ಬೈಕ್ ಲೈಟ್ ಒಡೆದ ಬಳಿಕವೂ ಮಾನವೀಯತೆ ಮೆರೆದ ಸವಾರ

0
3331

ಇಂದಿನ ಸ್ವಾರ್ಥ ಯುಗದಲ್ಲಿ ಮಾನವೀಯತೆ ಕಾಣಸಿಗುವುದು ಅತ್ಯಂತ ವಿರಳ. ಏನಾದರೊಂದು ತಪ್ಪು ಮಾಡಿದರೂ ಕ್ಷಣ ಮಾತ್ರದಲ್ಲಿ ಕಾಲ್ಕಿತ್ತುವ ಜನರು ನಮ್ಮ ನಡುವೆಯೇ ಇದ್ದಾರೆ. ಹಾಗಿರಬೇಕೆಂದರೆ ಸಣ್ಣ ಪುಟ್ಟ ವಾಹನ ಅಪಘಾತಗಳು ಸಂಭವಿಸಿದ್ದಲ್ಲಿ ಯಾರೂ ಕ್ಯಾರೇ ಎನ್ನುತ್ತಿಲ್ಲ.

ಇಕ್ಕಟ್ಟಾದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ವೇಳೆ ಗಾಡಿಗೆ ಗೆರೆ, ಗೀಟು ಬೀಳುವುದು ಅಥವಾ ಇಂಡಿಕೇಟರ್, ಬ್ರೇಕ್ ಲೈಟ್ ಒಡೆಯುವುದು ಸಾಮಾನ್ಯ. ಕನಿಷ್ಠ ಪಕ್ಷ ತಪ್ಪು ಮಾಡಿದವರು ಕ್ಷಮೆ ಕೂಡಾ ಕೇಳದೇ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಹಾಗಿರಬೇಕೆಂದರೆ ಇವೆಲ್ಲದಕ್ಕೂ ವಿರುದ್ಧವಾಗಿ ಚೆನ್ನೈನಲ್ಲಿ ಬೈಕ್ ಬ್ರೇಕ್ ಒಡೆದ ಬಳಿಕವೂ ಸವಾರ ಮಾನವೀಯತೆ ಮೆರೆದ ಘಟನೆ ನಡೆದಿದೆ.

ಹೆಚ್ಚಿನ ವಿವರ

  • ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆ ಹೊರಂಗಣದಲ್ಲಿ ಪಾರ್ಕ್ ಮಾಡಲಾಗಿದ್ದ ರಾಯಲ್ ಎನ್ ಫೀಲ್ಡ್ ಗಾಡಿಯ ಟೈಲ್ ಲೈಟ್ ಒಡೆದಿರುವ ಪರಿಸ್ಥಿತಿಯಲ್ಲಿ ಪತ್ತೆಯಾಗಿತ್ತು.
  • ಮಾಲಿಕ ಬಂದು ಪರೀಶೀಲಿಸಿದಾಗ ಬ್ರೇಕ್ ಲೈಟ್ ಒಡೆದಿರುವುದನ್ನು ಕಂಡು ಕುಪಿತಗೂಂಡಿದ್ದನು. ಆದರೆ ಕೆಲವೇ ಕ್ಷಣಗಳಲ್ಲಿ ಆತನ ಕೋಪಕ್ಕೆ ಶಮನವುಂಟಾಗಿತ್ತು.
  • ಯಾಕೆಂದರೆ ಬೈಕ್ ಹೆಲ್ಮೆಟ್ ಬಳಿಯೊಂದು ಕಾಗದವನ್ನಿಡಲಾಗಿದ್ದು, ಅದರಲ್ಲಿ ಅಪರಿಚಿತನ ಸಂದೇಶವಿತ್ತು. ಬರೆದಿಟ್ಟ ಕಾಗದದಲ್ಲಿ ಬೈಕ್ ಹಾನಿಗೆ ಕ್ಷಮೆಯಾಚಿಸಲಾಗಿದ್ದು, ಜೊತೆಗೆ ರಿಪೇರಿ ಕೆಲಸಕ್ಕಾಗಿ ಎರಡು ನೂರು ರುಪಾಯಿ ನೋಟುಗಳನ್ನಿಡಲಾಗಿತ್ತು.
  • ತಪ್ಪು ಮಾಡಿದ ಬಳಿಕವೂ ಅಪರಿಚಿತ ತೋರಿರುವ ಮಾನವೀಯತೆಯಿಂದ ಅತ್ಯಂತ ಖುಷಿಗೊಂಡಿರುವ ಮಾಲಿಕ, ಬಳಿಕ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
  • ಅಜಾಗರೂಕತೆ ಮತ್ತು ಕಾಳಜಿ ರಹಿತ ಸಮಾಜದಲ್ಲೂ ಮಾನವೀಯತೆ ಈಗಲೂ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಈ ಘಟನೆಯೊಂದು ಉದಾಹರಣೆಯಾಗಿದೆ ಎಂದು ಮಾಲಿಕ ತನ್ನ ಕೃತಜ್ಞತಾ ಹೇಳಿಕೆಯಲ್ಲಿ ತಿಳಿಸಿದ್ದಾನೆ.
  • ಅಲ್ಲದೆ ಈ ಸಂದೇಶ ಅಪರಿಚಿತ ವ್ಯಕ್ತಿಗೆ ತಲುಪುವ ವರೆಗೂ ಶೇರ್ ಮಾಡುವಂತೆ ಬೇಡಿಕೊಂಡಿದ್ದು, ಒಳ್ಳೆಯ
  • ಮನುಷ್ಯನಿಗೆ ಧನ್ಯವಾದ ಹೇಳಲು ಬಯಸುವಾಗಿ ತಿಳಿಸಿದ್ದಾರೆ. ಮಾಲಿಕ ಬಂದು ಪರೀಶೀಲಿಸಿದಾಗ ಬ್ರೇಕ್ ಲೈಟ್ ಒಡೆದಿರುವುದನ್ನು ಕಂಡು ಕುಪಿತಗೂಂಡಿದ್ದನು. ಆದರೆ ಕೆಲವೇ ಕ್ಷಣಗಳಲ್ಲಿ ಆತನ ಕೋಪಕ್ಕೆ ಶಮನವುಂಟಾಗಿತ್ತು.