ಬಿಗ್ ಬಾಸ್ ಗೆದ್ದ ಮೇಲೆ ಚಂದನ್ ಶೆಟ್ಟಿಗೆ ಎಲ್ಲಾ ಕಡೆಯಿಂದ ಭಾರಿ ಆಫರ್-ಗಳು ಬರುತ್ತಿವೆ, ಈಗ ದರ್ಶನ್-ರಿಂದ ಬಂದ ಆಫರ್ ಏನು ಗೊತ್ತಾ?

0
777
bigg boss
bigg boss

ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿ ಇದೀಗ ಅದೃಷ್ಟದ ಹಾದಿಯಲ್ಲಿದ್ದಾರೆ. ಬಿಗ್‍ಬಾಸ್ ಸೀಸನ್ ಐದರಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿ ಗೆದ್ದು, ದೊಡ್ಡ ಮೊತ್ತದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರ ಮುಂದಿನ ಚಿತ್ರಕ್ಕೆ ಮ್ಯೂಸಿಕ್ ಮಾಡುವ ಅವಕಾಶ ಸಿಕ್ಕಿದೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ.

Bigg Boss

ಬಿಗ್‍ಬಾಸ್ ವಿನ್ ಆದನಂತರ ಅವರ ಅಮ್ಮನಿಂದ, ಗುರುವಿನಿಂದ ಹಾಗೂ ಕಿಚ್ಚ ಸುದೀಪ್ ಅವರಿಂದಲೂ ಉಡುಗೊರೆ ಸಿಕ್ಕಿದಾಯಿತು. ಇದರ ಬೆನ್ನಲ್ಲೇ `ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದಾಯಿತು. ಇದೀಗ ಬಾಕ್ಸ್ ಆಫೀಸ್ ಸುಲ್ತಾನ್ ಕಡೆಯಿಂದನೂ ಆಫರ್ ಸಿಕ್ಕಿದೆ.

ದರ್ಶನ್ ಅವರ 52ನೇ ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಬಗ್ಗೆ ದರ್ಶನ್ ಏನೂ ಹೇಳಿಲ್ಲ. ಮತ್ತು ಚಂದನ್ ಶೆಟ್ಟಿ ಕೂಡ `ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಚಾರದ ಬಗ್ಗೆ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಎಲ್ಲೂ ನೀಡಿಲ್ಲಾ.

ಚಂದನ್ ಶೆಟ್ಟಿ `ಸೀಜರ್’ ಹಾಗೂ `ಗಾಂಚಲಿ’ ಚಿತ್ರದಲ್ಲಿ ಸಹ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ವರದನಾಯಕ, ಚಕ್ರವ್ಯೂಹ ಹಾಗೂ ಭಜರಂಗಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಚಿತ್ರಕ್ಕೆ ಸಾಹಿತ್ಯ ಬರೆದು, ಹಾಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಟಕಿಲಾ ಹಾಡು ಯೂಟ್ಯೂಬ್ ನಲ್ಲಿ ಹೆಚ್ಚು ಜನಪ್ರಿಯವಾಗಿತ್ತು.