ಬಿಗ್​​ಬಾಸ್ ಸೀಸನ್​ 7‘ ಆರಂಭಕ್ಕೆ ಕ್ಷಣಗಣನೆ; ಸೀಸನ್ 7 ವಿಶೇಷತೆಗಳೇನು, ಸ್ಪರ್ಧಿಗಳು ಯಾರು? ಇಲ್ಲಿದೆ ನೋಡಿ ಮಾಹಿತಿ.!

0
346

ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಬರುವ, ಹೆಚ್ಚು ವಿಕ್ಷರನ್ನು ಹೊಂದಿರುವ ಶ್ರೀಮಂತ ರಿಯಾಲಿಟಿ ಶೋ BIGG BOSS ಸೀಸನ್ 7 ಇದೇ ಅಕ್ಟೋಬರ್ 13 ರಿಂದ ಪ್ರಾರಂಭವಾಗಲಿದ್ದು ಪ್ರೇಕ್ಷಕರು ಕಾತುರದಿಂದ ಕಾಯಿತ್ತಿದ್ದಾರೆ. ಅದರಂತೆ ಈ ಸಲದ ಬಿಗ್ ಬಾಸ್ ಆವೃತ್ತಿಯಲ್ಲಿ ಎಲ್ಲವೂ ಹೊಸ ತರದಲ್ಲಿದೆ. ಈಗಾಗಲೇ 6 ಸಿಜೆನ್ ಸಕ್ಸಸ್’ಆಗಿ ಮುಗಿಸಿದ ಬಿಗ್ ಬಾಸ್ ಪ್ರತಿಯೊಬ್ಬರ ಮನಗೆದ್ದಿದೆ ಹಾಗೆಯೇ ಪ್ರತಿಯೊಂದು ಆವೃತ್ತಿಯಲ್ಲಿ ಹೊಸ ಹೊಸ ಸೆಲೆಬ್ರಿಟಿಗಳನ್ನು ಪರಿಚಯಿಸುತ್ತಿದೆ.

ಹೌದು ಈ ಸಲದ ಬಿಗ್ ಬಾಸ್ ಶೋ ನಲ್ಲಿ ಯಾವ ಸೆಲೆಬ್ರಿಟಿ ಇರಲಿದ್ದಾರೆ ಮತ್ತು ಹೊಸ ಮುಖಗಳು ಯಾರ್ ಇರಲ್ಲಿದ್ದಾರೆ ಎಂಬ ಕುತೂಹಲ ಮೂಡಿದೇ, ಅದರಂತೆ ಈ ಬಾರಿಯ ಬಿಗ್​ಬಾಸ್​ ರಿಯಾಲಿಟಿ ಪ್ರಾರಂಭಕ್ಕೆ 2 ದಿನಗಳು ಬಾಕಿ ಇದ್ದರು, ವೀಕ್ಷಕರಲ್ಲಿ ಬಿಗ್​ಬಾಸ್​ ಮನೆಯೊಳಕ್ಕೆ ಯಾರೆಲ್ಲಾ ಕಾಲಿಡ ಬಹುದು ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದಿದೆ.

ವಿಶೇಷತೆ ಏನು?

ಅದರಂತೆ ಎಷ್ಟು ಜನ ಸೆಲೆಬ್ರಿಟಿಗಳು? ಈ ಬಾರಿಯ ಮನೆಯಲ್ಲಿನ ವಿಶೇಷತೆಯೇನು? ಎಂಬ ಪ್ರಶ್ನೆಗಳು ಹರಿದಾಡುತ್ತಿರುವುದಂತೂ ನಿಜ. ಇಂತಹ ಪ್ರಶ್ನೆಗಳಿಗೆ ಉತ್ತರ ನೀಡಲು ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಮತ್ತು ಕಿಚ್ಚ ಸುದೀಪ್​ ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ್ದು ಬಿಗ್​ಬಾಸ್​ ಸೀಸನ್​ 7 ಶೋನಲ್ಲಿ 17 ಜನ ಸೆಲೆಬ್ರಿಟಿಗಳು ಮನೆಯೊಳಕ್ಕೆ ಕಾಲಿಡಲಿದ್ದಾರೆ. ವಿಶೇಷವೆಂದರೆ ಅವರೆಲ್ಲರು ಸೆಲೆಬ್ರಿಟಿಗಳೇ ಎಂದು ಸ್ಪಷ್ಟ ಪಡಿಸಿದ್ದಾರೆ. ಅದರ ಜೊತೆಗೆ ಈ ಬಾರಿಯ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಗ್​ಬಾಸ್​ ಓಪನಿಂಗ್ ವೀಕ್ಷಿಸುವ ಅವಕಾಶವನ್ನು ಪ್ರೇಕ್ಷಕರಿಗೆ ಒದಗಿಸಲಿದೆಯಂತೆ. ಅದರಂತೆ ಬೆಂಗಳೂರಿನ 3, ಮೈಸೂರಿನ1, ಉಡುಪಿಯ 1 ಹಾಗೂ ಮಣಿಪಾಲ1 ಮಲ್ಟಿಪ್ಲೆಕ್ಸ್​ನಲ್ಲಿ ಲಾಂಚ್ ಇವೆಂಟ್ ಅನ್ನು ನೋಡಬಹುದಾಗಿದೆ.

