ಆದಾಯ ತೆರಿಗೆ ಇಲಾಖೆಯಿಂದ ಬಿಗ್ ಶಾಕ್; ಇನ್ಮುಂದೆ 20 ಸಾವಿರದವರೆಗೆ ನಗದು ವ್ಯವಹಾರ ಮಾಡಿದರೆ ಮನೆಗೆ ಐಟಿ ನೋಟಿಸ್..

0
786

ಆದಾಯ ತೆರಿಗೆ ಇಲಾಖೆ ಒಂದಿಲ್ಲದೊಂದು ಕಾನೂನು ಜಾರಿಗೆ ತಂದು ಜನರಿಗೆ ಶಾಕ್ ನೀಡುತ್ತಿದೆ. ನೋಟ್ ಅಮಾನಿಕರಣದ ನಂತರ ಐಟಿ ಇಲಾಖೆ ಇನ್ನು ಚುರುಕ್ಕಾಗಿ ಕೆಲಸ ಮಾಡುತ್ತಿದೆ. ಆದಕಾರಣ ತೆರಿಗೆ ವಂಚನೆ ಮಾಡುವವರಿಗೆ ತಳಮಳ ಶುರುವಾಗಿದೆ. ಈಗ ಹಣಕಾಸು ವ್ಯವಹಾರಕ್ಕೆ ಸಂಬಧಿಸಿದಂತೆ ಮತ್ತೊಂದು ಕಾನೂನು ಜಾರಿಮಾಡಿ ಸುದ್ದಿಯಲ್ಲಿದೆ.


Also read: ಫುಟ್-ಪಾತ್ ನಲ್ಲಿ ಟಿಶರ್ಟ್ ಮಾರುತ್ತಿದ್ದ ವ್ಯಕ್ತಿ ಇಂದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವ್ಯಾಪಾರ ನಡೆಸುತ್ತಿರುವ ಕಥೆ ಕೇಳಿ ನಿಮಗೂ ಸ್ಫೂರ್ತಿ ಬರುತ್ತೆ..

ಏನಿದು ಐಟಿ ಇಲಾಖೆ ನಿಗಾ?

ಕೃಷಿ ಭೂಮಿ ಅಥವಾ ಯಾವುದೇ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಹಣವನ್ನು ಚೆಕ್ ಮೂಲಕ ಅಥವಾ ಆರ್ ಟಿಜಿಎಸ್ ಅಥವಾ ವಿದ್ಯುನ್ಮಾನ ಹಣ ವರ್ಗಾವಣೆ ಸಿಸ್ಟಮ್ ಮೂಲಕವೇ ಸ್ವೀಕರಿಸಬೇಕು. 20 ಸಾವಿರ ರೂ. ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ನಗದಾಗಿ ಸ್ವೀಕರಿಸುವಂತಿಲ್ಲ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ನಿಯಮಗಳಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಆಸ್ತಿ ಖರೀದಿ ವೇಳೆ 20,000 ರೂ. ಮೀರಿದ ನಗದು ವರ್ಗಾವಣೆಯು ಕಾನೂನಿನ ಪ್ರಕಾರ ತಪ್ಪು. ಇಂಥ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವ ದಿಲ್ಲಿಯ ಆದಾಯ ತೆರಿಗೆ(ಐಟಿ) ಇಲಾಖೆಯು 20,000 ರೂ. ನಗದು ವ್ಯವಹಾರ ಮಾಡಿದವರಿಗೆ ನೋಟಿಸ್‌ ನೀಡಲು ಮುಂದಾಗಿದೆ. ಇದೇ ಮಾದರಿಯನ್ನು ದೇಶದ ಇತರ ರಾಜ್ಯಗಳ ಐಟಿ ಇಲಾಖೆಗಳೂ ಅನುಸರಿಸಿದರೆ ಅಚ್ಚರಿಯೇನಿಲ್ಲ ಎಂದು ತಿಳಿಸಿದೆ.


Also read: ಇನ್ಮುಂದೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವಂತಿಲ್ಲ; ಶಿಕ್ಷಣ ಇಲಾಖೆಯಿಂದ ಆದೇಶ..

