ಗೋಧ್ರಾ ಗಲಭೆ ಸಂತ್ರಸ್ತೆ ಬಿಲ್ಕಿಸ್‌ ಬಾನೊಗೆ 50 ಲಕ್ಷ ರೂ. ಸರ್ಕಾರಿ ನೌಕರಿ, ಮನೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಚಾಟಿ.!

0
232

ದೇಶದ ಗಮನ ಸೆಳೆದ ಗೋಧ್ರಾ ಗಲಭೆ ಕುರಿತು ಸುಪ್ರಿಂ ಮಹತ್ವದ ಆದೇಶ ಹೊರಡಿಸಿದ್ದು, ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾನೊ ಬಿಲ್ಕಿಸ್‌ ಅವರಿಗೆ ಎರಡು ವಾರದಲ್ಲಿ 50 ಲಕ್ಷ ರೂಪಾಯಿ ಪರಿಹಾರ, ಸರ್ಕಾರಿ ನೌಕರಿ ಹಾಗೂ ಮನೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇಂದು ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿದೆ. ಗೋಧ್ರಾ ಹತ್ಯಾಕಾಂಡದಲ್ಲಿ ಬಿಲ್ಕೀಸ್ ಬಾನೋ ಮೇಲೆ 22 ಬಾರಿ ಅತ್ಯಾಚಾರ ನಡೆದಿತ್ತು, ಅಲ್ಲದೆ, ಆಕೆಯ 3 ವರ್ಷದ ಮಗಳನ್ನು ಹೊಡೆದು ಕೊಲ್ಲಲಾಗಿತ್ತು.

Also read: ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಅಭಿಯಾನವಲ್ಲ, ಪ್ಲಾಸ್ಟಿಕ್ ನಿಷೇಧ ಕುರಿತು ಗೊಂದಲದಲ್ಲಿದ್ದ ದೇಶದ ಜನರಿಗೆ ಪ್ರಧಾನಿ ಮೋದಿ ಸ್ಪಷ್ಟನೆ.!

ಏನಿದು ಗೋಧ್ರಾ ಗಲಭೆ?

2002ರ ಮಾ.3ರಂದು ಬಿಲ್ಕಿಸ್‌ ಬಾನೊ ಕುಟುಂಬದ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಆಕೆಯ ಕುಟುಂಬದ 14 ಸದಸ್ಯರನ್ನು ಹತ್ಯೆಗೈಯ್ಯಲಾಗಿತ್ತು. ಹತ್ಯೆಗೀಡಾದವರಲ್ಲಿ ಬಿಲ್ಕಿಸ್‌ ಬಾನೋರ ಮೂರು ವರ್ಷದ ಪುತ್ರಿ ಸಲೇಹ ಕೂಡ ಸೇರಿದ್ದಳು. ಆಕೆಯ ತಲೆಯನ್ನು ದುಷ್ಕರ್ಮಿಗಳು ಬಂಡೆಯೊಂದಕ್ಕೆ ಜಜ್ಜಿದ್ದರು. ಆ ಸಂದರ್ಭ ಐದು ತಿಂಗಳು ಗರ್ಭಿಣಿಯಾಗಿದ್ದ ಬಿಲ್ಕಿಸ್‌ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಆಕೆ ಸತ್ತಿದ್ದಾಳೆಂದು ಭಾವಿಸಿ ದುಷ್ಕರ್ಮಿಗಳು ಅಲ್ಲಿಂದ ತೆರಳಿದ್ದರು. ಆಕೆಯ ಮೇಲೆ ಅತ್ಯಾಚಾರಗೈದ 11 ಮಂದಿಯನ್ನು 2008ರಲ್ಲಿ ತಪ್ಪಿತಸ್ಥರೆಂದು ಘೋಷಿಸಿದ ಬಾಂಬೆ ಹೈಕೋರ್ಟ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

Also read: ಕೇಂದ್ರದ ಅಧೀನ ಸಂಸ್ಥೆ ‘ಅಂಚೆ ಬ್ಯಾಂಕ್-ಗಳಲ್ಲಿ ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ – ಹಿಂದಿ ಮಾತ್ರ ಹಾಗಾದ್ರೆ ಕನ್ನಡಕ್ಕೆ ಇಲ್ವಾ ಮರ್ಯಾದೆ??

ಗೋಧ್ರಾ ಗಲಭೆ ಸಂತ್ರಸ್ತೆಗೆ 50 ಲಕ್ಷ ಪರಿಹಾರ?

