ಸ್ಪೆಶಲ್ ‘ಆಲೂ ಚಿಕನ್ ಬಿರಿಯಾನಿ’ ಮಾಡಿ ನೋಡಿ..!

0
1929

ರಂಜಾನ್‌ಗಾಗಿ ರುಚಿಯಾದ ಬಿರಿಯಾನಿ ರೆಸಿಪಿ. ಬನ್ನಿ, ಈ ರುಚಿಕರ ಬಿರಿಯಾನಿ ಮಾಡುವುದು ಹೇಗೆ ಎಂಬುದನ್ನು ನೋಡೋಣ

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಮೂವತ್ತು ನಿಮಷಗಳು
ತಯಾರಿಕಾ ಸಮಯ: ನಲವತ್ತೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು

*ಕೋಳಿಮಾಂಸ: ತಾಜಾ, ಐನೂರು ಗ್ರಾಂ
*ಬಾಸ್ಮತಿ ಅಥವ ಗಂಧಸಾಲೆ ಅಕ್ಕಿ : ಅರ್ಧ ಕೇಜಿ (ಇದನ್ನು ಅರ್ಧ ಬೇಯಿಸಿ ಬಸಿದು ಇಡಬೇಕು)
*ಆಲುಗಡ್ಡೆ: ಸುಮಾರು ನಾಲ್ಕರಿಂದ ಐದು, ಮಧ್ಯಮ ಗಾತ್ರ (ಚಿಕ್ಕದಾದ ಚೌಕಾಕಾರದ ತುಂಡುಗಳಾಗಿಸಿದ್ದು)
*ಚೆಕ್ಕೆ: ಒಂದಿಂಚಿನ ಸುಮಾರು ನಾಲ್ಕೈದು ತುಂಡುಗಳು
*ಏಲಕ್ಕಿ: ನಾಲ್ಕಾರು.
*ದಾಲ್ಚಿಚ್ಚಿ ಎಲೆ: ಒಂದು
*ಲವಂಗ: ನಾಲ್ಕಾರು ಕಾಳುಗಳು
*ಕಾಳುಮೆಣಸು: ಸುಮಾರು ಐದರಿಂದ ಆರು
*ಹಸಿಮೆಣಸು: ಎಂಟರಿಂದ ಹತ್ತು
*ಈರುಳ್ಳಿ: ಎರಡು ಕಪ್, ಚಿಕ್ಕದಾಗಿ ಹೆಚ್ಚಿದ್ದು
*ಅರಿಶಿನ ಪುಡಿ – 1/2 ಚಿಕ್ಕ ಚಮಚ
*ಕೆಂಪು ಮೆಣಸಿನ ಪುಡಿ – 1 ಚಿಕ್ಕ ಚಮಚ (ಬ್ಯಾಡಗಿ ಉತ್ತಮ, ಕಾಶ್ಮೀರಿ ಚಿಲ್ಲಿ ಆದರೆ ಎರಡು ಚಿಕ್ಕ ಚಮಚ ಬಳಸಿ)
*ಲಿಂಬೆ ರಸ – 1 ಚಿಕ್ಕ ಚಮಚ
*ಕೊತ್ತಂಬರಿ ಸೊಪ್ಪು – 4 ರಿದ 5 ಎಸಳು
*ಕೇಸರಿ – 1 ಚಿಕ್ಕಚಮಚ (ಅಥವಾ ಕಾಲು ಗ್ರಾಂ ಸಾಕು)
*ಎಣ್ಣೆ: ಅಗತ್ಯಕ್ಕೆ ತಕ್ಕಂತೆ
*ಉಪ್ಪು ರುಚಿಗನುಸಾರ ನಾಲಿಗೆಯ ರುಚಿ ತಣಿಸುವ ವೆಜ್ ಬಿರಿಯಾನಿ!

ತಯಾರಿಕಾ ವಿಧಾನ:

