‘ಬಿಗ್ ಬಾಸ್’ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಎಂಟರ್ ಟೈನ್ ಮೆಂಟ್, ರೋಮ್ಯಾನ್ಸ್, ಡ್ರಾಮಾ, ಆಕ್ಷನ್

0
865

ಬಿಗ್ ಬಾಸ್ ಸೀಸನ್ 4 ರಿಯಾಲಿಟಿ ಶೋ  ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಶೋ 2 ವಾರ ವಿಸ್ತರಣೆಯಾಗುತ್ತಿದ್ದಂತೆ, ಮತ್ತೆ ಮನೆಯೊಳಗೆ ಸದಸ್ಯರು ಆಗಮಿಸಿದ್ದಾರೆ.

ಸೂಪರ್‌ ಸಂಡೇ ವಿತ್‌ ಸುದೀಪ್‌ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಮನೆಗೆ ಸುದೀಪ್‌, ನೀನಾಸಂ ಸತೀಶ್‌ ಹಾಗೂ ಸುನಾಮಿ ಕಿಟ್ಟಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ರು. ಇದೇ ವೇಳೇ ಮನೆಗೆ ಸೀಜನ್‌ ಒಂದರ ನಂತರ ಬಿಗ್‌ಬಾಸ್‌ ಮನೆಗೆ ಇದೇ ಮೊದಲ ಬಾರಿಗೆ ಎಂಟ್ರಿ ಸುದೀಪ್ ಅವರು ಮನೆ ಮಂದಿ ಜೊತೆ ಸ್ವಲ್ಪ ಸಮಯ ಯೋಗ ಕ್ಷೇಮ ವಿಚಾರಿಸಿ. ಹರಟೆ ಹೊಡೆದು, ಕಾಲೆಳೆದು, ತಮಾಷೆ ಮಾಡಿದರು. ಇದೇ ವೇಳೆ ಫೈನಲ್‌ನಲ್ಲಿ 20 ಗಂಟೆ ನಾನು ಕೆಲಸ ಮಾಡಬೇಕಾಗಿದೆ ಎಂದು ಸುದೀಪ್ ಅವರು ಹೇಳಿದ್ರು.

bigg-boss

ಇನ್ನು ಈ ವಾರ ಮನೆಗೆ ಅತಿಥಿಯಾಗಿ ಆಗಮಿಸಿರುವ ಸುನಾಮಿ ಕಿಟ್ಟಿ ಬಿಗ್ ಬಾಸ್ ಮನೆಯಲ್ಲಿ ನೀಡಲಾಗಿದ್ದ ಟಾಸ್ಕ್ನಲ್ಲಿ ಭಾಗವಹಿದ್ರು,  ನಂತರ ಶ್ರುತಿ, ಅಯ್ಯಪ್ಪ, ನೀತು ಆಗಮಿಸಿದ್ದಾರೆ.

ಶೋ 2 ವಾರ ವಿಸ್ತರಣೆಯಾಗುತ್ತಿದ್ದಂತೆ, ಮತ್ತೆ ಮನೆಯೊಳಗೆ ಸದಸ್ಯರು ಆಗಮಿಸಿದ್ದಾರೆ. ಪ್ರಥಮ್, ಮಾಳವಿಕಾ ಸೀಕ್ರೆಟ್ ರೂಂ ಸೇರಿಕೊಂಡಿದ್ದಾರೆ. ಉಳಿದಿದ್ದು, ಮೋಹನ್, ಕೀರ್ತಿ, ಶಾಲಿನಿ, ಭುವನ್ ಹಾಗೂ ರೇಖಾ ಅವರು ಮಾತ್ರ. ಅವರೊಂದಿಗೆ ಸುನಾಮಿ ಕಿಟ್ಟಿ ಸೇರಿದ್ದರು. ಮಂಗಳವಾರದ ಸಂಚಿಕೆಯಲ್ಲಿ ‘ಬಿಗ್ ಬಾಸ್’ ಮನೆಯ ಸದಸ್ಯರಿಗೆ ಚಟುವಟಿಕೆಯೊಂದನ್ನು ನೀಡಲಾಗಿತ್ತು.

ಸದಸ್ಯರು ಗಾರ್ಡನ್ ಏರಿಯಾದಲ್ಲಿದ್ದ ವಿಶೇಷ ಫಲಕದಲ್ಲಿ ಲೈಟ್ ಬಂದ ಕೂಡಲೇ ತಮ್ಮ ಆಯ್ಕೆಯನ್ನು ಒತ್ತಬೇಕಿತ್ತು. ಅದರಂತೆ ಎಂಟರ್ ಟೈನ್ ಮೆಂಟ್, ರೋಮ್ಯಾನ್ಸ್, ಡ್ರಾಮಾ, ಆಕ್ಷನ್ ಸೆಲೆಕ್ಟ್ ಮಾಡಿದ್ದಾರೆ ಸದಸ್ಯರು. ಹೀಗೆ ಆಯ್ಕೆ ಮಾಡುತ್ತಿದ್ದಂತೆ, ಒಂದಿಷ್ಟು ನೃತ್ಯಗಾರರು ಮನೆಯೊಳಗೆ ಪ್ರವೇಶಿಸಿದ್ದಾರೆ.