ಮೊದಲನೇ ದಿನವೇ ಬಿಗ್ ಬಾಸ್ ಮನೆಯಿಂದ ಹೊರಬಂದ ರವಿ ಬೆಳಗೆರೆ; ಕಾರಣವೇನು ಗೊತ್ತಾ??

0
1221

ನಿನ್ನೆ ತಾನೇ ಕನ್ನಡ ‘ಬಿಗ್​ ಬಾಸ್​’ ಸೀಸನ್​ 7 ಆರಂಭಗೊಂಡಿದೆ. 18 ಅಭ್ಯರ್ಥಿಗಳು ಮನೆಗೆ ಸಾರಿದ್ದಾರೆ. ಅದರಂತೆ ಈ ಭಾರಿ ಬಿಗ್ ಬಾಸ್ ಮನೆಯಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದು ಸೀಸನ್​ 6 ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿರಲಿಲ್ಲ ಅದಕ್ಕಾಗಿ ಈ ಬಾರಿ ಸೆಲೆಬ್ರೆಟಿಗಳಿಗೆ ಚಾನೆಲ್​ನವರು ಆದ್ಯತೆ ನೀಡಿದ್ದರು. ಅದರಲ್ಲಿ ಮೂರನೇ ಸ್ಪರ್ಧಿಯಾಗಿ ಪತ್ರಕರ್ತ ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಸೇರಿದ್ದು ಕೂಡ ಭಾರಿ ಕುತೂಹಲ ಮೂಡಿಸಿ ಆದರೆ ಒಂದೇ ದಿನದಲ್ಲಿ ರವಿ ಬೆಳಗೆರೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಹೌದು ಅದ್ದೊರಿಯಾಗಿ ಪ್ರಾರಂಭವಾದ ಕನ್ನಡ ಬಿಗ್ ಬಾಸ್ ನಿರಾಸೆ ಮೂಡಿಸಿದ್ದು, ಪತ್ರಕರ್ತ ರವಿ ಬೆಳಗೆರೆ ಬಿಗ್‌ ಬಾಸ್ ಮನೆಯಿಂದ ಮೊದಲ ದಿನವೇ ಹೊರಬಂದಿದ್ದಾರೆ. ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ರವಿ ಬೆಳಗೆರೆ ಹೊರ ಬಂದಿರುವುದು ನಿಜವೆಂದು ಅವರ ಮಗಳೇ ತಿಳಿಸಿದ್ದಾರೆ ಎನ್ನಲಾಗಿದೆ. ಆದರಂತೆ ರವಿ ಬೆಳಗೆರೆ ಸೋಮವಾರ ಪದ್ಮನಾಭ ನಗರದಲ್ಲಿರುವ ‘ಹಾಯ್ ಬೆಂಗಳೂರು!’ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ಏಕೆಂದರೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರು ರಿಯಾಲಿಟಿ ಶೋ ಬಿಗ್‌ ಬಾಸ್‌ನಿಂದ ಅನುಮತಿ ಪಡೆದು ಹೊರ ಬಂದಿದ್ದಾರೆ. ಈ ವಿಚಾರ ಇಂದು ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ತಿಳಿಸಬಹುದು ಎನ್ನಲಾಗಿದೆ.

