ಹೊಸ ಕಾರು ಖರೀಧಿಸುವವರಿಗೆ ಸುವರ್ಣಾವಕಾಶ; 2 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್ ಆಫರ್, ಯಾವ ಕಾರಿಗೆ ಎಷ್ಟು ಕಡಿಮೆ ಇಲ್ಲಿದೆ ನೋಡಿ ಮಾಹಿತಿ.!

0
1388

ಮಂದಗತಿಯಲ್ಲಿ ಸಾಗುತ್ತಿರುವ ದೇಶದ ಆರ್ಥಿಕತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವಾಹನ ಉತ್ಪಾದನಾ ಕಂಪನಿಗಳು ಭರ್ಜರಿ ರಿಯಾಯ್ತಿ ದರ ಘೋಷಣೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು. ಮಾರುತಿ, ಟೊಯೊಟಾ, ಹ್ಯುಂಡೈ, ಹೋಂಡಾದಂಥ ಪ್ರತಿಷ್ಠಿತ ಕಂಪನಿಗಳು ಗೋಡೌನ್‌ನಲ್ಲಿ ನಿಂತಿರುವ ಕಾರುಗಳ ಮಾರಾಟಕ್ಕೆ ತೀವ್ರ ಸ್ಪರ್ಧೆಗಿಳಿದಿವೆ. ಇದರಿಂದಾಗಿ ಕಾರು ಖರೀದಿಗೆ ಇದು ಸಕಾಲ ಎಂಬ ವಾತಾವರಣ ಸೃಷ್ಟಿಸಲಾಗುತ್ತಿದೆ. ಅದರಂತೆ 1 ಲಕ್ಷದಿಂದ 2 ಲಕ್ಷದ ವರೆಗೆ ಇಳಿಕೆಯಾಗಿದೆ.

ಕಾರು ಖರೀದಿಗೆ 2 ಲಕ್ಷ ಆಫರ್?

ಹೌದು BS 6 ಬಿಎಸ್6 ಎಂಜಿನ್ ಕಾರುಗಳನ್ನು ಮಾತ್ರ 2020ರ ಏಪ್ರಿಲ್1 ರಿಂದ ಮಾರಾಟ ಮಾಡುವ ಅನಿವಾರ್ಯತೆಯಲ್ಲಿ ಸಿಲುಕಿರುವ ಅಟೋಮೊಬೈಲ್ ಕಂಪನಿಗಳು ಈಗ ಉತ್ಪಾದನೆಯಾಗಿರುವ ಕಾರುಗಳನ್ನು ಮಾರಾಟ ಮಾಡಲು ಭರ್ಜರಿ ಡಿಸ್ಕೌಂಟ್ ಆಫರ್-ಗಳನ್ನು ಘೋಷಣೆ ಮಾಡಿದೆ. ಎರಡು ತ್ರೈಮಾಸಿಕದಲ್ಲೂ ಕಾರು ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಕಾರು ಬೆಲೆಗಳು ಇಳಿಕೆಯಾಗಿರುವುದರಿಂದ ಗ್ರಾಹಕರು ಹಬ್ಬದ ಸಂದರ್ಭದಲ್ಲಿ ಖರೀದಿಸುವ ಸಾಧ್ಯತೆ ಹೆಚ್ಚಿದೆ.

ಯಾವ ಕಾರಿಗೆ ಎಷ್ಟು ಆಫರ್?

ದೇಶದ ನಂ.1 ವಾಹನ ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ 30,000ದಿಂದ 1.2 ಲಕ್ಷ ರು.ತನಕ ಮುಖ ಬೆಲೆಯ ಮೇಲೆ ಕಡಿತಗೊಳಿಸಿ ಮಾರಾಟಕ್ಕೆ ಮುಂದಾಗಿದೆ. ಅದರಂತೆ ಹುಂಡೈಯ ಟುಸ್ಸಾನ್, ಎಲಾಂಟ್ರಾ, ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರೇಜಾ ಹತ್ತಿರ ಹತ್ತಿರ 2 ಲಕ್ಷ ರೂ. ಡಿಸ್ಕೌಂಟ್ ಆಫರ್ ನೀಡಿದರೆ ಟಯೋಟಾ ಯಾರಿಸ್ ಬೆಲೆ 1.45 ಲಕ್ಷ ರೂ. ಇಳಿಕೆಯಾಗಿದ್ದರೆ ಕೊರೊಲಾ ಆಲ್ಟಿಸ್ 1.45 ಲಕ್ಷ ರೂ. ಇಳಿಕೆಯಾಗಿದೆ. ಮಾರುತಿ ಕಂಪನಿಯ ಅಲ್ಟೋ 800 ಮತ್ತು ಅಲ್ಟೋ ಕೆ10 ಬೆಲೆ 65 ಸಾವಿರ ಇಳಿಕೆಯಾಗಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಹೊಂದಿರುವ ಸ್ವಿಫ್ಟ್ ಬೆಲೆ ಕ್ರಮವಾಗಿ 55,000 ರೂ. ಮತ್ತು 84,000 ರೂ. ಕಡಿಮೆಯಾಗಿದೆ. ಸೆಲೆರಿಯೋ 65,000 ರೂ., 7 ಸೀಟ್ ಸಾಮರ್ಥ್ಯದ ಇಕೋ 50,000 ರೂ., 5 ಸೀಟ್ ಸಾಮರ್ಥ್ಯದ ಇಕೋ ಕಾರಿನ ಬೆಲೆ 40,000 ರೂ. ಇಳಿಕೆಯಾಗಿದೆ.