ಅದರಂತೆ ಭಾನುವಾರದಿಂದ ಬಿಗ್‍ಬಾಸ್ ಸೀಸನ್ 7 ಶುರುವಾಗಲಿದ್ದು, ಬಿಗ್‍ಹೌಸ್‍ನಲ್ಲಿ ಈ ಬಾರಿ ಏನೆಲ್ಲಾ ನಡೆಯುತ್ತೆ? ಸ್ಪರ್ಧಿಗಳು ಯಾರು? ಎನ್ನುವುದನ್ನು ತಿಳಿಯಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಸೀಸನ್ 7ರಲ್ಲಿ ಕೃಷಿಕರು ಇದ್ದಾರಾ? ಸ್ವಾಮೀಜಿ ಇದ್ದಾರಾ? ಬಿಗ್‍ಹೌಸ್‍ಗೆ ಹೋಗೋ ಹಿರಿತೆರೆ-ಕಿರಿತೆರೆಯ ಕಲಾವಿದರ್ಯಾರು? ಎನ್ನುವ ಸಂಭಾವ್ಯ ಸ್ಪರ್ಧಿಗಳ ಎಕ್ಸ್‌ಕ್ಲೂಸಿವ್ ಲಿಸ್ಟ್ ಇಲ್ಲಿದೆ.

`ಬಿಗ್‍ಬಾಸ್’ ಸಂಭಾವ್ಯ ಸ್ಪರ್ಧಿಗಳ ಪಟ್ಟಿ:

ಈ ಬಾರಿ ದೊಡ್ಡ ತಾರಾಗಣವೇ ಬಿಗ್ ಹೌಸ್‍ನಲ್ಲಿ ಮಿಂಚಲಿದ್ದಾರೆ. ತುಪ್ಪದ ಬೆಡಗಿ ನಟಿ ರಾಗಿಣಿ, ನಟ ಜೈಜಗದೀಶ್, ಹಾಸ್ಯನಟ ಕುರಿ ಪ್ರತಾಪ್, ಹಾಸ್ಯನಟ ರಾಜು ತಾಳಿಕೋಟೆ, ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ, ನಟಿ ದುನಿಯಾ ರಶ್ಮಿ, ಕಿರುತೆರೆ ನಟಿ ದೀಪಿಕಾ ದಾಸ್(ನಾಗಿಣಿ- ಅಮೃತಾ), ಕಿರುತೆರೆ ನಟಿ ಸುಜಾತಾ(ರಾಧಾರಮಣ- ಸಿತಾರಾ), ನಟ ರಾಹುಲ್(ನೀನ್ಯಾರೆ, ಜಿಗರ್‍ಥಂಡಾ ಮೂವಿ), ಗಾಯಕಿ ಶಮಿತಾ ಮಲ್ನಾಡ್, ಗುರುಲಿಂಗ ಸ್ವಾಮಿಜಿ, ನಟಿ ರಂಜಿನಿ ರಾಘವನ್(ಪುಟ್ಟ ಗೌರಿ ಮದುವೆ), ನಟ ಪಂಕಜ್ ಎಸ್.ನಾರಾಯಣ್, ಕಿರುತೆರೆ ನಟಿ ಭೂಮಿ ಶೆಟ್ಟಿ(ಕಿನ್ನರಿ), ನಟ ಕಿರಣ್ ರಾಜ್(ಕಿನ್ನರಿ), ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್(ಕಾಸರಗೋಡು), ನಿರೂಪಕಿ ಚೈತ್ರ ವಾಸುದೇವನ್, ಚಂದನ ಅನಂತಸ್ವಾಮಿ.

ಸದ್ಯ ಬಿಗ್‍ಹೌಸ್‍ಗೆ ಎಂಟ್ರಿಕೊಡಲಿದ್ದಾರೆ ಎನ್ನಲಾಗಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಒಟ್ಟು 18 ಮಂದಿ ಹೆಸರು ಕೇಳಿಬಂದಿದೆ. ಇದರಲ್ಲಿ ಸ್ಯಾಂಡಲ್‍ವುಡ್, ಕಿರುತೆರೆ ನಟ-ನಟಿಯರ ಹೆಸರೇ ಹೆಚ್ಚಾಗಿದೆ. ಇದು ಕೇವಲ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಾಗಿದ್ದು, ಬಿಗ್‍ಹೌಸ್‍ನಲ್ಲಿ ಈ ಬಾರಿ ಗಾಸಿಪ್ಸ್, ಗಲಾಟೆ, ಪ್ರೀತಿ, ಸ್ನೇಹ ಹೇಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Also read: ಮೂರೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 7 ಶುರು; ಈ ಹಿಂದೆ ವಿನ್ನರ್ಸ್ ಆದ 6 ಜನ ಎಲ್ಲಿದ್ದಾರೆ? ಬಿಗ್ ಬಾಸ್ ನಂತರ ಅವರ ಜೀವನದಲ್ಲಿ ಏನೇನ್ ಆಯಿತು??