ಬಿಗ್ ಬಾಸ್ ಫೈನಲ್ ಫಿನಾಲೆಗೆ ಶಿಲ್ಪಶೆಟ್ಟಿ ಹೆಜ್ಜೆ ಹಾಕಲಿದ್ದಾರೆ

0
593

‘ಬಿಗ್ ಬಾಸ್” ಮುಕ್ತಾಯವಾಗಲಿದೆ  ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆಗಮಿಸಲಿದ್ದಾರೆ.

 ಸೀಸನ್ 4 ರಲ್ಲಿ ಫಿನಾಲೆಗೆ ಎಂಟ್ರಿ ಕೊಟ್ಟಿರುವ ಮೋಹನ್, ಕೀರ್ತಿ ಕುಮಾರ್, ಮಾಳವಿಕಾ, ರೇಖಾ, ಪ್ರಥಮ್ ಅವರಲ್ಲಿ ಗೆಲ್ಲೋರು ಯಾರು ಎಂಬುದು ಭಾರೀ ಕುತೂಹಲ ಮೂಡಿಸಿದೆ.

ನಟ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ನೃತ್ಯವೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಗ್ರಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಈ ಮೂಲಕ ರಂಗು ಹೆಚ್ಚಾಗಲಿದೆ.

ಕನ್ನಡ ಚಿತ್ರರಂಗದೊಂದಿಗೆ ನಂಟು ಹೊಂದಿರುವ ಶಿಲ್ಪಾಶೆಟ್ಟಿ ರವಿಚಂದ್ರನ್ ಜೊತೆ ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಉಪೇಂದ್ರರವರ ಆಟೋ ಶಂಕರ ಚಿತ್ರದಲ್ಲಿಯೂ ನಟಿಸಿ ಗಮನ ಸೆಳೆದಿದ್ದಾರೆ. ಶಿಲ್ಪಾ ಶೆಟ್ಟಿ ಗ್ರಾಂಡ್ ಫಿನಾಲೆಗೆ ಬರುವುದಲ್ಲದೆ ಕಾರ್ಯಕ್ರಮದಲ್ಲಿ ನೃತ್ಯವೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ.

ಬಿಸ್ ಬಾಸ್ ಕನ್ನಡ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೋ ಎರಡು ವಾರಗಳ ಕಾಲ ಮುಂದೂಡಲ್ಪಟ್ಟಿದೆ. ಈ ವಾರಾಂತ್ಯದ ಅಂತಿಮ ಸುತ್ತಿಗೆ 5 ಜನ ಸ್ಪರ್ಧಿಗಳು ಪ್ರವೇಶಿಸಲಿದ್ದಾರೆ.

ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸಿರುವ ಈ ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್ ಯಾರಾಗಲಿದ್ದಾರೆ ಎಂದು ಬಿಗ್ ಬಾಸ್ ಪ್ರಿಯರು ಕಾಯುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಂತಿಮವಾಗಿ 5 ಜನ ಸ್ಫರ್ಧಿಗಳಿದ್ದು ಯಾರ ಮುಡಿಗೆ ಜಯದ ಕಿರೀಟ ಸೇರಲಿದೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.