ಮತ್ತಷ್ಟು ಕಾರಿನ ಬೆಲೆ ಇಳಿಕೆ?

ಇಗ್ನಿಸ್ 50,000 ರೂ., ಪೆಟ್ರೋಲ್ ಇಂಜಿನ್ ಬಲೆನೊ 35,000 ರೂ. ಇಳಿಕೆಯಾಗಿದ್ದರೆ ಡೀಸೆಲ್ ಎಂಜಿನ್ ಬೆಲೆ 55,000 ರೂ. ಕಡಿಮೆಯಾಗಿದೆ. ಸಿಯಾಜ್ 55,000 ರೂ., ಎಸ್ ಕ್ರಾಸ್ ಬೆಲೆ 80,000 ರೂ. ಇಳಿಕೆಯಾಗಿದೆ. ಇದರ ಜೊತೆ ಮಾರುತಿ ಕಂಪನಿಯೂ ಸ್ವಿಫ್ಟ್, ಬ್ರಿಜಾ, ಡಿಸೈರ್, ಬಲೆನೊ, ಎಸ್ ಕ್ರಾಸ್, ಸಿಯಾಜ್ ಕಾರುಗಳಿಗೆ 5 ವರ್ಷದ ವಾರಂಟಿ ಘೋಷಿಸಿದೆ. ಹುಂಡೈ ಕಂಪನಿಯ ಗ್ರ್ಯಾಂಡ್‍ಐ10, ಎಕ್ಸೆಂಟ್ 95,000 ರೂ. ಇಳಿಕೆಯಾಗಿದ್ದರೆ, ಐ20, ಐ20 ಆಕ್ಟೀವ್ ಮತ್ತು ವೆರ್ನಾ ಕಾರುಗಳು ಕ್ರಮವಾಗಿ 45,000 ರೂ., 25,000 ರೂ., 60,000 ರೂ. ಇಳಿಕೆಯಾಗಿದೆ. ಹುಂಡೈ ಕಂಪನಿಯ ಪ್ರಸಿದ್ಧ ಕ್ರೇಟಾ ಕಾರಿಗೆ 50,000, ಸ್ಯಾಂಟ್ರೋ ಕಾರಿಗೆ 40,000 ರೂ. ಡಿಸ್ಕೌಂಟ್ ಆಫರ್ ಪ್ರಕಟಿಸಿದೆ.

ಟಾಟಾ ಕಂಪನಿಯ 2018ರ ಮಾಡೆಲಿನ ಟಿಯಾಗೋ 70,000 ರೂ., ಟಿಗೋರ್ ಕಾರಿನ ಬೆಲೆ 1.70 ಲಕ್ಷ ರೂ. ಇಳಿಕೆಯಾಗಿದೆ. ನೆಕ್ಸಾನ್ ಡೀಸೆಲ್ ಮತ್ತು ಹೆಕ್ಸಾ ಕಾರಿನ ಬೆಲೆ ಕ್ರಮವಾಗಿ 87,500 ರೂ. ಮತ್ತು 1.5 ಲಕ್ಷ ರೂ. ಇಳಿಕೆಯಾಗಿದೆ. 2019ರ ಮಾಡೆಲಿನ ಟಿಯಾಗೋ 45,000, ಟಿಗೋರ್ ಪೆಟ್ರೋಲ್ 67,000, ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 57,500 ರೂ. ಕಡಿಮೆಯಾಗಿದೆ. 2019ರ ಹೆಕ್ಸಾ ಕಾರಿಗೆ 1ಲಕ್ಷ ರೂ. ಇಳಿಕೆಯಾಗಿದ್ದು, ಫೋರ್ಡ್ ಕಂಪನಿ ಅಸ್ಪೈರ್ ಕಾರಿಗೆ 30,000 ರೂ. ಇಳಿಕೆ ಮಾಡಿದ್ದರೆ, ಇಕೋ ಸ್ಪೋರ್ಟ್ ಗೆ 15,000 ರೂ. ಇಳಿಕೆ ಮಾಡಿದೆ. ರೆನಾಲ್ಟ್ ಕ್ವಿಡ್ 40,000 ರೂ., ಕ್ಯಾಪ್ಟರ್ ಪ್ಲಾಟಿನ್ 1 ಲಕ್ಷ ರೂ., ಡೀಸೆಲ್ ಡಸ್ಟರ್ ಬೆಲೆ 1 ಲಕ್ಷ ರೂ. ಇಳಿಕೆಯಾಗಿದೆ. ಹಬ್ಬಗಳು ಬಂದಿರುವ ಬೆನ್ನೆಲೆಯಲ್ಲಿ ಕಾರು ಖರಿಧಿಸುವವರಿಗೆ ಸುವರ್ಣಾವಕಾಶ ಆಗಿದೆ.