ಬಿಗ್ ಬಾಸ್ ಕುರಿತು ಪುಸಕ್ತವನ್ನು ಕೂಡ ಬೇರೆಯುತ್ತಾರೋ ಎನ್ನುವ ಚರ್ಚೆಗಳ ನಡುವೆ ಮೂರನೇ ಸ್ಪರ್ಧಿಯಾಗಿ ಬೆಳಗೆರೆ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದರು. ಮನೆಯ ಒಳಗೆ ಪ್ರವೇಶಿಸಿದ್ದ ಬೆಳಗೆರೆ ನಂತರ ಕಾಣೆಯಾಗಿದ್ದರು. ಭಾನುವಾರದ ಎಪಿಸೋಡಿನಲ್ಲಿ ಆರಂಭದಲ್ಲಿ ಕಾಣಿಸಿಕೊಂಡು ನಂತರ ನಾಪತ್ತೆ ಆದ ಅವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ರವಿ ಬೆಳಗೆರೆ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಹೊರಬಂದಿದ್ದಾರೆ ಎಂಬ ಮಾಹಿತಿ ನಿಜವಾಗಿಸಿದೆ. ಈ ಕುರಿತು ಬಿಗ್‌ ಬಾಸ್ ಕನ್ನಡ ಶೋನ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್‌ ಅವರನ್ನು ಸಂಪರ್ಕಿಸಿದಾಗ, “ಸ್ವಲ್ಪ ಸಮಯ ಕೊಡಿ, ಸರಿಯಾದ ಮಾಹಿತಿ ತಿಳಿಸಲು ಎಂದು ಮಾಧ್ಯಮದವರಿಗೆ ತಿಳಿಸಿ
ಬೆಳಗೆರೆ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಅವರು ಅಕಸ್ಮಾತ್ ವಾಪಾಸ್ ಹೋಗ್ತಾರೆ ಅಂದ್ರೆ ಈಗಲೇ ಹೊರಗೆ ಹೋದ್ರು ಅನ್ನೋದು ತಪ್ಪಾಗುತ್ತೆ ಅಲ್ಲವಾ?,” ಎಂದು ಹೇಳಿದ್ದಾರೆ. ಈ ಕುರಿತು ರವಿ ಬೆಳಗೆರೆ ಹೊರಬಿದ್ದಿರುವ ಮಾಹಿತಿಯನ್ನು ಪುತ್ರಿ ಭಾವನ ಬೆಳಗೆರೆ ಕೂಡ ಖಚಿತಪಡಿಸಿದ್ದಾರೆ. “ಬಿಗ್‌ ಬಾಸ್ ಮನೆಯಿಂದ ಅನಾರೋಗ್ಯದ ಕಾರಣಕ್ಕೆ ರವಿ ಬೆಳಗೆರೆ ಹೊರಬಂದಿದ್ದಾರೆ. ಲೋ ಬಿಪಿ ಹಿನ್ನೆಲೆಯಲ್ಲಿ ಅವರು ಮನೆಯೊಳಗೆ ಕುಸಿದು ಬಿದ್ದರು. ಹಾಗಂತ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಏನಾಗಿಲ್ಲ. ಕೊನೆಗೆ ಬಿಗ್ ಬಾಸ್ ಅನುಮತಿಯಲ್ಲಿ ಹೊರಬಂದಿದ್ದಾರೆ ಭಾವನಾ ಬೆಳಗೆರೆ ಪ್ರತಿಕ್ರಿಯೆ ನೀಡಿದ್ದಾರೆ.

ವಾಪಸ್ ಬರ್ತಾರಾ ರವಿ ಬೆಳಗೆರೆ?

ಶೋ ಆರಂಭದಲ್ಲಿಯೇ ಮನೆಯಿಂದ ಹೊರಬಿದ್ದಿರುವ ರವಿ ಬೆಳಗೆರೆ ಅವರನ್ನು ಮರಳಿ ಕರೆತರುವ ಪ್ರಯತ್ನವೊಂದು ಜಾರಿಯಲ್ಲಿದೆ. ಒಂದು ವೇಳೆ ವೈದ್ಯರು ಅನುಮತಿ ನೀಡಿದರೆ, ಬೆಳಗೆರೆ ಕೂಡ ಮಾನಸಿಕವಾಗಿ ಸಿದ್ಧರಾದರೆ ಬಿಗ್‌ ಬಾಸ್‌ ಮನೆಗೆ ಮತ್ತೆ ಬರಬಹುದು. ಈ ಸೀಸನ್‌-ನಲ್ಲಿ ಆರಂಭದಲ್ಲಿಯೇ ಹೀಗೊಂದು ಬದಲಾವಣೆ ಆಗಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಎಲ್ಲ ವಿಚಾರ ಕುರಿತು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

Also read: ಮೂರೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 7 ಶುರು; ಈ ಹಿಂದೆ ವಿನ್ನರ್ಸ್ ಆದ 6 ಜನ ಎಲ್ಲಿದ್ದಾರೆ? ಬಿಗ್ ಬಾಸ್ ನಂತರ ಅವರ ಜೀವನದಲ್ಲಿ ಏನೇನ್ ಆಯಿತು??