೆಯ ಸದಸ್ಯರನ್ನಾಗಿ ಮಾಡಿದ್ದಾರೆ ಗೊತ್ತೇ??

0
847

ಬಿಗ್ಗ್ ಬಾಸ್ ನ ಪ್ರತಿ ಸೀಸನ್ ನಲ್ಲು ಕಿಚ್ಚ ಸುದೀಪ್ ಸ್ನೇಹಿತರೊಬ್ಬರು ಮನೆಯ ಸದಸ್ಯರಾಗುತಿದ್ದಾರೆ.. ಆದರೇ ಎಲ್ಲೂ ಕೂಡ ಒಂದು ಸ್ವಲ್ಪವೂ ಬೇದ ಭಾವ ಮಾಡದೇ ಎಲ್ಲಾ ಸದಸ್ಯರನ್ನು ಒಂದೇ ಸಮನಾಗಿ ನೋಡುವ ಕಿಚ್ಚನ ಗುಣ ನಿಜಕ್ಕೂ ಮೆಚ್ಚುವಂತದ್ದು… ಹಾಗಿದ್ದರೆ ಆ ಸದಸ್ಯರು ಯಾರ್ಯಾರು ಇಲ್ಲಿದೆ ನೋಡಿ..

ಸೀಸನ್ 1
ಬಿಗ್ಗ್ ಬಾಸ್ ಕನ್ನಡದ ಸೀಸನ್ ಒಂದರಲ್ಲಿ ಕಿಚ್ಚನ ಕುಚ್ಚಿಕ್ಕು ಎಂದೇ ಹೇಳಬಹುದಾದ ಅರುಣ್ ಸಾಗರ್ ಮನೆಯ ಸದಸ್ಯ ರಾಗಿದ್ದರು.. ಕೆಲವು ನೋಡುಗರು ಅರುಣ್ ಸಾಗರ್ ರವರೇ ವಿನ್ನರ್ ಎಂಬ ಅಭಿಪ್ರಾಯವನ್ನು ಪಟ್ಟಿದ್ದರು.. ಆದರೇ ಸ್ನೇಹಿತ ಅಂತ ಎಲ್ಲೂ ಸ್ವಲ್ಪವೂ ಬೇದ ಭಾವ ಮಾಡದೇ ಅರ್ಹ ಸದಸ್ಯನಿಗೆ ವಿನ್ನರ್ ಪಟ್ಟ ಒಲಿಯಿತು..

ಸೀಸನ್ 2
ಸೀಸನ್ ಎರಡರಲ್ಲಿ ಮನೆಯ ಸದಸ್ಯರಾಗಿದ್ದ ಅಕುಲ್ ಬಾಲಾಜಿ ಕಿಚ್ಚನ ಒಬ್ಬ ಒಳ್ಳೆಯ ಸ್ನೇಹಿತರೂ ಕೂಡ ಹೌದು.. ಈ ಮೊದಲು ಸ್ಟಾರ್ ಸುವರ್ಣದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದಂತಹ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ನಲ್ಲಿ ಕಿಚ್ಚ ಸುದೀಪ್ ಹಾಗೂ ಅಕುಲ್ ಬಾಲಾಜಿ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದನ್ನು ನಾವು ಇಲ್ಲಿ ನೆನೆಯಬಹುದು..

ಸೀಸನ್ 3
ಬಿಗ್ಗ್ ಬಾಸ್ ಕನ್ನಡದ ಸೀಸನ್ ಮೂರರಲ್ಲಿ ಆಪ್ತರಿಲ್ಲದಿದ್ದರೂ ಬಂದಿದ್ದ ಕೆಲವು ಸದಸ್ಯರು ಕಿಚ್ಚ ಸುದೀಪ್ ರವರ ಒಳ್ಳೆಯ ಸ್ನೇಹಿತರಾಗಿದ್ದರು..

ಸೀಸನ್ 4
ಸೀಸನ್ ನಾಲ್ಕರಲ್ಲಿ ಆಪ್ತರಲ್ಲದಿದ್ದರೂ ಕಿಚ್ಚನಿಗೆ ಬ್ರೇಕ್ ಕೊಟ್ಟ ಹುಚ್ಚ ಸಿನಿಮಾದ ನಿರ್ದೇಶಕರಾದ ಓಂ ಪ್ರಕಾಶ್ ರವರು ಜೊತೆಗೆ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದಲ್ಲಿ ಅಭಿನಯಿಸಲು ಕಿಚ್ಚ ಅವಕಾಶ ಕೊಟ್ಟಿದ್ದ ಭುವನ್ ಪೊನಣ್ಣ ಕೂಡ ಈ ಸೀಸನ್ ನ ಕಂಟೆಸ್ಟೆನ್ಟ್ ಗಳಾಗಿದ್ದರು.

ಸೀಸನ್ 5
ಸೀಸನ್ 5 ರಲ್ಲೂ ಕೂಡ ಕಿಚ್ಚನ ಆಪ್ತ ಸ್ನೇಹಿತರೊಬ್ಬರು ಮನೆಯೊಳಗಿದ್ದಾರೆ.. ಅವರೇ ಕಾರ್ತಿಕ್ ಜಯರಾಮ್ JK.. ಸುದೀಪ್ ರವರ ಕೆಂಪೆಗೌಡ ಚಿತ್ರದಲ್ಲೇ ಜಯರಾಮ್ ಕಾರ್ತಿಕ್ ರವರು ಮೊದಲ ಬಾರಿಗೆ ಸಿನಿಮಾದಲ್ಲಿ ನಟನೆ ಮಾಡಿದ್ದು ಗಮನಾರ್ಹವಾದದ್ದು.. ಜೊತೆಗೆ ಫ್ಯಾಮಿಲಿ ಫ್ರೆಂಡ್ ಆಗಿರುವ JK ಸೆಲಿಬ್ರೆಟಿ ಕ್ರಿಕೇಟ್ ಲೀಗ್ ನಲ್ಲೂ ಕೂಡ ಒಬ್ಬ ಉತ್ತಮ ಪ್ಲೇಯರ್ ಆಗಿದ್ದಾರೆ.. ಇದು ಕಿಚ್ಚನ ನಾಯಕತ್ವ ಇರುವ ತಂಡವಾಗಿದೆ..

ಶುಭವಾಗಲಿ ಧನ್ಯವಾದಗಳು..