1) ಒಂದು ದಪ್ಪತಳದ ಬಾಣಲೆಯಲ್ಲಿ ಕೊಂಚ ಎಣ್ಣೆ ಬಿಸಿಮಾಡಿ ಇದರಲ್ಲಿ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಇದನ್ನು ಚಿಕ್ಕ ತಟ್ಟೆಯಲ್ಲಿ ಬೇರೆಯಾಗಿ ತೆಗೆದಿಡಿ.
2) ಇದೇ ಬಾಣಲೆಗೆ ಇನ್ನೊಂದಿಷ್ಟು ಎಣ್ಣೆ ಹಾಕಿ ಆಲುಗಡ್ಡೆಯ ತುಂಡುಗಳನ್ನು ಮಧ್ಯಮ ಉರಿಯಲ್ಲಿ ಹುರಿಯಿರಿ. ಇದನ್ನೂ ಇನ್ನೊಂದು ತಟ್ಟೆಯಲ್ಲಿ ಬೇರೆಯಾಗಿ ತೆಗೆದಿಡಿ.
3) ಈಗ ಇನ್ನೊಂದು ದೊಡ್ಡ ಪಾತ್ರೆಯಲ್ಲಿ ಕೋಳಿಮಾಂಸ (ತೊಳೆದ ನೀರು ಪೂರ್ಣವಾಗಿ ಇಳಿದಿರಬೇಕು), ಉಪ್ಪು, ಕೆಂಪುಮೆಣಸಿನ ಪುಡಿ ಲಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ ಸುಮಾರು ಹದಿನೈದು ನಿಮಿಷಗಳ ಕಾಲ ಪಕ್ಕದಲ್ಲಿಡಿ.
4) ಈಗ ಬಿರಿಯಾನಿ ಪ್ರಮಾಣ ಹಿಡಿಸುವಷ್ಟು ದೊಡ್ಡ, ದಪ್ಪತಳದ ಪಾತ್ರೆಯಲ್ಲಿ ಕೊಂಚ ಎಣ್ಣೆ ಬಿಸಿಮಾಡಿ ದಾಲ್ಚಿನ್ನಿ, ಏಲಕ್ಕಿ, ಕಾಳುಮೆಣಸು, ದಾಲ್ಚಿನ್ನಿ ಎಲೆ, ಹಸಿಮೆಣಸು, ಲವಂಗ ಎಲ್ಲವನ್ನೂ ಚೆನ್ನಾಗಿ ತಿರುವುತ್ತಾ ಹುರಿಯಿರಿ.
5) ಇದಕ್ಕೆ ಕೋಳಿಮಾಂಸವನ್ನು ಹಾಕಿ ಮತ್ತಷ್ಟು ತಿರುವಿರಿ.
6) ಈ ಮಾಂಸ ಬೇಯುತ್ತಿರುವ ಹೊತ್ತಿನಲ್ಲಿ ಒಲೆಯ ಇನ್ನೊಂದು ಬದಿಯಲ್ಲಿ ಪ್ರೆಶರ್ ಕುಕ್ಕರ್‌ ಇಟ್ಟು ಇದರಲ್ಲಿ ಅರ್ಧ ಬೆಂದಿದ್ದ ಅಕ್ಕಿಯನ್ನು ಹಾಕಿ.
7) ಈಗ ಇತ್ತಕಡೆಯ ಪಾತ್ರೆಯಲ್ಲಿದ್ದ ಕೋಳಿಮಾಂಸವನ್ನು ಅಕ್ಕಿಯ ಮೇಲೆ ಸುರಿಯಿರಿ.
8) ಪ್ರೆಶರ್ ಕುಕ್ಕರಿನ ಮುಚ್ಚಳ ಮುಚ್ಚಿ ಸುಮಾರು ಮೂರು ಸೀಟಿ ಬರುವವರೆಗೆ ಬೇಯಿಸಿ.
9) ಕುಕ್ಕರ್ ತಣಿಸಿದ ಬಳಿಕ ಮುಚ್ಚಳ ತೆರೆದು ಮೊದಲಿನ ದಪ್ಪತಳದ ಪಾತ್ರೆಗೆ ನಿಧಾನವಾಗಿ ಸುರಿಯಿರಿ. ಇದರ ಮೇಲೆ ಕೇಸರಿಯ ತುಣುಕುಗಳನ್ನು ಸಿಂಪಡಿಸಿ
10) ಇದಕ್ಕೆ ಮೊದಲು ಬೇಯಿಸಿಟ್ಟಿದ್ದ ಈರುಳ್ಳಿ, ಆಲುಗಡ್ಡೆ ಹಾಕಿ ಆವರಿಸುವಂತೆ ಮಾಡಿ. ಮೇಲ್ಭಾಗದಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ ಕೊಂಚ ಹೊತ್ತು ಬಿಗಿಯಾಗಿ ಮುಚ್ಚಳ ಮುಚ್ಚಿಡಿ.

ಬಿಸಿಬಿಸಿಯಾಗಿ ಬಡಿಸಿ, ಮೆಚ್ಚುಗೆಗಳಿಸಿ. ಇದರೊಂದಿಗೆ ಮೊಸರಿನ ರಾಯ್ತಾ ಉತ್ತಮ ಜೊತೆಯಾಗುತ್ತದೆ. ಈ ಬಿರಿಯಾನಿ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ.