ಒತ್ತುವರಿ ಜಾಗದಲ್ಲಿ ಕಟ್ಟಡ ನಿರ್ಮಿಸಿದವರಿಗೆ ಬಿಗ್ ಶಾಕ್; 7,700 ಅನಧಿಕೃತ ಕಟ್ಟಡಗಳಿಗೆ ಫೆಬ್ರವರಿಯೊಳಗೆ ಬೀಗ ಹಾಕುವಂತೆ ಜಿ ಪರಮೇಶ್ವರ ಆದೇಶ..

0
343

ಬೆಂಗಳೂರಿನಲ್ಲಿ ಪಾಲಿಕೆಯ ಜಾಗದ ಒತ್ತುವರಿ ಕುರಿತು ವಿವಾದಗಳು ನಡೆಯುತ್ತಿರುವುದು ಮತ್ತು ಅಂತಹ ಕಟ್ಟಡಗಳಿಗೆ ಬೀಗ ಹಾಕುವ ಸುದ್ದಿ ಹಲವು ದಿನಗಳ ಹಿಂದಿನಿಂದ ಹರಡಿತ್ತು. ಇದಕ್ಕೆ ವಿರೋದಿಸಿದ ಒತ್ತುವರಿ ಕಟ್ಟಡದ ಮಾಲೀಕರು ಪಾಲಿಕೆಯ ವಿರುದ್ದ ಹೋರಾಟಕ್ಕೆ ಇಳಿದಿದ್ದರು ಆದರೆ ಇದ್ಯಾವುದಕ್ಕೂ ಮಣಿಯದ ಸರ್ಕಾರ ಬೆಂಗಳೂರಿನ ಎಲ್ಲ ಪ್ರದೇಶದಲ್ಲಿ ಜಾಲವಾಡಿ ಸುಮಾರು 7, 700 ಕಟ್ಟಡಗಳಿಗೆ ಬೀಗ ಹಾಕುತ್ತಿದೆ.


Also read: 2014 ಎಲೆಕ್ಷನ್-ನಲ್ಲಿ ಮತ ಯಂತ್ರಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ ಸಯ್ಯದ್ ಎಂಬ ವ್ಯಕ್ತಿ: ಇದು ನಿಜವಿರಬಹುದಾ?

ಹೌದು ಬಿಡಿಎ ನಿಯಮಗಳ ಪ್ರಕಾರ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ. ರಸ್ತೆ ವಿಸ್ತೀರ್ಣ, ಕಟ್ಟಡದ ವಿಸ್ತೀರ್ಣ ಹೀಗೆ ಕೆಲವು ನಿಯಮಗಳಿದ್ದು, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದರು. ಈ ಕುರಿತು ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ವಾಣಿಜ್ಯ ಕಟ್ಟಡಗಳನ್ನು ಫೆಬ್ರವರಿಯೊಳಗೆ ಬಂದ್ ಮಾಡುವಂತೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಪಾಲಿಕೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್, ವರ್ತೂರು, ಕಾಡುಗೋಡಿಯಲ್ಲಿ ಇರುವ 82 ವಾಣಿಜ್ಯ ಕಟ್ಟಡಗಳ ಪೈಕಿ 32, ಪುಲಕೇಶಿನಗರ, ಸರ್ವಜ್ಞನಗರ ಪ್ರದೇಶದಲ್ಲಿರುವ 716 ಕಟ್ಟಡಗಳ ಪೈಕಿ 147 ಕಟ್ಟಡಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಒಟ್ಟು 8,439 ಕಟ್ಟಡಗಳಿಗೆ ನೋಟಿಸ್ ನೀಡಿದ್ದು ಅದರಲ್ಲಿ 7700 ಕಟ್ಟಡಗಳನ್ನು ಫೆಬ್ರವರಿ ಒಳಗೆ ಮುಚ್ಚಲಾಗುತ್ತಿದೆ.


Also read: ರಾತ್ರೋರಾತ್ರಿ ಖಾಲಿ ಸೈಟ್-ನಲ್ಲಿ ತಾಯಿ ಭುವನೇಶ್ವರಿಯ ಪುತ್ಥಳಿ ಪ್ರತ್ಯಕ್ಷವಾದ ಕಾರಣ ಕೇಳಿದ್ರೆ ನೀವು “ಹೀಗೂ ಉಂಟೆ” ಅಂತ ಹೇಳ್ತೀರ!!

ಎನ್‌ಜಿಟಿ ಜಾರಿಯಾದರೆ 95 ರಷ್ಟು ಕಟ್ಟಡ ನೆಲಸಮ:

