ತಂದೆ-ತಾಯಿ ಅಣ್ಣ-ತಮ್ಮಂದಿರು ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ನೋಡಿದ್ದಿರಾ; ಇಲ್ಲೊಬ್ಬ ಸ್ವಂತ ಹೆಂಡತಿಗೆ ಅವಳ ಪ್ರಿಯಕರನ ಜೊತೆ ಮದುವೆ ಮಾಡಿದ ವಿಷಯ ಕೇಳಿದರೆ ಶಾಕ್ ಆಗ್ತಿರಾ..

0
920

ಸಮಾಜದಲ್ಲಿ ತಂದೆ ಮಗಳಿಗೆ ಮದುವೆ ಮಾಡುವುದು, ಅಣ್ಣ-ತಮ್ಮ ಅಕ್ಕ ತಂಗಿಗೆ ಮದುವೆ ಮಾಡುವುದು ನೋಡಿದ್ದಿರಾ. ಆದರೆ ಗಂಡನೇ ಹೆಂಡತಿಗೆ ಮದುವೆ ಮಾಡಿದ ಘಟನೆ ಮಾನವ ಕುಲದಲ್ಲಿ ಮೊದಲೇ ಅನಿಸುತ್ತೆ. ಇದೆಲ್ಲ ನಡೆದಿರುವುದು ಗಂಡ ಹೆಂಡತಿ ಎನ್ನುವ ಬಾಂದ್ಯವ್ಯ ಮರೆತು ಗಂಡ ಜೀವಂತವಿರುವಾಗ ಹೆಂಡತಿ ಮತ್ತೊಬನ ಪ್ರೀತಿಯಲ್ಲಿ ಬಿದ್ದು ಗಂಡನನ್ನು ಮರೆಯುವ ಸಂಧರ್ಭದಲ್ಲಿ ನಡೆದ ಮದುವೆ ಎನ್ನಬಹುದು.

ಹೌದು ಸಮಾಜದಲ್ಲಿ “ಮದುವೆಗಿಂತ ಮುಂಚೆ ಮಾಡಿದ ಪ್ರೀತಿಗೆ ಪ್ರೀತಿ ಎನ್ನುತ್ತಾರೆ” ಆದರೆ ಮದುವೆಯ ನಂತರ ಮಾಡುವ ಪ್ರೀತಿಗೆ ಅನೈತಿಕ ಸಂಬಂಧವೆಂದು ಕರೆಯುತ್ತಾರೆ. ಈ ಕಳ್ಳ ಸಂಬಂಧಕ್ಕೆ ಈಗೀಗ ಹಲವು ಕೊಲೆಗಳು ಹಲ್ಲೆಗಳು ನಡೆದು ಅದೆಷ್ಟೋ ಸಂಸಾರಗಳು ಬೀದಿಗೆ ಬಂದಿವೆ, ಇನ್ನೂ ಅದೆಷ್ಟೋ ಗಂಡದರು ಹೆಂಡತಿಯ ಅಕ್ರಮ ಸಂಬಂಧ ಸಹಿಸದೆ ಕೊಲೆ ಮಾಡಿ ಜೈಲು ಸೇರಿದ್ದಾರೆ. ಅದರಂತೆಯೇ ಅದೆಷ್ಟೋ ಮಹಿಳೆಯರು ತಮ್ಮ ಅನೈತಿಕ ಸಂಬಂಧಕ್ಕೆ ಗಂಡ ತೊಡಕ್ಕಾದ ಎಂದು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾರೆ. ಇವೆಲ್ಲ ಪ್ರಸುತ್ತವಾಗಿ ಹೆಚ್ಚಾನು ಹೆಚ್ಚು ನಡೆಯುವ ಘಟನೆಗಳಾಗಿವೆ.

ಇದೇ ರೀತಿಯಲ್ಲಿ ನಡೆದ ಅಕ್ರಮ ಸಂಬಂಧಕ್ಕೆ ಇಲ್ಲೊಬ್ಬ ಗಂಡ ಮಾಡಿದ್ದು ಹೆಂಡತಿ ಮತ್ತು ಅವಳ ಪ್ರಿಯಕರ ಮರ್ಡರ್ ಅಲ್ಲ! ಅದು ಹೆಂಡತಿಯ ಅದ್ದೂರಿ ಮದುವೆ, ಜೊತೆಗೆ ಉಡುಗರೆಯಾಗಿ ತನ್ನ ಮಗುವನ್ನೇ ನೀಡಿದ್ದಾನೆ. ಇದೆಲ್ಲ ನಂಬಲು ಬಲು ಕಷ್ಟವಾದರೂ ಅಸಲಿಗೆ ನಂಬಲೇ ಬೇಕಾದ ವಿಚಾರವಾಗಿದೆ.

