‘ಬಿಗ್ ಬಾಸ್”ವಾರದ ಕತೆ ಕಿಚ್ಚನ ಜೊತೆ’ ಮುಂದಿನ ವಾರಕ್ಕೆ ಮುಕ್ತಾಯವಾಗಲಿದೆ

0
768

ಶನಿವಾರ ಬಂತೂಂದ್ರೆ ‘ಬಿಗ್ ಬಾಸ್’ ಮನೆಯಲ್ಲಿ ಟೆನ್ಷನ್ ಶುರುವಾಗುತ್ತೆ. ಯಾಕಂದ್ರೆ, ಸ್ಪರ್ಧಿಗಳು ಮನೆಯಿಂದ ಹೊರ ಹೋಗುವುದೇ ಶನಿವಾರ.

ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ವಾರದ ಕಿಚ್ಚಿನ ಕಥೆಯನ್ನಿಟ್ಟುಕೊಂಡು ಪಂಚಾಯತಿ ನಡೆಸಿದ ಬಳಿಕ ಎಲಿಮಿನೇಟ್ ಆಗುವ ಸ್ಪರ್ಧಿ ಯಾರು ಎಂದು ಘೋಷಿಸುತ್ತಾರೆ. ಆದರೆ ‘ಬಿಗ್ ಬಾಸ್’ ಮುಂದಿನ ವಾರಕ್ಕೆ ಮುಕ್ತಾಯವಾಗಲಿದೆ. 106 ನೇ ದಿನಕ್ಕೆ ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿತ್ತು.

ಮುಂದಿನ ವಾರಕ್ಕೆ ಮುಕ್ತಾಯವಾಗಲಿದೆ ಅದರಿಂದ  ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಸುದೀಪ್ ಹೇಳಿದ್ದರು ಅದು ಮನೆಯಲ್ಲಿರುವವರಿಗೆ ಶಾಕ್ ಕೊಡಲು ಎಂದು ಕೊನೆಯಲ್ಲಿ ಸುದೀಪ್ ತಿಳಿಸಿದರು, ನಂತರ ಬಿಗ್ ಬಾಸ್ ಮನೆಯಿಂದ ಯಾರೂ ಈ ವಾರ  ಹೊರಗೆ ಹೋಗಿಲ್ಲ.

ಭುವನ್ ಗೆ ನೀಡಿದ್ದ ಅಧಿಕಾರದಿಂದ ಫಿನಾಲೆ ವಾರಕ್ಕೆ ಮೋಹನ್ ಎಂಟ್ರಿ ಪಡೆದಿದ್ದರು. ಕ್ಯಾಪ್ಟನ್ ಆಗಿದ್ದ ಮಾಳವಿಕಾ ಮತ್ತು ನಾಮಿನೇಷನ್ ಆಗದ ಕಾರಣ ರೇಖಾ ಅವರು ಮನೆಯಲ್ಲಿ ಉಳಿಯಲಿದ್ದಾರೆ ಎನ್ನಲಾಗಿತ್ತಾದರೂ, ಸುದೀಪ್, ‘ಬಿಗ್ ಬಾಸ್’ ಅಭಿನಂದಿಸದ ಕಾರಣ, ಮೋಹನ್ ಹೊರತಾಗಿ ಎಲ್ಲರೂ ಹೊರ ಹೋಗಬಹುದಾಗಿದೆ ಎಂದು ಹೇಳಿದ್ದಾರೆ.

ಮನೆಯಲ್ಲಿದ್ದ ಕೀರ್ತಿ, ಪ್ರಥಮ್, ಶಾಲಿನಿ, ರೇಖಾ ಹಾಗೂ ಮಾಳವಿಕಾ ಅವರಲ್ಲಿ ಯಾರು ಹೊರ ಹೋಗಲಿದ್ದಾರೆ ಎಂದು ಸುದೀಪ್ ಕೇಳಿದ್ದಾರೆ.

ಇನ್ನು ಯಾರು ಗೆಲ್ಲಬೇಕೆಂದು ಸುದೀಪ್ ಪ್ರಶ್ನಿಸಿದಾಗ, ಪ್ರಥಮ್, ರೇಖಾ ಹೆಸರನ್ನು ಹೇಳಿದರೆ, ರೇಖಾ, ಪ್ರಥಮ್ ಗೆಲ್ಲಬೇಕೆಂದಿದ್ದಾರೆ.

ಕೀರ್ತಿ ಮೋಹನ್ ಹೆಸರನ್ನು ಹೇಳಿದ್ದಾರೆ. ಉಳಿದಂತೆ ಮಾಳವಿಕಾ, ಶಾಲಿನಿ, ಮೋಹನ್ ತಾವೇ ಗೆಲ್ಲಬೇಕೆಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಶನಿವಾರದ ಸಂಚಿಕೆ ‘ವಾರದ ಕತೆ ಕಿಚ್ಚನ ಜೊತೆ’ಯಲ್ಲಿ ಸುದೀಪ್, ಪಂಚಾಯಿತಿ ನಡೆಸಿ, ಇಷ್ಟು ದಿನಗಳ ಕಾಲ ಮನೆಯಲ್ಲಿದ್ದ ಸದಸ್ಯರ ಸರಿ, ತಪ್ಪುಗಳ ಕುರಿತಾಗಿ ತಿಳಿಸಿದ್ದಾರೆ. ಸದಸ್ಯರಿಂದಲೂ ಅಭಿಪ್ರಾಯ ಪಡೆದುಕೊಂಡಿದ್ದಾರೆ.

ರೇಖಾ, ಮಾಳವಿಕಾ ಬಳಿಕ ಪ್ರಥಮ್ ಸೇಫ್ ಆಗಿದ್ದು, ಕೀರ್ತಿ ಮತ್ತು ಶಾಲಿನಿ ಅವರಲ್ಲಿ ಯಾರು ಹೋಗಲಿದ್ದಾರೆ ಎಂದು ಸುದೀಪ್ ಪ್ರಶ್ನಿಸಿದ್ದಾರೆ.

ಇಬ್ಬರೂ ತಾವೇ ಹೊರ ಹೋಗುತ್ತೇವೆ ಎಂದು ಹೇಳಿದ್ದಾರೆ. ಅವರಲ್ಲಿ ಶಾಲಿನಿ ಸೇಫ್ ಆಗಿದ್ದಾರೆ ಎಂದ ಸುದೀಪ್, ಕೊನೆಗೆ ಕೀರ್ತಿ ಕೂಡ ಸೇಫ್ ಆಗಿದ್ದಾರೆ ಎಂದಿದ್ದು, ವಾರದ ಮಧ್ಯದಲ್ಲಿ ಒಬ್ಬರು ಹೊರ ಹೋಗಲಿದ್ದಾರೆ ಎಂದು ತಿಳಿಸಿದ್ದು, ಸದಸ್ಯರಿಗೆ ಮಾತ್ರವಲ್ಲ, ವೀಕ್ಷಕರಿಗೂ ಕುತೂಹಲ ಮೂಡಿಸಿದೆ.