ನಿಮ್ಮ ಪ್ರಕಾರ ಬಿಗ್ ಬಾಸ್ ವಿನ್ನರ್ ಯಾರು..?

0
734

ಮೊದಲ ಸೀಸನ್ ನಲ್ಲಿ ವಿಜಯ್ ರಾಘವೇಂದ್ರ, 2 ನೇ ಸೀಸನ್ ನಲ್ಲಿ ಅಕುಲ್ ಬಾಲಾಜಿ, 3 ನೇ ಸೀಸನ್ ನಲ್ಲಿ ಶ್ರುತಿ ವಿಜೇತರಾಗಿದ್ದಾರೆ.

ಕ್ರಮವಾಗಿ ಅರುಣ್ ಸಾಗರ್, ಸೃಜನ್ ಲೋಕೇಶ್ ಹಾಗೂ ಚಂದನ್ ರನ್ನರ್ ಅಪ್ ಆಗಿದ್ದಾರೆ. 4 ನೇ ಸೀಸನ್ ನಲ್ಲಿ ಗೆಲ್ಲುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ.

ಶನಿವಾರ ಬಂತೂಂದ್ರೆ ‘ಬಿಗ್ ಬಾಸ್’ ಮನೆಯಲ್ಲಿ ಟೆನ್ಷನ್ ಶುರುವಾಗುತ್ತೆ. ಯಾಕಂದ್ರೆ, ಸ್ಪರ್ಧಿಗಳು ಮನೆಯಿಂದ ಹೊರ ಹೋಗುವುದೇ ಶನಿವಾರ. ಆದರೆ ಈಗ ‘ಬಿಗ್ ಬಾಸ್” ಮುಕ್ತಾಯವಾಗಲಿದೆ  ‘ಬಿಗ್ ಬಾಸ್”ವಾರದ ಕತೆ ಕಿಚ್ಚನ ಜೊತೆ’ ಯಲ್ಲಿ ‘ಬಿಗ್ ಬಾಸ್’ ಸೀಸನ್ 4 ಫಿನಾಲೆಗೆ ನಡೆದಿರುವ 5 ಮಂದಿಯಲ್ಲಿ ಯಾರು ಗೆಲ್ತಾರೆ ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಮನೆಯಿಂದ ಹೊರಗೆ ಹೋಗಿರುವ ಈಗಿನ ಸೀಸನ್ ಸ್ಪರ್ಧಿಗಳಾದ ದೊಡ್ಡ ಗಣೇಶ್, ಮಸ್ತಾನ್, ಭುವನ್, ಸಂಜನಾ, ಓಂ ಪ್ರಕಾಶ್, ಶೀತಲ್, ಸುಕೃತಾ, ಸಿಂಗರ್ ಚೈತ್ರಾ, ಕಾರುಣ್ಯ ಹಾಗೂ ನಿರಂಜನ್ ಮತ್ತೆ ಮನೆಗೆ ಬಂದಿದ್ದು, ಸದಸ್ಯರ ಖುಷಿಯನ್ನು ಹೆಚ್ಚಿಸಿದೆ.

ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ಕೇಳಿದ ಸದಸ್ಯರು ಪುಳಕಿತರಾಗಿದ್ದಾರೆ. ಇನ್ನು ತಮಗೆ ಬಂದ ಪತ್ರಗಳನ್ನು ಓದಿದ ಸ್ಪರ್ಧಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಸೀಸನ್ 4 ರಲ್ಲಿ ಫಿನಾಲೆಗೆ ಎಂಟ್ರಿ ಕೊಟ್ಟಿರುವ ಮೋಹನ್, ಕೀರ್ತಿ ಕುಮಾರ್, ಮಾಳವಿಕಾ, ರೇಖಾ, ಪ್ರಥಮ್ ಅವರಲ್ಲಿ ಗೆಲ್ಲೋರು ಯಾರು ಎಂಬುದು ಭಾರೀ ಕುತೂಹಲ ಮೂಡಿಸಿದೆ.