ಬಿಗ್ ಬ್ರೇಕಿಂಗ್; ಮಾರ್ಚ್ 31 ವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ 9 ಜಿಲ್ಲೆಗಳು ಲಾಕ್ ಡೌನ್, ಏನೇನ್ ಇರೋದಿಲ್ಲ.??

0
422

ಕೊರೊನಾ ಅಟ್ಟಹಾಸ ದೇಶದಲ್ಲಿ ಮತ್ತೆ ಜೋರಾಗಿದ್ದು, ರಾಜ್ಯದಲ್ಲಿ ಮತ್ತೆ ಹಲವು ಪ್ರಕರಣಗಳು ಪತ್ತೆಯಾಗಿದ್ದು, ದುಬೈನಿಂದ ಇಂದು ಬೆಳಗ್ಗೆ ಆಗಮಿಸಿರುವ ಕನ್ನಡಿಗರ ಪೈಕಿ 6 ಜನರಿಗೆ ಸೋಂಕು ಪತ್ತೆಯಾಗಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 31 ರವರೆಗೆ ದೇಶಾದ್ಯಂತ ಸಂಚರಿಸುವ ಎಲ್ಲ ಎಲ್ಲ ಬಸ್ ಸೇವೆ, ಪ್ರಯಾಣಿಕರ ರೈಲು, ಮೆಟ್ರೋ ಎಲ್ಲ ಸಂಚಾರವನ್ನು 9 ಜಿಲ್ಲೆಗಳಲ್ಲಿ ರದ್ದುಗೊಳಿಸಲಾಗಿದೆ. ಅದರಂತೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇವತ್ತು ನಡೆದ ತುರ್ತು ಸಭೆಯಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ಈ ಒಂಬತ್ತು ಜಿಲ್ಲೆಗಳಲ್ಲಿ ವೈದ್ಯಕೀಯ, ಔಷದಿ, ದಿನಸಿ, ಕೃಷಿ ಮೊದಲಾದ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಮಾರ್ಚ್ 31 ವರೆಗೆ ಬೆಂಗಳೂರು ಲಾಕ್ ಡೌನ್?

ಹೌದು ರಾಜ್ಯದ 9 ಜಿಲ್ಲೆಗಳು ಸೇರಿದಂತೆ ದೇಶಾದ್ಯಂತ 75ಕ್ಕೂ ಹೆಚ್ಚು ಜಿಲ್ಲೆಗಳನ್ನು ಇದೇ ರೀತಿ ಲಾಕ್ ಡೌನ್ ಮಾಡಲಾಗುತ್ತಿದೆ. ಮೂರನೇ ಹಂತಕ್ಕೆ ಪಸರಿಸಲು ಅಣಿಯಾದಂತಿರುವ ಕೊರೊನಾ ವೈರಸ್ ರೋಗದ ಸೋಂಕು ನಿಗ್ರಹಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇವತ್ತು ನಡೆದ ತುರ್ತು ಸಭೆಯಲ್ಲಿ ಇದೂ ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೊರೋನಾ ವೈರಸ್ ಸೋಂಕಿತರು ಪತ್ತೆಯಾಗಿರುವ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿ, ಧಾರವಾಡ, ಚಿಕ್ಕಬಳ್ಳಾಪುರ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಬಂದ್ ಮಾಡಲಾಗುತ್ತದೆ. ಎಡಿ-ಡಿಜಿಪಿ ಪ್ರವೀಣ್ ಸೂದ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಡಿಸಿಎಂ ಅಶ್ವತ್ಥನಾರಾಯಣ, ಸಚಿವರಾದ ಬಸವರಾಜ್ ಬೊಮ್ಮಾಯಿ ಮತ್ತು ಡಾ. ಸುಧಾಕರ್ ಮೊದಲಾದವರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಾಯಿತು.

ಇವತ್ತು ಜನತಾ ಕರ್ಫ್ಯೂ ರಾತ್ರಿ 9ಗಂಟೆಯವರೆಗೆ ಇದೆ. ಅದಾದ ಬಳಿಕ ರಾತ್ರಿ 9ರಿಂದ 12ಗಂಟೆಯವರೆಗೆ ಸೆಕ್ಷನ್ 144 ಜಾರಿಯಾಗಲಿದೆ. ನಾಳೆ ಇಡೀ ದಿನ ಸಾರ್ವಜನಿಕ ಬಸ್ ಸೇವೆ ಅಲಭ್ಯ ಇರಲಿದೆ. ಮಾರ್ಚ್ 31ರವರೆಗೆ ಅಂತಾರಾಜ್ಯ ಬಸ್ ಸೇವೆ ಕೂಡ ಇರುವುದಿಲ್ಲ. ಹಾಗೆಯೇ ಎಸಿ ಬಸ್ಸುಗಳೂ ರಸ್ತೆಗಿಳಿಯುವುದಿಲ್ಲ. ಎಲ್ಲಾ ರೈಲುಗಳ ಸೇವೆಯೂ ಬಂದ್ ಆಗಿರಲಿದೆ. ಅದರಂತೆ ಇನ್ನು 10 ದಿನಗಳವರೆಗೂ ಬೆಂಗಳೂರನ್ನು ಸಂಪೂರ್ಣ ಸ್ತಬ್ಧಗೊಳಿಸುವುದು ಸೂಕ್ತ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಈ ಬಗ್ಗೆ ಸರ್ಕಾರಕ್ಕೆ ವಿವರಣೆ ನೀಡಿದ್ದರು. ಸರ್ಕಾರ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.

ಲಾಕ್ ಡೌನ್ ಜಿಲ್ಲೆಗಳು?

ಮಾರ್ಚ್ 31 ವರೆಗೆ ಒಂಬತ್ತು ಜಿಲ್ಲೆಗಳು ಲಾಕ್‌ಡೌನ್ ಆಗಲಿವೆ. ಅಂತಹ ಜಿಲ್ಲೆಗಳು ಹೀಗಿದ್ದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬೆಳಗಾವಿ ಸೇರಿದಂತೆ ಕೋವಿಡ್-19 ಪ್ರಕರಣ ಕಂಡುಬಂದಿರುವ ಈ 9 ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

ನಾಳೆಯಿಂದ ಬೆಂಗಳೂರಿನಲ್ಲಿ ರಾಸಾಯನಿಕ ಸಿಂಪಡಣೆ?

ಕೊರೋನಾ ವೈರಸ್ ಮೂರನೇ ಹಂತ ತಲುಪಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುವುದು ಖಚಿತ. ಹೀಗಾಗಿ, ನಾಳೆಯಿಂದ ಬೆಂಗಳೂರಿನಾದ್ಯಂತ ರಾಸಾಯನಿಕ ಸಿಂಪಡಣೆ ಮಾಡಲಾಗುವುದು. ಸೋಂಕು ವ್ಯಾಪಿಸದಂತೆ ತಡೆಗಟ್ಟಲು ನಾಳೆ ಬೆಳಗ್ಗೆಯಿಂದಲೇ ಸ್ಪ್ರೇ ಶುರು ಮಾಡಲಾಗುವುದು. ಸೋಂಕಿನ ಪರಿಣಾಮ ತಗ್ಗುವವರೆಗೂ ರಾಸಾಯನಿಕ ಸಿಂಪಡಣೆ ಮಾಡುತ್ತಲೇ ಇರಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.