ಒಳ್ಳೆ ಹುಡುಗ ಪ್ರಥಮ್ ಚುನಾವಣೆಯಲ್ಲಿ ಸ್ಪರ್ದಿಸಿ , ಈ 4 ಜನ ರಾಜಕಾರಣಿಗಳನ್ನು ಸೋಲಿಸುತ್ತಾರಂತೆ..!!

0
597

ಬಿಗ್-ಬಾಸ್ 4 ನೇ ಸೀಸನ್ ವಿಜೇತ ಒಳ್ಳೆ ಹುಡುಗ ಪ್ರಥಮ್ ಪ್ರೇಕ್ಷಕರನ್ನು ರಂಜಿಸುತ್ತಾ, ತಮ್ಮ ಮಾತಿನಿಂದಲೇ ಕನ್ನಡಿಗರ ಮನಗೆದ್ದಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಈಗ ಇದೆ ಪ್ರಥಮ್ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸುತ್ತಾರಂತೆ, ಸ್ಪರ್ದಿಸಲಿಲ್ಲ ಅಂದರೆ 4 ಜನ ರಾಜಕಾರಣಿಗಳನ್ನು ಸೋಲಿಸುತ್ತಾರಂತೆ.

ಹೌದು, ಒಳ್ಳೆ ಹುಡುಗ ಪ್ರಥಮ್ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸುತ್ತಾರಂತೆ, ಸ್ಪರ್ದಿಸಲಿಲ್ಲ ಅಂದರೆ 4 ಜನ ರಾಜಕಾರಣಿಗಳನ್ನು ಸೋಲಿಸುತ್ತಾರಂತೆ, ಯಾರು ಆ ರಾಜಕಾರಣಿಗಳು, ಅವರನ್ನೇ ಯಾಕೆ ಸೋಲಿಸುತ್ತಾರೆ ಪ್ರಥಮ್ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಪ್ರಥಮ್ ಟಾರ್ಗೆಟ್ ಮಾಡಿರುವುದು ಬೇರೆಯಾರನ್ನು ಅಲ್ಲ ಜನಪ್ರಿಯ ಸಚಿವರಾದ ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ, ರಮಾನಾಥ ರೈ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು, ಅವರುಗಳ ವರ್ತನೆ ಮತ್ತು ಅವರುಗಳು ಮಾಡಿದ ಕೆಲಸಗಳೇ ಪ್ರಥಮ್ ಗೆ ಈ ರೀತಿ ಅವರ ವಿರುದ್ಧ ಸ್ಪರ್ದಿಸಲು ಪ್ರೇರೇಪಿಸುತ್ತಿದೆಯಂತೆ.

ಆ ಕಾರಣಗಳು ಇಲ್ಲಿವೆ ನೋಡಿ, ಅಖಂಡ ಹಿಂದೂ ಧರ್ಮವನ್ನು ಹೋಳು ಮಾಡಲು ಎಂ.ಬಿ. ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಹೊರಟಿದ್ದಾರೆ. ಕರಾವಳಿ ಭಾಗದಲ್ಲಿ ಕೋಮುಗಲಭೆಯನ್ನು ತಡೆಯುವುದಕ್ಕೆ ಸಚಿವ ರಮಾನಾಥ ರೈ ವಿಫಲರಾಗಿದ್ದಾರೆ. ಮೂರನೆಯದಾಗಿ ದೇವೇಗೌಡರ ವಿರುದ್ಧ ಜಮೀರ್ ಅಹ್ಮದ್ ಖಾನ್ ಬಹಳ ಕೆಟ್ಟದಾಗಿ ಮಾತಾಡುತ್ತಿದ್ದಾರೆ, ಎಂದು ಪ್ರಥಮ್ ಹೇಳಿದ್ದಾರೆ.

ಈ ಬಾರಿ ಈ ನಾಲ್ಕು ಜನರನ್ನು ಸೋಲಿಸುವುದು ಮಾತ್ರವಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಯದಿದ್ದರು, ಅವರ ಮಗ ಯತೀಂದ್ರ ಪರ ಪ್ರಚಾರ ಮಾಡುತ್ತೇನೆ. ಯತೀಂದ್ರ ಬಹಳ ಮೃದುವಾದ ಮತ್ತು ತುಂಬಾ ಒಳ್ಳೆಯ ವ್ಯಕ್ತಿ. ರಾಜಕೀಯದಲ್ಲಿ ಅಂಥವರನ್ನು ಬಲಪಡಿಸಿಕೊಳ್ಳಬೇಕು, ಹಾಗಾಗಿ ಅವರ ಪರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ ಪ್ರಥಮ್.