ಬಿಗ್ಗ್ ಬಾಸ್ ಮನೇಲಿ ಕಂಡ ದೆವ್ವದ ಹಿಂದಿನ ಕಥೆ ಏನು ಗೊತ್ತಾ??

0
3428

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಬಿಗ್‍ಬಾಸ್ ನಲ್ಲಿ ಪ್ರತಿಯೊಂದು ಹೆಜ್ಜೆ ಕೂಡ ರಿಮೋಟ್ ಕಂಟ್ರೋಲ್ ನಲ್ಲಿ ಇರಿತ್ತದೆ. ಬಾಗಿಲು ತೆರೆಯುವುದು, ಗೀಸರ್ ಆನ್ ಮಾಡುವುದು, ಊಟಮಾಡುವುದು , ಬ್ರೆಷ್ ಎಲ್ಲವೂ. ಇದೆಲ್ಲವನ್ನೂ ಸೆರೆ ಹಿಡಿಯುವುದಕ್ಕೆ 700 ಜನ ಕೆಲಸ ಮಾಡುತ್ತಿದ್ದಾರೆ. ಸ್ಪರ್ಧಿಗಳು ಮಲಗಿದ್ದಾಗಲೂ ಶೂಟಿಂಗ್ ನಡೆಯುತ್ತಿತ್ತು. ಯಾವಾಗ ಏನು ಬೇಕಾದರೂ ಆಗಬಹುದು ಅಲ್ಲವೆ? ಅದೇ ವಿಚಾರವಾಗಿ ಈಗ ಕನ್ನಡದ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ವಿಚಿತ್ರ ಅನುಭವವಾಗಿದೆ.

ಬಾತ್ ರೂಮನ ಕನ್ನಡಿಯೊಳಗೆ ಕಂಡಿತ್ತು ದೆವ್ವ!

ಶನಿವಾರದಂದು ಶಾಲಿನಿ ಹಾಗೂ ಶೀತಲ್ ಎಲಿಮಿನೇಟ್ ಆದ ನಂತರದ ಘಟನೆ. ಅಂದು ಸಂಜನಾ ಹಾಗೂ ಕಾರುಣ್ಯ ಫೇಸ್‍ವಾಶ್ ಮಾಡುತ್ತಿದ್ದಾಗ ಕನ್ನಡಿಯಲ್ಲಿ ವಿಚಿತ್ರ ಆಕೃತಿ ನೋಡಿ ಕಿರುಚಾಡಿದ್ದಾರೆ. ಇವರ ಕಿರುಚಾಟ ಕೇಳಿ ಇತರೆ ಸ್ಪರ್ಧಿಗಳು ಅಲ್ಲಿಗೆ ಬಂದಾಗ, ನನಗೆ ಸೊಳ್ಳೆ ಕಚ್ಚಿದೆ ಎಂದು ನೋಡಿಕೊಳ್ತಿದ್ದೆ. ಆಗ ಯಾರೋ ಚಲಿಸಿದಂತಾಯ್ತು. ಬಿಳಿ ಬಣ್ಣದ ಬಟ್ಟೆಯೊಂದಿಗೆ ರಕ್ತವನ್ನ ನೋಡಿದ್ವಿ ಅಂತ ಕಾರುಣ್ಯಾ ಇತರೆ ಸ್ಪರ್ಧಿಗಳಿಗೆ ಹೇಳಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಕಾರುಣ್ಯಾ ಮತ್ತು ಸಂಜನಾ ಕಿರುಚಿಕೊಂಡು ಕೆಳಕ್ಕೆ ಬಿದ್ದು ಒದ್ದಾಡಿದ್ದಾರೆ. ಇದರಿಂದ ಇತರೆ ಸ್ಪರ್ಧಿಗಳು ಕೂಡ ಆತಂಕಕ್ಕೀಡಾಗಿದ್ದಾರೆ.

ಮೊದಲು ಬಿಗ್ ಬಾಸ್ ಶೋಗಳು ಪುಣೆಯ ಲೋನಾವಾಲದಲ್ಲಿ ನಡೆಯುತ್ತಿತ್ತು. ಕಳೆದ ವರ್ಷದಿಂದ ಕನ್ನಡ ಬಿಗ್ ಬಾಸ್ ಶೋ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಕಳೆದ ವರ್ಷದ ಮನೆಯನ್ನು ಸಂಪೂರ್ಣವಾಗಿ ಒಡೆದು ಹೊಸದಾಗಿ ನಿರ್ಮಿಸಲಾಗಿದೆ. 20 ಸಾವಿರ ಚದುರ ಅಡಿ ವಿಸ್ತೀರ್ಣದ ಜಾಗದಲ್ಲಿ ಈ ಮನೆಯನ್ನು ಒಟ್ಟು 1.3 ಕೋಟಿ ರೂ. ವೆಚ್ಚದಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ. ಹೊಸ ಮನೆಯನ್ನು ಶ್ಯಾಮ್ ಬಾಟಿಯಾ ಅವರು ವಿನ್ಯಾಸಗೊಳಿಸಿದ್ದಾರೆ. ಡ್ಯಾನ್ಸ್ ಇಂಡಿಯಾ, ಸರಿಗಮಪ ಸೇರಿದಂತೆ ಹಲವು ರಿಯಾಲಿಟಿ ಶೋಗಳ ವಿನ್ಯಾಸವನ್ನು ಶ್ಯಾಮ್ ಬಾಟಿಯಾ ಮಾಡಿದ್ದಾರೆ.

ಒಂಟಿ ಮನೇಲಿ ಸ್ಪರ್ಧಿಗಳ ಬೆನ್ನು ಬಿತ್ತು ‘ಬಿಗ್’ ಭೂತದಿಂದ ಬಚಾವಾಗ್ತಾರಾ ಕಂಟೆಸ್ಟೆಂಟ್ಸ್?