ಸನ್ನಿಧಿ ಮತ್ತು ಚಂದನ್‌ ರವರ ಎಂಗೇಜ್‌ಮೆಂಟ್‌ ಸುದ್ದಿಗೆ ಬ್ರೇಕ್ ಹಾಕಿದ ನಟಿ ಸನ್ನಿಧಿ..!!

0
958

ಅಗ್ನಿಸಾಕ್ಷಿ ಧಾರವಾಹಿಯ ನಟಿ ವೈಷ್ಣವಿ ಗೌಡ (ಸನ್ನಿಧಿ) ಮತ್ತು ಬಿಗ್‌ಬಾಸ್‌ ಸೀಸನ್‌ 5ರ ವಿನ್ನರ್‌ ಚಂದನ್ ಶೆಟ್ಟಿ ಎಂಗೇಜ್‌‌ಮೆಂಟ್‌ ಮಾಡಿಕೊಳ್ಳಲಿದ್ದಾರೆ ಅನ್ನೋ ಸುದ್ದಿಯೊಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾನಲ್ಲಿ ಭಾರಿ ಹರಿದಾಡುತ್ತಿತ್ತು. ”ಚಂದನ್ ಶೆಟ್ಟಿ ಜೊತೆ ಮದುವೆ ಆಗುತ್ತಿದ್ದೇನೆ” ಎಂದು ವೈಷ್ಣವಿ ಗೌಡ (ಸನ್ನಿಧಿ) ತಮ್ಮ ಫೇಸ್‌ಬುಕ್ ಪ್ರೋಫೈಲ್ ನಲ್ಲಿ ಬರೆದುಕೊಂಡಿದ್ದು, ಈ ರೂಮರ್‌ ಹುಟ್ಟಿಕೊಳ್ಳಲು ಕಾರಣವಾಗಿತ್ತು.

ಇಷ್ಟೆಲ್ಲಾ ಸುದ್ದಿಯಾಗಿದ್ದರು ಕೂಡ ವೈಷ್ಣವಿ ಗೌಡ ಅವರಾಗಲಿ ಹಾಗೂ ಚಂದನ್ ಶೆಟ್ಟಿ ಅವರಾಗಲೀ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಫೇಸ್‌ಬುಕ್‌ ಲೈವ್‌ನಲ್ಲಿ ಕಾಣಿಸಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ ಸುದ್ದಿ ಸುಳ್ಳು ಎಂಬುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

“ಇದೆಲ್ಲಾ ಸುಳ್ಳು ನಾನು ಹಾಗೂ ಚಂದನ್ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ. ಈ ಕುರಿತು ಫೇಸ್‌ಬುಕ್‌ನಲ್ಲಿಯೂ ಬರೆದುಕೊಂಡಿಲ್ಲ ಎಂದು ಹೇಳಿದರು ಇದರ ಜೊತೆಗೆ ನನ್ನದು ಫೇಸ್‌ಬುಕ್‌ ಅಕೌಂಟ್‌ಯಿಲ್ಲ. ಕೇವಲ ಇನ್‌ಸ್ಟಾಗ್ರಾಂನಲ್ಲಿ ಮಾತ್ರ ಇದೆ” ಅಂತ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ ಸುಳ್ಳು ರೂಮರ್ ಅಂತ ಕ್ಲಾರಿಫಿಕೇಶನ್ ನೀಡಿ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಹಾಗು ಓದಿ.. ಅತಿ ಹೆಚ್ಚು ಓಟು ಗಳಿಸಿದ್ದ ಜೆಕೆ ಆದರೂ ಚಂದನ್ ಯಾಕೆ ಗೆದ್ದರು ಗೊತ್ತಾ?