2018ರ ವರೆಗೂ ತಯಾರಾದ ಪಟ್ಟಿ?

ಆಸ್ತಿ ಖರೀದಿ ವೇಳೆ 20,000 ರೂ. ಅಥವಾ ಅದಕ್ಕೂ ಅಧಿಕ ಮೊತ್ತದ ನಗದು ಮೊತ್ತ ನೀಡಿ ನೋಂದಣಿ ಮಾಡಿಸಿಕೊಂಡವರ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸುತ್ತಿದೆ. 2015ರಿಂದ 2018ರಲ್ಲಿ ನೋಂದಣಿಯಾಗಿರುವ ಆಸ್ತಿಗಳಲ್ಲಿ ಇಂಥ ನಗದು ವ್ಯವಹಾರಗಳ ಬಗೆಗಿನ ಮಾಹಿತಿಯನ್ನು ಐಟಿ ಅಧಿಕಾರಿಗಳು ಪರಾಮರ್ಶಿಸುತ್ತಿದ್ದಾರೆ. ದಿಲ್ಲಿಯ ಎಲ್ಲ 21 ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಗೆ ಅಧಿಕಾರಿಗಳ ತಂಡ ತೆರಳಿದ್ದು, ಮಾಹಿತಿ ಕಲೆ ಹಾಕಿದೆ. ಈಗ ಸಂಬಂಧ ಪಟ್ಟವರಿಗೆ ನೋಟಿಸ್‌ ನೀಡಲು ಸಜ್ಜಾಗಿದೆ,” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Also read: ಬರುವ ಶೈಕ್ಷಣಿಕ ವರ್ಷದಿಂದಲೇ ಉನ್ನತ ವ್ಯಾಸಂಗದಲ್ಲಿ ಶೇಕಡ 10% ಮೀಸಲಾತಿ ಅನ್ವಯವಾಗಲಿದೆ!!

ಚುನಾವಣೆ ಹಿನ್ನಲೆಯಲ್ಲಿ ಈ ಕಾನೂನು?

ಲೋಕಸಭಾ ಚುನಾವಣೆ ಹತ್ತಿರ ಬಂದಂತೆ ಐಟಿ ಇಲಾಖೆ ಈ ಕಾನೂನು ತಂದ್ದಿದೆ ಎನ್ನುವ ಅನುಮಾನವಿದೆ ಏಕೆಂದರೆ ಕರ್ನಾಟಕ ವಿಧಾನಸಭಾ ಚುನಾವಣೆ ಸಮರ ತಾರಕ್ಕೇರಿರುವ ಹೊತ್ತಿನಲ್ಲೇ ರಾಜ್ಯ ಸರ್ಕಾರಕ್ಕೆ ಭರ್ಜರಿ ಏಟು ಕೊಟ್ಟು ಚುನಾವಣಾ ಘೋಷಣೆ ಮುನ್ನ ಮೂರು ತಿಂಗಳ ಅವಧಿಯಲ್ಲಿ ಪ್ರಮುಖ ಇಲಾಖೆಗಳ ಗುತ್ತಿಗೆದಾರರಿಗೆ ಬಿಡುಗಡೆಯಾದ ಅನುದಾನದ ಕುರಿತು ಮಾಹಿತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದ್ದಿದರು ಹಾಗೆಯೇ ವಿಶೇಷವಾಗಿ ಮಹತ್ವದ ಖಾತೆ ಹೊಂದಿದ್ದ 6 ಮಂತ್ರಿಗಳಿಗೆ ಸಂಬಂಧಿಸಿದ ಅನುದಾನದ ವಿವರ ನೀಡಲು ತಿಳಿಸಿದ್ದರು ಇದೆಲ್ಲ ನೋಡಿದರೆ ಲೋಕಸಭಾ ಚುನಾವಣೆಗೆ ಹಣ ಜೋಡಿಸುವವರ ಮೇಲೆ ನಿಗಾ ಇಡಲು ಈ ಕಾನೂನು ಮಾಡಿರಬಹುದು ಅಂತ ಮೂಲಗಳು ತಿಳಿಸಿವೆ.