ಮೂರೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 7 ಶುರು; ಈ ಹಿಂದೆ ವಿನ್ನರ್ಸ್ ಆದ 6 ಜನ ಎಲ್ಲಿದ್ದಾರೆ? ಬಿಗ್ ಬಾಸ್ ನಂತರ ಅವರ ಜೀವನದಲ್ಲಿ ಏನೇನ್ ಆಯಿತು??

0
374

ಕನ್ನಡ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಅತೀ ಹೆಚ್ಚಿನ ಹೆಸರು ಮಾಡಿದ್ದು, ಈಗಾಗಲೇ ಕಿಚ್ಚ ಸುದೀಪ್ ಅಭಿನಯದ ಬಿಗ್ ಬಾಸ್ 7 ಪ್ರೊಮೋಗಳನ್ನು ಬಿಡುಗಡೆ ಮಾಡಲಾಗಿದ್ದು, ಅಕ್ಟೋಬರ್ 13 ರಿಂದ ರಿಯಾಲಿಟಿ ಶೋ ಪ್ರಾರಂಭವಾಗಲಿದೆ. ಇನ್ನು ಕನ್ನಡದಲ್ಲಿ ಈ ಬಾರಿ ಯಾರೆಲ್ಲಾ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆಂಬ ಕುತೂಹಲ ಮಿನಿ ಸ್ಕ್ರೀನ್ ಪ್ರೇಕ್ಷಕರಲ್ಲಿದ್ದು, ಈಗಾಗಲೇ 15 ಮಂದಿಯ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾದ್ರೆ ಈ ಬಾರಿ ಯಾರು ಗೆಲ್ಲಬಹುದು ಎನ್ನುವ ಚರ್ಚೆಗಳು ನಡೆಯುತ್ತಿದ್ದು, ಈಗಾಗಲೇ ಗೆದ್ದಿರುವ 6 ಮಂದಿ ವಿನ್ನರ್ಸ್ ಈಗ ಎಲ್ಲಿ ಇದ್ದಾರೆ ಏನ್ ಮಾಡುತ್ತಿದ್ದಾರೆ. ಎನ್ನುವ ಕೂಡ ಒಂದು ಕುತೂಹಲಕಾರಿ.

ಹಾಗಾದ್ರೆ 6 ಬಿಗ್ ಬಾಸ್ ವಿನ್ನರ್ಸ್ ಏನ್ಮಾಡ್ತಿದ್ದಾರೆ ಇಲ್ಲಿದೆ ನೋಡಿ ಮಾಹಿತಿ.

1. ವಿಜಯ್ ರಾಘವೇಂದ್ರ

ಮೊದಲ ಬಿಗ್ ಬಾಸ್ ಶೋ ಅಂದರೆ 2013ರಲ್ಲಿ ವಿಜಯ್ ರಾಘವೇಂದ್ರ ವಿಜೇತರಾಗಿದ್ದರು, ಅದರಂತೆ ಅರುಣ್ ಸಾಗರ್ ರನ್ನರ್ ಅಪ್ ಆಗಿದ್ದರು. ಬಿಗ್ ಬಾಸ್-ಕ್ಕಿಂತ ಮೊದಲು ವಿಜಯ್ ರಾಘವೇಂದ್ರ ಸಿನಿರಂಗದಲ್ಲಿ ಅಷ್ಟೊಂದು ಯಶಸ್ವಿಯಾಗಿರಲಿಲ್ಲ ಅದರಂತೆ ಅವರಿಗೆ ಸಿನಿಮಾ ಆಫರ್ ಕೂಡ ಇರಲಿಲ್ಲ, ಬಿಗ್ ಬಾಸ್ ಗೆದ್ದ ಬಳಿಕ ಅವರ ಜೀವನದಲ್ಲಿ ಬೇರೆ ಗಾಳಿಯೇ ಬಿಸಿ. 2016ರಲ್ಲಿ ಡ್ರಾಮ ಜ್ಯೂನಿಯರ್ ರಿಯಾಲಿಟಿ ಶೋನ ಜಡ್ಜ್ ಆಗುವ ಅವಕಾಶ ಬಂದಿತು, ಈಗ ಡ್ರಾಮ ಜ್ಯೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಂತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

2. ನಿರೂಪಕ ಅಕುಲ್ ಬಾಲಾಜಿ

ಬಿಗ್ ಬಾಸ್ ಎರಡನೆ ಸೀಸನ್ ವಿನ್ನರ್ ಆಗಿ ನಿರೂಪಕ ಅಕುಲ್ ಬಾಲಾಜಿ ಹೊರಹೊಮ್ಮಿದ್ದರು. 2014ರಲ್ಲಿ ನಡೆದ ಬಿಗ್ ಬಾಸ್ ಸೀಸನ್-2ರಲ್ಲಿ ಸೃಜನ್ ಲೋಕೇಶ್ ರನ್ನರ್ ಅಪ್ ಆಗಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲು ಅಕುಲ್ ರಿಯಾಲಿಟಿ ಶೋ ನಿರೂಪಣೆಯ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು. ಬಿಗ್ ಬಾಸ್ ವಿನ್ನರ್ ಪಟ್ಟ ಗೆದ್ದ ನಂತರವು ಅಕುಲ್ ನಿರೂಪಣೆ ವೃತ್ತಿ ಮತ್ತಷ್ಟು ಜೋರಾಗಿದೆ.

