ಬಿಗ್ ಬಾಸ್ ಮನೆಯಲ್ಲಿ ಸುನಾಮಿ ಕಿಟ್ಟಿ ದರ್ಬಾರು.

0
691

ಬಿಗ್ ಬಾಸ್ ಸೀಸನ್ 4 ರಿಯಾಲಿಟಿ ಶೋನ  ಮೊದಲ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಶೋ 2 ವಾರ ವಿಸ್ತರಣೆಯಾಗುತ್ತಿದ್ದಂತೆ, ಮತ್ತೆ ಮನೆಯೊಳಗೆ ಸದಸ್ಯರು ಆಗಮಿಸಿದ್ದಾರೆ.

ಇನ್ನು ಈ ವಾರ ಮನೆಗೆ ಅತಿಥಿಯಾಗಿ ಆಗಮಿಸಿರುವ ಸುನಾಮಿ ಕಿಟ್ಟಿ ಬಿಗ್ ಬಾಸ್ ಮನೆಯಲ್ಲಿ ನೀಡಲಾಗಿದ್ದ ಟಾಸ್ಕ್‌ನಲ್ಲಿ ಭಾಗವಹಿದ್ರು, ನಿನ್ನೆ ರಿಂಗ್‌ ಕಿಂಗ್‌ ರಿಟರ್ನ್‌ ಎನ್ನುವ ಟಾಸ್ಕ್‌ನಲ್ಲಿ ಸ್ಪರ್ಧಾಳುಗಳಿಗೆ ನೀಡಲಾಗಿತ್ತು, ರಿಂಗ್‌ ಕಿಂಗ್‌ ರಿಟರ್ನ್‌ ಟಾಸ್ಕ್‌ನಲ್ಲಿ ಈಜುಕೋಳಕ್ಕೆ ಧುಮುಕಿ ಅಲ್ಲಿ ಹರಡಲಾಗಿರುವ ಬಿಲ್ಲೆಗಳನ್ನು ಸಂಗ್ರಹಿಸಿ ಗಾಜಿನ ಡಬ್ಬದಲ್ಲಿ ಹಾಕಬೇಕಿತ್ತು.

ಪ್ರತಿಯೊಬ್ಬರೂ 25 ಬಿಲ್ಲೆಗಳನ್ನು ಸಂಗ್ರಹಿಸಬೇಕು. ಭುವನ್ ನಾಯಕತ್ವದಲ್ಲಿ ಸುನಾಮಿ ಕಿಟ್ಟಿ, ಶಾಲಿನಿ ಒಂದು ತಂಡ ಹಾಗೂ , ಕೀರ್ತಿ, ರೇಖಾ, ಮೋಹನ್‌ ಇನ್ನೊಂದು ತಂಡವನ್ನು ರಚಿಸಲಾಯಿತು, ಪ್ರತಿ ತಂಡ 75 ಬಿಲ್ಲೆಗಳನ್ನು ಸಂಗ್ರಹಿಸಬೇಕಿತ್ತು. 75 ಬಿಲ್ಲೆಗಳನ್ನು ಸಂಗ್ರಹಿಸಿದ ತಂಡವನ್ನು ವಿಜೇತ ತಂಡ ಎಂದು ಘೋಷಿಸಲಾಗುತ್ತದೆ. ಆಟದಲ್ಲಿ ಭುವನ್‌ ತಂಡ ಈ ಟಾಸ್ಕ್‌ನಲ್ಲಿ ಗೆಲುವು ಪಡೆಯಿತು.