ಏನಿದು ಪತಿಯಿಂದ ಪತ್ನಿ ಮದುವೆ:

ಬಿಹಾರದ ಭಗಲ್ಪುರ್ ಜಿಲ್ಲೆಯಲ್ಲಿ ತನ್ನ ಪತ್ನಿ ಸಂತೋಷದಿಂದ ಇರಬೇಕು ಎಂದು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಘಟನೆ ನಡೆದಿದೆ. ಅಷ್ಟೇ ಅಲ್ಲದೇ ತಮ್ಮಿಬ್ಬರ ದಾಂಪತ್ಯದಲ್ಲಿ ಹುಟ್ಟಿದ ಎರಡೂವರೆ ವರ್ಷದ ಮಗುವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೆಲ್ಲವೂ ಭಾಗಲ್ಪುರದ ಬಳಿಯ ಸೋಲೇಪುರ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಅದರಂತೆ ಇವರು ನಾಲ್ಕು ವರ್ಷಗಳ ಹಿಂದೆ ಜಾರ್ಖಂಡನ ಗೊಡ್ಡಾ ಜಿಲ್ಲೆಯ ಗ್ರಾಮವೊಂದರ ಯುವತಿಯನ್ನು ಮದುವೆಯಾಗಿದ್ದನು. ದಂಪತಿಗೆ ಒಂದು ಮಗುವಿತ್ತು. ಕುಟುಂಬ ಸಮೇತರಾಗಿ ಪಟ್ಟಣದ ಸೋಲೇಪುರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಹೀಗೆ ಸುಖಕರವಾದ ಕುಟುಂಬದಲ್ಲಿ ಒಂದು ಮಗು ಕೂಡ ಆಗಿತ್ತು. ಕೆಲ ದಿನಗಳ ಬಳಿಕ ಆತ ಪ್ರಕರಣವೊಂದರಲ್ಲಿ ಸಿಲುಕಿ ಜೈಲಿಗೆ ಹೋಗಿದ್ದನು. ಈ ಸಂದರ್ಭದಲ್ಲಿ ಆತನ ಪತ್ನಿ ಮತ್ತು ಮನೆ ಮಾಲೀಕನ ಮಗ ಮೊನು ಕುಮಾರ್ ಸಿಂಗ್ ನಡುವೆ ಸ್ನೇಹ ಬೆಳೆಯಿತು. ಇಬ್ಬರೂ ಆಗಾಗ ಭೇಟಿಯಾಗಿ ಮಾತನಾಡಲು ಶುರುಮಾಡಿದ್ದರು. ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಬಳಿಕ ಇಬ್ಬರು ಒಟ್ಟಿಗೆ ಜೀವಿಸಲು ನಿರ್ಧಾರ ಮಾಡಿದ್ದರು. ಇತ್ತ ಮಹಿಳೆಯ ಪತಿ ಜೈಲಿನಿಂದ ಮನೆಗೆ ಹಿಂದಿರುಗಿದ್ದಾನೆ. ಆಗ ತನ್ನ ಪತ್ನಿ ಮತ್ತು ಮೊನು ಕುಮಾರ್ ಸಿಂಗ್ ನಡುವಿನ ಸಂಬಂಧ ತಿಳಿದು ಆಘಾತಕ್ಕೊಳಗಾಗಿದ್ದನು.

Representational Image

ಈ ವಿಷಯವಾಗಿ ಹಲವು ಬಾರಿ ಹೆಂಡತಿಯನ್ನು ಮನವರಿಕೆ ಮಾಡಲು ಯತ್ನಿಸಿದಾನೆ. ಆದರೆ ಆಕೆ ತನ್ನ ಪ್ರಿಯಕರನ ಜೊತೆಗೆ ಜೀವಿಸಲು ನಿರ್ಧಾರ ಮಾಡಿದ್ದಳು. ಆದರಿಂದ ಗಂಡನ ಮಾತಿಗೆ ಬೆಲೆ ಕೊಡದೆ ಪ್ರಿಯಕರನ ಜೊತೇನೆ ಇರಲು ಬಯಸಿದಳು ಇದನ್ನು ಮನಗಂಡ ಪತಿ ಬೇರೆಯವರು ಮಾಡುವ ರೀತಿಯಲ್ಲಿ ಮರ್ಡರ್ ಅಥವಾ ಹಲ್ಲೆ ಮಾಡದೆ. ಎರಡು ಮನೆಯರನ್ನು ಒಪ್ಪಿಸಿ ಪತಿ ಗ್ರಾಮ ನ್ಯಾಯಾಲಯದಲ್ಲಿ ಇಬ್ಬರು ಕುಟುಂಬದ ಒಪ್ಪಿಗೆಯೊಂದಿಗೆ ಸ್ಥಳೀಯ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮೊನು ಕುಮಾರ್ ಸಿಂಗ್ ಜೊತೆ ತನ್ನ ಪತ್ನಿಯ ಮದುವೆ ಮಾಡಿಸಿ ತಮಗೆ ಹುಟ್ಟಿರುವ ಮಗುವನ್ನು ಕೊಡುಗೆಯಾಗಿ ನೀಡಿದ್ದಾನೆ. ಇದು ಗಂಡನ ದೊಡ್ಡ ಮನಸ್ಥಿತಿವೂ ಇಲ್ಲ ಹೆಂಡತಿಯ ಮೇಲಿನ ಪ್ರೀತಿಯೋ ಗೊತ್ತಿಲ್ಲ ಆದರೆ ಅಕ್ರಮ ಸಂಬಂಧಗಳಿಗೆ ಕೊಲೆಕ್ಕಿಂತ ದೊಡ್ಡ ಎಚ್ಚರಿಕೆಯಾಗಿದೆ.

Also read: ಶ್ರೀ ಲಂಕಾದಲ್ಲಿ ಬಾಂಬ್ ಸ್ಪೋಟ, ಮಂಡ್ಯದಲ್ಲಿ ಹೈ ಅಲರ್ಟ್ ಘೋಷಣೆ; ಕೊಲಂಬೋದಲ್ಲಿ ಬ್ಲಾಸ್ಟ್ ಆದ ಬಾಂಬ್-ಗಳಿಗೂ ಮಂಡ್ಯಕ್ಕೂ ಏನು ಸಂಬಂಧ?? ಈ ಸ್ಟೋರಿ ಓದಿ..