ಹೌದು ಗೋಧ್ರಾ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದುಕೊಂಡ ಬಿಲ್ಕಿಸ್‌ ಬಾನೊ ಅಂದಿನಿಂದ ಅಲೆಮಾರಿ ಜೀವನ ನಡೆಸುತ್ತಿದ್ದು, ಅವರಿಗೆ ವಸತಿ ಹಾಗೂ ಸರ್ಕಾರಿ ಉದ್ಯೋಗ ಒದಗಿಸುವಂತೆ ಮತ್ತು 50 ಲಕ್ಷ ರೂ. ಪರಿಹಾರ ನೀಡುವಂತೆ ಕಳೆದ ಏಪ್ರಿಲ್ 23ರಂದು ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಇದುವರೆಗೂ ಪರಿಹಾರ ನೀಡದ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಎರಡು ವಾರಗಳಲ್ಲಿ ಪರಿಹಾರ, ಮನೆ ಮತ್ತು ನೌಕರಿ ನೀಡುವಂತೆ ಸೂಚಿಸಿದೆ.

ಈ ಮುನ್ನ ಗುಜರಾತ್‌ ಸರ್ಕಾರ ತಮಗೆ ನೀಡಲು ಮುಂದಾಗಿದ್ದ 5 ಲಕ್ಷ ರೂ. ಪರಿಹಾರವನ್ನು ಬಿಲ್ಕಿಸ್‌ ಬಾನೊ ತಿರಸ್ಕರಿಸಿದ್ದರು. ತಮಗೆ ಉತ್ತಮ ಮೊತ್ತದ ಪರಿಹಾರ ದೊರೆಯಬೇಕು ಹಾಗೂ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ ಹಾಗೂ ಬಾಂಬೆ ಹೈಕೋರ್ಟಿನಿಂದ ತಪ್ಪಿತಸ್ಥರೆಂದು ತೀರ್ಮಾನಿಸಲ್ಪಟ್ಟ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಆದೇಶಿಸಬೇಕೆಂದು ಕೋರಿ ಬಾನೊ ಸುಪ್ರೀಂ ಕೋರ್ಟ್‌ ಮೆಟ್ಟಿಲೇರದ್ದರು. ಪ್ರಕರಣ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್ ತಿಂಗಳಲ್ಲೇ ಗೋದ್ರಾ ಹತ್ಯಾಕಾಂಡದ ಸಂತ್ರಸ್ತೆಗೆ 50 ಲಕ್ಷ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

Also read: 2 ವರ್ಷದಿಂದ 12 ವರ್ಷದ ಬಾಲಕಿ ಮೇಲೆ 30 ಮಂದಿಯಿಂದ ನಿರಂತರ ಅತ್ಯಾಚಾರ; ಇದರಲ್ಲಿ ಬಾಲಕಿಯ ತಂದೆಯೇ ಆರೋಪಿ.!

ಆದರೆ, ಈ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಗುಜರಾತ್ ರಾಜ್ಯ ಸರ್ಕಾರ ಮತ್ತೊಮ್ಮೆ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸರ್ಜಿ ಸಲ್ಲಿಸಿತ್ತು. ಇಂದಿನ ವಿಚಾರಣೆಗೆ ಗುಜರಾತ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು. ಸೋಮವಾರದ ವಿಚಾರಣೆ ವೇಳೆ ಏಪ್ರಿಲ್ ತಿಂಗಳ ತನ್ನದೇ ತೀರ್ಪನ್ನು ಮರು ಉಚ್ಚರಿಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, “ಈ ನಿರ್ದಿಷ್ಟ ಪ್ರಕರಣದಲ್ಲಿ ಸತ್ಯ ಸಂಗತಿಗಳು ಮತ್ತು ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಸಂತ್ರಸ್ತೆಗೆ ಸರ್ಕಾರಿ ಉದ್ಯೋಗ ಮತ್ತು 50 ಲಕ್ಷ ಪರಿಹಾರವನ್ನು ಪಾವತಿಸಲು ಆದೇಶಿಸಲಾಗಿದೆ. ನಮ್ಮ ಆದೇಶ ನಿರ್ದಿಷ್ಟ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡಿತ್ತು ಮತ್ತು ಈ ತೀರ್ಪು ಯಾವುದೇ ಪೂರ್ವ ನಿದರ್ಶನವಾದುದಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಎರಡು ವಾರದಲ್ಲಿ ಈ ಪರಿಹಾರನ್ನು ಸಂತ್ರಸ್ತೆಗೆ ನೀಡುವಂತೆಯೂ ಗುಜರಾತ್ ಸರ್ಕಾರವನ್ನೂ ತಾಕೀತು ಮಾಡಿದ್ದಾರೆ.