ಎನ್‌ಜಿಟಿ ಆದೇಶ ಜಾರಿಯಾದರೆ ಬೆಂಗಳೂರಿನ ಶೇ.95 ರಷ್ಟು ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಇನ್ನುಮುಂದೆ ಕೆರೆಯ ಜಾಗದಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಕೂಡ ಬೀಗ ಹಾಕಲಾಗುತ್ತದೆ.ಅದರಂತೆ ಪಶ್ಚಿಮ ವಲಯ ಅಧಿಕಾರಿಗಳು ಅನಧಿಕೃತ ವಾಣಿಜ್ಯ ಚಟುವಟಿಕೆಗಳಿಗೆ ಬೀಗ ಹಾಕುವ ಕಾರ್ಯಾಚರಣೆ ಮುಂದುವರಿಸಿದ್ದು, ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಅಂಗಡಿ, ಮಳಿಗೆ, ಉದ್ದಿಮೆ ಸೇರಿದಂತೆ ಒಟ್ಟು 16 ವಾಣಿಜ್ಯ ಚಟುವಟಿಕೆಗಳನ್ನು ಮುಚ್ಚಿಸಿ .70 ಸಾವಿರ ದಂಡ ವಿಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಶ್ಚಿಮ ವಲಯ ಅಧಿಕಾರಿಗಳು, ರಾಜ್‌ಕುಮಾರ್‌ ರಸ್ತೆಯಲ್ಲಿ ಕಟ್ಟಡಗಳ ತಳ ಮಹಡಿಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಇಂಡಿಗೋ ಡಿಜಿಟಲ್‌, ರಾಯಲ್‌ ಎನ್‌ಫೀಲ್ಡ್‌ ಸೇರಿದಂತೆ ಮೂರು ಉದ್ದಿಮೆಗಳಿಗೆ ಬೀಗ ಹಾಕಿದರು.
ಅದೇ ರೀತಿ ನಿಷೇಧಿತ ಪ್ಲಾಸ್ಟಿಕ್‌ ಬಳಸುತ್ತಿದ್ದ ಸಾಗರ್‌ ಫಾಸ್ಟ್‌ಫುಟ್‌ ಹೋಟೆಲ್‌ಗೆ .25 ಸಾವಿರ, ಕೆಫೆ ಕಾಫಿ ಡೇಗೆ .25 ಸಾವಿರ ಮತ್ತು ಪಾದಾಚಾರಿ ಮಾರ್ಗ ಒತ್ತುವರಿ ಮಾಡಿದ್ದ ಹುಂಡೈ ಶೋರೂಂಗೆ .10 ಸಾವಿರ, ವೈಜ್ಞಾನಿಕವಾಗಿ ತ್ಯಾಜ್ಯ ವಿಂಗಡಿಸದ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳದ ಕಾರಣಕ್ಕೆ ಫ್ರೆಶ್‌ ಮೆನು ಎಂಬ ಆನ್‌ಲೈನ್‌ ಫುಡ್‌ ಔಟ್‌ಲೆಟ್‌ಗೆ .10 ಸಾವಿರ ದಂಡ ವಿಧಿಸಿದರು.


Also read: ಪಾಸ್-ಪೋರ್ಟ್ ಇಲ್ಲ ಅಂತ ವಿದೇಶ ಪ್ರವಾಸ ಮಾಡೋಕೆ ಆಗ್ತಿಲ್ಲ ಅಂತ ಯೋಚನೆ ಮಾಡ್ಬೇಡಿ, ಇನ್ಮೇಲಿಂದ ಈ ದೇಶಗಳಿಗೆ ಹೋಗಿಬರಲು ಅಧಾರ್ ಕಾರ್ಡ್ ಸಾಕು!!

ನೆಲಮಹಡಿಯಲ್ಲಿದ್ದ ಕಟ್ಟಡಕ್ಕೆ ಬೀಗ:

ಟೈರಾ ಎನ್ನುವ ಸಂಸ್ಥೆ ನೆಲಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಧಿಕಾರಿಗಳು ಕೇಳಿದಾಗ ಟ್ರೇಡ್ ಲೈಸನ್ಸ್ ಇದೆ ಎಂದು ಸುಳ್ಳು ಹೇಳಿ ಮಾತಿನ ಚಕಮಕಿ ನಡೆಸಿದರು. ಕಡೆಗೆ ಬಾಗಿಲಿನ ಬೀಗ ಕೊಡದೆ ಸತಾಯಿಸಿದರು. ಅಲ್ಲದೆ ಪ್ರಭಾವಿಗಳಿಂದ ಒತ್ತಡ ಹೇರಲು ಮುಂದಾಗಿ ಆರೋಗ್ಯಾಧಿಕಾರಿಗೆ ಡಿಸಿಎಂ ಕಚೇರಿಯಿಂದ ದೂರವಾಣಿ ಕರೆ ಮಾಡಿಸಿದರು. ಇದಕ್ಕೆ ಜಗ್ಗದ ಅಧಿಕಾರಿಗಳು ಟೈರಾ ಹಾಗೂ ಗ್ರೀನ್ ಸಂಸ್ಥೆಯನ್ನು ಜಪ್ತಿ ಮಾಡಿದರು. ಬಳಿಕ ಟೈಂ ಅಂಡ್ ಸ್ಪೇಸ್ ಎಂಜಿನಿಯರ್ ಸಂಸ್ಥೆಯ ಮಾಲೀಕ ಎರಡು ದಿನ ಸಮಯಾವಕಾಶ ಕೇಳಿದಾಗ, ಒಂದು ತಿಂಗಳ ಮೊದಲೇ ನೋಟಿಸ್ ಕೊಟ್ಟಿದ್ದರೂ ಯಾಕೆ ತೆರವು ಮಾಡಿಲ್ಲ ಎಂದು ಬೀಗ ಜಡಿದರು. ಇಷ್ಟೇ ಅಲ್ಲದೆ ಸಂಸ್ಥೆಯ ಮಾಲೀಕರು ಮಾತನಾಡಿ, ವಾಣಿಜ್ಯ ತೆರಿಗೆ ಕಟ್ಟಿದ್ದೇವೆ. ಆಗ ಪಾಲಿಕೆಯವರೇ ತೆಗೆದುಕೊಂಡು ಈಗ ಜಪ್ತಿ ಮಾಡುವುದು ಎಷ್ಟು ಸರಿ ಎಂದು ಅಸಮಾಧಾನ ಹೊರಹಾಕಿದರು.