3. ನಟಿ ಶೃತಿ

ಕನ್ನಡ ಸಿನಿಮಾದಲ್ಲಿ ಹಲವು ಪಾತ್ರಗಳ ಮೂಲಕ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಹಿರಿಯ ನಟಿ ಶ್ರುತಿ ಬಿಗ್ ಬಾಸ್ 3ನೇ ಸೀಸನ್ ವಿನ್ನರ್ ಆಗಿದ್ದರು ಅದರಂತೆ ಚಂದನ್ ರನ್ನರ್ ಅಪ್ ಆಗಿದ್ದರು, ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಶ್ರುತಿ ನಾಲ್ಕು ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ ಶ್ರುತಿ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶನದ ಮೋಹನದಾಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

4. ಯುವ ನಟ ಪ್ರಥಮ್

ಖಂಡಿಸ್ತೀನಿ ಎನ್ನುತ್ತಲೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಪ್ರಥಮ್, ಬಿಗ್ ಬಾಸ್ ಮನೆಗೆ ಬಂದು ಕರ್ನಾಟಕ ಜನರಿಗೆ ಪರಿಚಯವಾದರು. ಅದರಂತೆ ಜನರಿಂದ ಅತೀ ಹೆಚ್ಚು ಓಟು ಪಡೆದು ಸೀಸನ್-4 ರಲ್ಲಿ ವಿನ್ನರ್ ಆದರು ಬಿಗ್ ಮನೆಯಿಂದ ಹೊರ ಬಂದ ನಂತರ ನಾಯಕನಾಗಿಯೂ ಮಿಂಚಿದ್ದಾರೆ. ಎಂ ಎಲ್ ಎ, ದೇವರಂತ ಮನುಷ್ಯ ಸಿನಿಮಾಗಳು ರಿಲೀಸ್ ಆಗಿವೆ. ಸದ್ಯ ನಟಭಯಂಕರ ಚಿತ್ರದಲ್ಲಿ ನಟಿಸುತ್ತಿದ್ದಾರೆ.

5. ರಾಪ್ ಚಂದನ್ ಶೆಟ್ಟಿ

ರ್ಯಾಪರ್ ಆಗಿದ್ದ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಮತ್ತಷ್ಟು ಖ್ಯಾತಿಗಳಿಸಿದ್ರು. ಬಿಗ್ ಮನೆಯಲ್ಲಿ ಹಾಡುಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಚಂದನ್ ಸದ್ಯ ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆ ತಾನೇ ದಸರಾ ವೇದಿಕೆಯಲ್ಲಿ ಬಿಗ್ ಮನೆಯಲ್ಲಿ ಕಾಣಿಸಿಕೊಂಡಿದ್ದ ಸಹ ಸ್ಪರ್ಧಿ ನಿವೇದಿತಾ ಪ್ರಪೋಸ್ ಮಾಡಿ ವಿವಾದಕ್ಕೆ ಗುರಿಯಾಗಿದ್ದು, ಸಧ್ಯ ಮದುವೆ ತಯಾರಿಯಲ್ಲಿದ್ದಾರೆ.

6. ಕಾಮನ್ ಮ್ಯಾನ್ ಆಗಿ ವಿನ್ನರ್ ಆದ ಶಶಿ

ಕಳೆದ ಬಾರಿಯ ಬಿಗ್ ಬಾಸ್ ಅಂದ್ರೆ ಸೀಸನ್ 6ರ ವಿನ್ನರ್ ಶಶಿ ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಶೋದಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಕಾಮನ್ ಮ್ಯಾನ್ ಒಬ್ಬರು ಬಿಗ್ ಬಾಸ್ ವಿನ್ನರ್ ಪಟ್ಟ ಗೆದ್ದಿರುವುದು ಮೊದಲು. ರೈತನಾಗಿರುವ ಶಶಿ ಬಿಗ್ ಮನೆಯಿಂದ ಗೆದ್ದು ಬಂದ ನಂತರವು ಕೃಷಿಯನ್ನು ಮುಂದುವರೆಸಿದ್ದಾರೆ.