BIGG BOSS ಸೀಸನ್ 6 ರ ಸಂಭಾವ್ಯ ಪಟ್ಟಿ ಹೊರಬಿದಿದ್ದು; ಬಿಗ್ ಬಾಸ್ ಮನೆಗೆ ಪ್ರವೇಶಿಸುವ ನಟ, ನಟಿ, ಕಿರುತೆರೆ ಕಲಾವಿದರ ಮಾಹಿತಿ ಇಲ್ಲಿದೆ ನೋಡಿ..

0
651

ಕನ್ನಡದಲ್ಲಿ ಸಿನಿಮಾ, ಸಿರಿಯಲ್ಸ್’ ಗಿಂತ ರಿಯಾಲಿಟಿ ಶೋಗಳ ಹವಾನೆ ಜಾಸ್ತಿಯಾಗೆದೆ ಅದರಲ್ಲಿ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಬರುವ, ಹೆಚ್ಚು ವಿಕ್ಷರನ್ನು ಹೊಂದಿರುವ ಶ್ರೀಮಂತ ರಿಯಾಲಿಟಿ ಶೋ BIGG BOSS ಸಿಜೆನ್ 6 ಇದೇ ಭಾನುವಾರದಿಂದ ಪ್ರಾರಂಭವಾಗಲಿದ್ದು ಕರ್ನಾಟಕ ಜನ ಕಾತುರದಿಂದ ಕಾಯಿತ್ತಿದ್ದಾರೆ. ಇದು ಒಂದೆಡೆಯಾದರೆ ಈ ಸಲದ ಬಿಗ್ ಬಾಸ್ ಆವೃತ್ತಿಯಲ್ಲಿ ಎಲ್ಲವೂ ಹೊಸ ತರದಲ್ಲಿದೆ. ಈಗಾಗಲೇ 5 ಸಿಜೆನ್ ಸಕ್ಸಸ್’ಆಗಿ ಮುಗಿಸಿದ ಬಿಗ್ ಬಾಸ್ ಪ್ರತಿಯೊಬ್ಬರ ಮನಗೆದ್ದಿದೆ ಹಾಗೆಯೇ ಪ್ರತಿಯೊಂದು ಆವೃತ್ತಿಯಲ್ಲಿ ಹೊಸ ಹೊಸ ಸೆಲೆಬ್ರಿಟಿಗಳನ್ನು ಪರಿಚಯಿಸುತ್ತಿದೆ.

ಈ ಸಲದ ಬಿಗ್ ಬಾಸ್ ಶೋ ನಲ್ಲಿ ಯಾವ ಸೆಲೆಬ್ರಿಟಿ ಇರಲಿದ್ದಾರೆ ಮತ್ತು ಹೊಸ ಮುಖಗಳು ಯಾರ್ ಇರಲ್ಲಿದ್ದಾರೆ ಎಂಬ ಕುತೂಹಲ ಮೂಡಿದೇ, ಈಗಾಗಲೇ ಬಿಗ್ ಬಾಸ್ ಗೆ ಬರಲಿರುವ ಸೆಲೆಬ್ರಿಟಿ ಮತ್ತು ಜನಸಾಮಾನ್ಯರ ಬಿಗ್ ಸಂಭಾವ್ಯ ಪಟ್ಟಿಯಲ್ಲಿ ಸಿನಿಮಾ ಕ್ಷೇತ್ರದಿಂದ ಇಬ್ಬರು ಗ್ಲ್ಯಾಮರಸ್ ನಟಿಯರ ಹೆಸರು ಕೇಳಿಬರುತ್ತಿದ್ದು, ನಟಿ ಶುಭಾ ಪುಂಜಾ, ನಟಿ ಸುಮನ್ ರಂಗನಾಥನ್ ನಟ ಅನಿರುದ್ಧ್ ಮತ್ತು ಕಿರಿಕ್ ಪಾರ್ಟಿಯ ಚಂದನ್ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ. ಹಾಗೆಯೇ ಈ ಬಾರಿ 18 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ. ಈ ಬಾರಿ ಸಂಭಾವ್ಯ ಪಟ್ಟಿಯಲ್ಲಿ ಹೆಚ್ಚಾಗಿ ಕಿರುತೆರೆ ಕಲಾವಿದರೇ ಕಾಣಿಸಿಕೊಳ್ಳುತ್ತಿದ್ದಾರೆ. ಕುರಿ ಪ್ರತಾಪ್ , ಶಿವರಾಜ್ ಕೆ.ಆರ್ ಪೇಟೆ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಕವಿತಾ, ಪುಟ್ಟಗೌರಿ ಸೀರಿಯಲ್ ಖ್ಯಾತಿಯ ರಂಜನಿ ಜೊತೆಗೆ ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಹೆಸರು ಕೇಳಿಬರುತ್ತಿದೆ.

ಕಳೆದ ಸೀಸನ್ ರೀತಿಯಲ್ಲಿಯೇ ಈ ಬಾರಿಯೂ ಗಣ್ಯರು ಮತ್ತು ಶ್ರೀಸಾಮನ್ಯರ ಕೊಲಾಬರೇಷನ್ ಇರಲಿದು ಮನರಂಜನೆ ಆಧಾರದ ಮೇಲೆ ಬೇರೆ ಬೇರೆ ವಲಯಗಳಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಸಿನಿಮಾ, ಕಿರುತೆರೆ, ಸಂಗೀತ, ಮಾಧ್ಯಮ, ಶ್ರೀಸಾಮಾನ್ಯ ಮತ್ತು ವಿವಾದದಿಂದ ಹೆಸರು ಮಾಡಿದ್ದ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಸಂಗೀತಗಾರ ನವೀನ್ ಸಜ್ಜು, ಚನ್ನಪ್ಪ ಮತ್ತು ತುಳಿಸಿ ಪ್ರಸಾದ್ ಹೋಗುವ ಸಾಧ್ಯತೆ ಇದೆ. ಈ ಹಿಂದೆ ಕೇಳಿಬರುತ್ತಿರುವ ಗಾಳಿ ಸುದ್ದಿಯಂತೆ. ಈ ಬಾರಿ ಸೆಲೆಬ್ರಿಟಿಗಳು ಇರುವುದೇ ಇಲ್ಲ ಎಂದೇನಿಲ್ಲ. ಒಟ್ಟು ಹದಿನೆಂಟು ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಇರಲಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ಸೆಮಿ ಸೆಲೆಬ್ರಿಟಿಗಳು. ವಿಶ್ವಾದ್ಯಂತ ಈ ಶೋ ಸೆಲೆಬ್ರಿಟಿಗಳಿಂದ ಆರಂಭವಾಗಿ ಜನಸಾಮಾನ್ಯರ ಶೋ ಆಗುತ್ತಾ ನಡೆದಿದೆ. ಕನ್ನಡದಲ್ಲಿಯೂ ಜನಸಾಮಾನ್ಯರು ಸೆಲೆಬ್ರಿಟಿಗಳಾಗುವ ಹಂತಕ್ಕೆ ‘ಬಿಗ್ ಬಾಸ್’ ಬಂದು ಮುಟ್ಟಿದೆ. ಜನಮೆಚ್ಚುಗೆ ಪಡೆದಿದೆ.

ಈ ಸಂಚಿಕೆಯ ಕುರಿತು ಬಿಗ್ ಬಾಸ್ ಟಿಮ್ ಅಭಿಪ್ರಾಯ:

ಬಿಗ್ ಬಾಸ್ ಕಾರ್ಯಕ್ರಮಗಳನ್ನು ರೂಪಿಸುವಾಗ ನಮ್ಮ ವೀಕ್ಷಕರ ಬೇಕು ಬೇಡ ಮತ್ತು ಅವರ ಆಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡಿರುತ್ತೇವೆ. ಕೇವಲ ಮೂರೇ ವರ್ಷಗಳಲ್ಲಿ ಕಲರ್ಸ್ ಸೂಪರ್ ಚಾನೆಲ್ ರೇಟಿಂಗ್ ನಲ್ಲಾಗಲಿ, ಕಾರ್ಯಕ್ರಮ ವೈವಿಧ್ಯದಲ್ಲಾಗಲಿ ಭಾರೀ ಎತ್ತರಕ್ಕೆ ಏರಿದೆ. ‘ಬಿಗ್ ಬಾಸ್’ ಯಾವ ರೀತಿಯ ಶೋ ಎಂದರೆ ಕಾರ್ಯಕ್ರಮ ನಡೆಯುವ ಅಷ್ಟೂ ದಿನ ಜನರನ್ನು ಟೆಲಿವಿಷನ್ ಗೆ ಅಂಟಿ ಕೂರುವಂತೆ ಮಾಡುವಂಥದ್ದು” ಎನ್ನುತ್ತಾರೆ ವಯಾಕಾಮ್ 18ನ ರೀಜನಲ್ ಚಾನೆಲ್‍ಗಳ ಹೆಡ್ ರವೀಶ್ ಕುಮಾರ್.
ಎಂದಿನಂತೆ ಕಿಚ್ಚ ಸುದೀಪ್ ನಿರುಪಣೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮೂಡಿ ಬರಲಿದೆ. ಹೊಸದಾಗಿ ನಿರ್ಮಾಣವಾದ ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ಒಟ್ಟು 18 ಸ್ಪರ್ಧಿಗಳು ತುದಿಕಾಲಲ್ಲಿ ಕುಳಿತಿದ್ದಾರೆ. ಗೆದ್ದ ಸ್ಪರ್ಧಿಗೆ 50 ಲಕ್ಷ ಬಹುಮಾನ ಸಿಗಲಿದೆ.